ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ: ವೈದೇಹಿ

Date: 01-12-2019

Location: ಶಿವಮೊಗ್ಗ


’ಇಂದು ಹೆಣ್ಣುಮಕ್ಕಳು ಬದುಕುವುದು ಕಷ್ಟವಾಗುತ್ತಿದೆ. ಅವರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಗಳು ಹೆಚ್ಚಾಗುತ್ತಿವೆ. ಇದರಿಂದ ಎಷ್ಟೋ ಹೆಣ್ಣುಮಕ್ಕಳು ಹೆಣ್ಣುಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಹಿಂದೆ ಇಂತಹ ಪ್ರಕರಣಗಳು ಆದರೂ ತಿಳಿಯುತ್ತಿರಲಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ' ಎಂದು ಸಾಹಿತಿ ವೈದೇಹಿ ಅಭಿಪ್ರಾಯಪಟ್ಟರು.

ಭಾನುವಾರ ನಗರದ ಪತ್ರಿಕಾ ಭವನದಲ್ಲಿ  ವೈದೇಹಿ ಗೌರವ ಗ್ರಂಥ ಸಮಿತಿ ಮತ್ತು ಸಂಪಾದಕರ ಮಂಡಳಿಯಿಂದ ಹಮ್ಮಿಕೊಂಡಿದ್ದ ಸಾಹಿತಿ ವೈದೇಹಿ ಅವರಿಗೆ ‘ಇರುವಂತಿಗೆ’ ಗೌರವ ಗ್ರಂಥ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಂತಕ ಲಕ್ಷ್ಮೀಶ ತೋಳ್ಪಾಡಿ, ‘ಸ್ತ್ರೀ ಪ್ರಜ್ಞೆ ಮತ್ತು ಸಾಂಸಾರಿಕತೆ ನಡುವಿನ ಸಂಬಂಧ ಬೆಸೆಯಲು ವೈದೇಹಿ ಅವರ ಬರಹಗಳೇ ಮೂಲ ಪ್ರೇರಣೆಯಾಗಿವೆ. ಸ್ತ್ರೀ ಪ್ರಜ್ಞೆ ಎಂಬುದು ವೈದೇಹಿ ಅವರಿಂದ ಮೊದಲ ಬಾರಿಗೆ ಪ್ರಚಲಿತಕ್ಕೆ ಬಂದಿದೆ. ಸಂಸ್ಕಾರ ಬಿಟ್ಟು ಅಂತರಂಗದ ಪ್ರಪಂಚವನ್ನು ಬರಹಗಳಲ್ಲಿ ತೆರದಿಟ್ಟಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಲೇಖಕಿ ಸವಿತಾ ನಾಗಭೂಷಣ, ಗೀತಾ ವಸಂತ ಉಪಸ್ಥಿತರಿದ್ದರು. 

MORE NEWS

ಕವನ ಸಂಕಲನ ’ವಿಸರ್ಜನೆ’ ಬಿಡುಗಡೆ...

05-12-2019 ಧಾರವಾಡ

ಜಿ.ಪಿ. ರಾಜಾರತ್ನಂ ಜನ್ಮದಿನದ ಅಂಗವಾಗಿ ಧಾರವಾಡದ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಅರವಿಂದ ಅವರ 'ವಿಸರ್ಜನೆ'...

ಕರ್ನಾಟಕದಲ್ಲೂ ಪುಸ್ತಕೋದ್ಯಾನ: ಸಿದ...

05-12-2019 ಬೆಂಗಳೂರು

ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ್ತಕೋದ್ಯಾನ ಪರಿಕಲ್ಪನೆyu ಕರ್ನಾಟಕದಲ್ಲಿಯೂ ಜಾರಿಯಾಗಬೇಕು ಎಂದು ಸಾಹಿತಿ...

ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ...

05-12-2019 ಮಂಗಳೂರು

ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಕೊಡಮಾಡುವ ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ ಉದಯೋನ್ಮುಖ ಲೇಖಕಿಯರಿಂದ ಕೃತಿಯನ್...

Top News
Top Events