ಹೊಸ ಬಗೆಯ ಬರವಣಿಗೆ ಹಾಗೂ ನಿರೂಪಣೆಯ ‘ಆವರ್ತ’


ದೇಸೀಯ ಭಾಷೆಯ ಬಳಕೆ ಹೆಚ್ಚು ಇಲ್ಲದ ಶಿಷ್ಟ ಭಾಷೆಯ ಸಂತುಲಿತ ಶೈಲಿ ಕಾದಂಬರಿಯ ಆವರಣಕ್ಕೆ ಶೋಭೆ ತಂದಿದೆ.ಇಲ್ಲಿ ಕಾದಂಬರಿಕಾರ್ತಿ 140 ಕ್ಕೂ ಹೆಚ್ಚು ಸ್ತ್ರೀ ಪಾತ್ರಗಳಿವೆ. ಎಂದು ಹೇಳಿದ್ದುದು ನಿಜವೆ. ಸಂಭಾಷಣೆಗಳಲ್ಲಿ ಲವಲವಿಕೆ ಇದೆ. ಇದನ್ನು ಸೃಷ್ಟಿಸುವಾಗ ತನ್ನ ಎಲ್ಲ ಸೃಜನಶೀಲತೆಯ ಅಪಾರ ಸಾಧ್ಯತೆಗಳನ್ನು ನಿರೂಪಣೆಯಲ್ಲಿ ಧಾರೆ ಎರೆದಿದ್ದಾರೆ‌ ಎನ್ನುತ್ತಾರೆ ಲೇಖಕ ಉದಯ್ ಕುಮಾರ್ ಹಬ್ಬು. ಅವರು ಲೇಖಕಿ ಆಶಾ ರಘು ಅವರ 'ಆವರ್ತ' ಕಾದಂಬರಿಯನ್ನು ಕುರಿತು ನೀಡಿರುವ ಪ್ರತಿಕ್ರಿಯೆ ನಿಮ್ಮ ಓದಿಗಾಗಿ..

ಆಶಾ ರಘು ಅವರು ಈ ಅದ್ಭುತ ಕಾದಂಬರಿಯನ್ನು ಕಳಿಸಿದ್ದಾರೆ. ಇದು ಕಾದಂಬರಿಯ ಪ್ರಕಾರದಲ್ಲೆ ಹೊಸ ಬಗೆಯ ಬರವಣಿಗೆ ಹಾಗೂ ನಿರೂಪಣೆ. ಇದನ್ನು ಪೌರಾಣಿಕ ಕಾದಂಬರಿ ಎನ್ನೋಣವೆ? ಯಾವ ಅಷ್ಟಾದಶ ಪುರಾಣ ಕಥೆಗಳ ಆಧಾರವಿಲ್ಲ. ಐತಿಹಾಸಿಕ ಕಾದಂಬರಿ ಎನ್ನೋಣವೆ? ಚರಿತ್ರೆಯ ಯಾವ ಕಾಲ ಘಟ್ಟವನ್ನು ಈ ಕಾದಂಬರಿ ನಿರೂಪಿಸುತ್ತದೆ. ಪೌರಾಣಿಕ ಕಥೆಗಳ ಆವರಣದ ಸೃಷ್ಟಿಯ ಚಪ್ಪರದ ಮೇಲೆ ಕಾದಂಬರಿಕಾರ್ತಿ ನವೀನ ಕಲ್ಪನಾ ಶಕ್ತಿಯ ಬಳ್ಳಿಯನ್ನು ಹಬ್ಬಿಸಿದ್ದಾರೆ‌. ಇಷ್ಟೊಂದು ಅಗಾಧ ಕಲ್ಪನೆಯ ಹಂದರಕ್ಕೆ ಎಷ್ಟೊಂದು ಧಾರಣ ಶಕ್ತಿ ಬೇಕು? ಎಲ್ಲೋ ಒಂದೆಡೆ ಬಾಣಭಟ್ಟನ ಕಾದಂಬರಿ ಕಥಾನಕವನ್ನೊ ಅಥವಾ ಕೆಲವೊಮ್ಮೆ ಮಹಾಭಾರತದ ಆಖ್ಯಾಯಿಕೆಯನ್ನೋ ನೆನಪಿಸಿದಂತೆ ಕಂಡರೂ ಇದು ಕಾದಂಬರಿಕಾರ್ತಿಯ ಅಪಾರ ಶಕ್ತಿಯ ಪ್ರತ್ಯುತ್ಪನ್ನ ಮತಿಯ ಅಪಾರ ಸೃಜನಶೀಲತೆಯ ಅಭಿವ್ಯಕ್ತಿಯಾಗಿದೆ.

