ಹೊಸ ಸೃಷ್ಠಿಗೆ ಕಾರಣವಾಗುವ ಬರವಣಿಗೆಗಳು ಸಮಾಜವನ್ನು ಮುನ್ನಡೆಸುತ್ತವೆ : ಎಂ.ಎನ್. ನಂದೀಶ್ ಹಂಚೆ

Date: 18-01-2022

Location: ಬೆಂಗಳೂರು


ಹೊಸ ಸೃಷ್ಠಿಗೆ ಕಾರಣವಾಗುವಂತಹ ಬರವಣಿಗೆಗಳು ಸಮಾಜವನ್ನು ಮುನ್ನಡೆಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಅಭಿಪ್ರಾಯಿಸಿದರು.

ಕುಂಬಳೆ ಸುಬ್ಬಯ್ಯಕಟ್ಟೆಯ ಕೈರಳಿ ಪ್ರಕಾಶನ ವತಿಯಿಂದ ಕುಂಬಳೆಯ ಮಾಧವ ಪೈ ಸ್ಮಾರಕ ಸಭಾಭವನದಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ಕತೆಗಾರ್ತಿ ಸ್ನೇಹಲತಾ ದಿವಾಕರ್ ಅವರ ’ಆಮೆ’ ಕಥಾಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕಥಾನಕವನ್ನು ಕಟ್ಟುವಾಗ ವಸ್ತುಗಳು ಪ್ರಮುಖವಾದ ಪಾತ್ರಧಾರಿಗಳಾಗಿರುತ್ತದೆ. ವೈಚಾರಿಕ ಚಿಂತನೆಗೆ ಹಚ್ಚುವ ವಸ್ತುಗಳ ಸುತ್ತ ಹೆಣೆಯಲ್ಪಡುವಂತಹ ಕಥಾನಕಗಳು ವ್ಯಕ್ತಿ-ವ್ಯಕ್ತಿತ್ವವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತದೆ. ಆ ಪ್ರಕಾರದ ಕಥೆಗಳೇ ಹೊಸ ಜಗತ್ತನ್ನು ಸೃಷ್ಠಿಸುತ್ತದೆ. ಅಂತಹ ಬರವಣಿಗೆಗಳು ಎಲ್ಲ ಬರಹಗಳಿಗಿಂತ ಭಿನ್ನವಾಗಿದ್ದು, ಹೊಸ ಸಮಾಜದ ಸೃಷ್ಠಿಗೆ ಕಾರಣವಾಗುತ್ತದೆ ಎಂದರು. ಹಾಗೂ ಪ್ರಾಧಿಕಾರದ ಮುಖೇನ ಉತ್ತಮ ಬರಹಗಾರರನ್ನು ಪ್ರೋತ್ಸಾಹಿಸುವ ಭರವಸೆಯನ್ನು ಅವರು ನೀಡಿದರು.

ಕೈರಳಿ ಪ್ರಕಾಶನದ ಗೌರವಾಧ್ಯಕ್ಷ್ಯ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಳೆ ಕೃತಿ ಪರಿಚಯ ನಡೆಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ. ಎ. ಎನ್. ಖಂಡಿಗೆ, ಕುಂಬಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್, ಗಡಿನಾಡ ಅಕಾಡೆಮಿ ಕಾಸರಗೋಡು ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನಗದ್ದೆ, ಕಾಸರಗೋಡು ಥಿಯೇಟ್ರಿಕ್ಸ್ ಸೊಸೈಟಿಯ ಕೋಶಾಧಿಕಾರಿ ನ್ಯಾಯವಾದಿ ಟಿ.ವಿ ಗಂಗಾಧರನ್, ಕ್ಯಾಂಪ್ಕೋ ಮಂಗಳೂರು ಮಾಜಿ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಎನ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕಮೂಲೆ ಉಪಸ್ಥಿತರಿದ್ದರು.

ಸ್ನೇಹಲತಾ ದಿವಾಕರ್ ಸ್ವಾಗತಿಸಿ, ಅಖಿಲೇಶ್ ನಗುಮುಗಂ ವಂದಿಸಿದರು. ರವಿ ನ್ಯಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...