ಹಿರಿಯ ವಿದ್ವಾಂಸ ಶೀಲಾಕಾಂತ ಪತ್ತಾರ ಇನ್ನಿಲ್ಲ...

Date: 02-10-2022

Location: ಬೆಂಗಳೂರು


ಹಿರಿಯ ವಿದ್ವಾಂಸ ಶೀಲಾಕಾಂತ ಪತ್ತಾರ ಅವರು ಇಂದು ನಿಧನರಾಗಿದ್ದಾರೆ. ಸಾಹಿತ್ಯ ,ಸಂಸ್ಕೃತಿ -ವಿಷಯದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಅವರು ವಿಶೇಷವಾಗಿ ಬಾದಾಮಿ ಪರಿಸರದ ಇತಿಹಾಸ, ಶಿಲ್ಪದ ಬಗೆಗೆ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು. ಶ್ರೇಷ್ಠ ಇತಿಹಾಸ ತಜ್ಞ ಹಾಗೂ ಶಿಲ್ಪಶಾಸ್ತ್ರದಲ್ಲಿ ಪರಿಣಿತರಾಗಿದ್ದರು.

ಶೀಲಾಕಾಂತ ಪತ್ತಾರ ಹಿನ್ನೆಲೆ: ಶೀಲಾಕಾಂತ ಪತ್ತಾರ ಅವರು ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿಯವರು. 1947ರ ಅಕ್ಟೋಬರ್‌ 7ರಂದು ಜನಿಸಿದ ಅವರು ಎಂಎ, ಡಿ.ಲಿಟ್, ಬಿ.ಎಡ್ ಪದವೀಧರರು. ನಿವೃತ್ತ ಉಪನ್ಯಾಸಕರಾಗಿದ್ದ ಅವರು ಡಾ. ರಾಧಾಕೃಷ್ಣನ್ ಅವರನ್ನು ಕುರಿತ ಜೀವನ ಚರಿತ್ರೆ ಪ್ರಕಟಿಸಿದ್ದರು. ಸಪ್ತಕ, ಕರ್ನಾಟಕದ ಸಾಂಪ್ರದಾಯಿಕ ಶಿಲ್ಪಕಲೆ (ಸಂಶೋಧನೆ) ಗ್ರಂಥಗಳನ್ನು ಪ್ರಕಟಿಸಿದ್ದು, ಅವರ ’ಬಾದಾಮಿ: ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಡಿ.ಲಿಟ್. ದೊರೆತಿದೆ. ಇದು ಸತ್ಯಾನ್ವೇಷಣೆ, ಕೃಷ್ಣಪ್ರಭೆ (ಸಂಪಾದಿತ) ಪ್ರಕಟಿತ ಕೃತಿಗಳು.

ಶೀಲಾಕಾಂತ ಪತ್ತಾರ ಅವರ ಲೇಖಕರ ಪರಿಚಯಕ್ಕಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...