ರಾಜ ಮಹಾರಾಜರುಗಳ ಕಥೆ. ಪ್ರತೀಪ ಎಂಬ ಮಹಾರಾಜನ ಆಳ್ವಿಕೆ ಮತ್ತು ಅವನ ಬದುಕಿನಲ್ಲಿ ನಡೆದ ಸ್ಥಿತ್ಯಂತರಗಳು, ಪಲ್ಲಟಗಳು ಹಲವಾರು ಘಟನೆಗಳು, ಅವನ ಬದುಕಿನಲ್ಲಿ ಬಂದು ಹೋಗುವ ರಾಣಿಯರು. ಕಾದಂಬರಿ ಪ್ರಾರಂಭಗೊಳ್ಳುವುದು ರಾಜ ಪ್ರತೀಪ ಯಾವುದೊ ಕಾಡಿನಲ್ಲಿ ನಿಶ್ಶಕ್ತನಾಗಿ, ಕೈಕಾಲುಗಳನ್ನು ಅಲುಗಾಡಿಸಲಾಗದ ಪರಿಸ್ಥಿತಿಯಲ್ಲಿ ತನ್ನ ಹಿಂದಿನ ಬದುಕಿನ ಸ್ಮರಣೆ ಹಂತ ಹಂತವಾಗಿ ಅವನ ಮನಃಪಟಲದಲ್ಲಿ ಮೂಡುತ್ತ ಹೋಗುತ್ತವೆ. ಇದನ್ನು "ಪ್ರಜ್ಞಾಪ್ರವಾಹ ತಂತ್ರ" ಎಂದು ಕರೆಯಲಾಗುತ್ತದೆ. ಈ ತಂತ್ರವು ಕಾದಂಬರಿಯುದ್ದಕ್ಕೂ ಅನುಚಾನವಾಗಿ ನದಿಯಂತೆ ಹರಿಯುತ್ತದೆ‌

ಈ ಕಾದಂಬರಿ ವಿಶಿಷ್ಟ ಕಾದಂಬರಿ ಓದುಗರಿಗೆ ವಿಶಿಷ್ಟ ಆನಂದ ಮತ್ತು ಅನುಭೂತಿಯನ್ನು ನೀಡುತ್ತದೆ. ಕಥೆ ಸಮೃದ್ಧವಾಗಿದೆ, ಕುತೂಹಲಕಾರಿಯಾಗಿದೆ. ಕೆಲವು ಘಟನೆಗಳು ನಹಾಭಾರತದ ಘಟನೆಗಳನ್ನು ನೆನಪಿಸುತ್ತದೆ. ದ್ರೌಪದಿಯ ಸ್ವಯಂವರದಲ್ಲಿ ಅವಳು ದ್ರೌಪದಿ ಅರ್ಜುನನ ಕೊರಳಿಗೆ ಮಾಲೆ ಹಾಕಿದಾಗ ಉಳಿದ ರಾಜಕುಮಾರರು ದಂಗೆ ಎದ್ದಂತೆ ಇಲ್ಲೂ ದಂಗೆ ಏಳುತ್ತಾರೆ‌. ರಾಜವಂಶೀಯನಲ್ಲದ ಯುವಕನಿಗೆ ರಾಜಕುಮಾರಿ ಮೋಸ ಮಾಡಿ ಅನಾಮಧೇಯ ಯುವಕನ ಕೊರಳಿಗೆ ಮಾಲೆ ಹಾಕಿದಳು ಎನ್ನುವಾಗ ರಾಜ ಆ ಯುವಕನಿಗೆ ಕೆಲವು ರಾಜ್ಯಗಳನ್ನು ಕೊಟ್ಟು ಪಟ್ಟಾಭಿಷೇಕ ನಡೆಸಿ ಕ್ಷತ್ರಿಯ ಎಂದೆನಿಸಿಕೊಳ್ಳುವಂತೆ ಮಾಡುತ್ತಾನೆ‌. ಇದು ಮಹಾಭಾರತದಲ್ಲಿ ಇತರ ರಾಜಕುಮಾರರು ಕರ್ಣನು ಕ್ಷತ್ರಿಯನಲ್ಲ ಎಂದು ಆಕ್ಷೇಪ ಎತ್ತಿದಾಗ ದುರ್ಯೋಧನ ಕರ್ಣನಿಗೆ ಅಂಗದ ರಾಜ್ಯದ ಅರಸನನ್ನಾಗಿ ಮಾಡಿ ಸೂತಪುತ್ರನನ್ನು ಕ್ಷತ್ರಿಯನನ್ನಾಗಿ ಮಾಡುತ್ತಾನೆ. 

ಈ ಕಾದಂಬರಿ ಕೆಲವು ತಾತ್ವಿಕ ಅಧ್ಯಾತ್ಮಿಕ ವಿಚಾರಗಳನ್ನೂ ಎತ್ತಿಕೊಳ್ಳುತ್ತದೆ. ಅರಿಷಡ್ವೈರಿಗಳು, ಭೋಗ ಮತ್ತು ಯೌಗಿಕ‌ ಬದುಕಿನ ಸಂಘರ್ಷ, ಮತ್ತು ಲೌಕಿಕವು ಮನುಷ್ಯನನ್ನು ಅಂಟಿಕೊಂಡಷ್ಟು ಯೌಗಿಕ ಬದುಕಿನ ಹತ್ತಿರವೂ ಹೋಗಲಾರದು‌.

ಇಲ್ಲಿ ಭಾಷಾ ಶೈಲಿ ಉನ್ನತಮಟ್ಟದ್ದಾಗಿದೆ. ದೇಸೀಯ ಭಾಷೆಯ ಬಳಕೆ ಹೆಚ್ಚು ಇಲ್ಲದ ಶಿಷ್ಟ ಭಾಷೆಯ ಸಂತುಲಿತ ಶೈಲಿ ಕಾದಂಬರಿಯ ಆವರಣಕ್ಕೆ ಶೋಭೆ ತಂದಿದೆ.ಇಲ್ಲಿ ಕಾದಂಬರಿಕಾರ್ತಿ 140 ಕ್ಕೂ ಹೆಚ್ಚು ಸ್ತ್ರೀ ಪಾತ್ರಗಳಿವೆ. ಎಂದು ಹೇಳಿದ್ದುದು ನಿಜವೆ. ಸಂಭಾಷಣೆಗಳಲ್ಲಿ ಲವಲವಿಕೆ ಇದೆ. ಇದನ್ನು ಸೃಷ್ಟಿಸುವಾಗ ತನ್ನ ಎಲ್ಲ ಸೃಜನಶೀಲತೆಯ ಅಪಾರ ಸಾಧ್ಯತೆಗಳನ್ನು ನಿರೂಪಣೆಯಲ್ಲಿ ಧಾರೆ ಎರೆದಿದ್ದಾರೆ‌

ಕಾದಂಬರಿ ಕ್ಷೇತ್ರದಲ್ಲಿ ಇದೊಂದು ಹೊಸ ಬಗೆಯ ಬರವಣಿಗೆ.

ಕಾದಂಬರಿಕಾರರು ಎಲ್ಲಿಯೂ ಕಾದಂಬರಿ ಘಟನೆಗಳು ನಡೆಯುವ ಕಾಲಘಟ್ಟವನ್ನು ಸೂಚಿಸಿರದಿದ್ದರೂ ಪಾತ್ರಗಳ ಹೆಸರುಗಳು, ಉನ್ನತ ಪಾತ್ರಗಳು ಸಂಸ್ಕೃತದಲ್ಲಿ ಮಾತಾಡುತ್ತವೆ, ಮತ್ತು ನೀಚ ಪಾತ್ರಗಳು ಪ್ರಾಕೃತ ಮಾತಾಡುತ್ತವೆ. ಎಂಬ ಉಲ್ಲೇಖ ಕಾದಂಬರಿಯಲ್ಲಿದೆ‌ ಕಾಳಿದಾಸನ ಕಾಲ ಎನ್ನಬಹುದೆ?

ಈ ಕಾದಂಬರಿಯ ಓದು ತುಂಬ ಖುಶಿ ನೀಡುತ್ತದೆ.ಇದರ ಸೃಷ್ಟಿಗೆ ಅಪಾರ ಶ್ರಮ ಬೇಕು. ಕಾದಂಬರಿಕಾರರು ಸಂಪೂರ್ಣ 5 ವರ್ಷಗಳನ್ನು ತೆಗೆದುಕೊಂಡಿದ್ದಾರೆ‌‌

ಓದಲೇಬೇಕಾದ ಕೃತಿ.

ಉದಯ್ ಕುಮಾರ್ ಹಬ್ಬು

ಉದಯ್ ಕುಮಾರ್ ಹಬ್ಬು ಅವರ ಲೇಖಕ ಪರಿಚಯ..

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...