‘ಜಗತ್ತು ಕಂಡ ಅಪರೂಪದ ಮಾತೃಹೃದಯದ ವ್ಯಕ್ತಿ ಮಹಮದ್ ಯೂನಸ್’


ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್‌ ಯೂನಸ್‌ರವರ ಜೀವನ ಚರಿತ್ರೆಯ ಕನ್ನಡ ಅನುವಾದ ‘ಬಡವರ ಬಾಪು’. ಮಹಮದ್ ಯೂನಸ್ ಅವರು ಬರೆದ ಜೀವನ ಚರಿತ್ರೆಯನ್ನು ಲೇಖಕ ಜಗದೀಶ ಕೊಪ್ಪ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯು ಕುರಿತು ಲೇಖಕರು ಬರೆದ ‘ಲೇಖಕನ ಮಾತು’ ಪೂರ್ಣ ಟಿಪ್ಪಣಿ ಇಲ್ಲಿದೆ.  

ಬಡತನ ಶಾಪವಲ್ಲ, ಅದು ಒಂದು ವ್ಯವಸ್ಥೆ. ಆಳುವ ಸರ್ಕಾರಗಳು ಮತ್ತು ಸಮಾಜದ ಕುರುಡುತನದಿಂದಾಗಿ ಸೃಷ್ಟಿಯಾದ ವ್ಯವಸ್ಥೆ ಎಂದು ಬಡತನಕ್ಕೆ ಹೊಸ ಭಾಷ್ಯ ಬರೆದ ಬಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಈ ಜಗತ್ತು ಕಂಡ ಅಪರೂಪದ ಮಾತೃಹೃದಯದ ವ್ಯಕ್ತಿ.

ಮರದ ಕೆಳೆಗೆ ಕುಳಿತು ಚಪ್ಪಲಿ ಹೊಲೆಯುವ ಒಬ್ಬ ಚಮ್ಮಾರನಿಗೆ ಹೇಗೆ ಹೊಲಿಯಬೇಕು ಎಂದು ಪಾಠ ಹೇಳಬೇಡಿ. ಆತನಿಗೆ ಪಾದರಕ್ಷೆಗಳನ್ನು ತಯಾರಿಸುವ ಕುಶಲ ಕಲೆಯು ರಕ್ತಗತವಾಗಿ ಬಂದಿರುತ್ತದೆ. ನಿಮಗೆ ನಿಜವಾಗಿ ಆತನಿಗೆ ಸಹಾಯ ಮಾಡಬೇಕು ಎನಿಸಿದರೆ, ಆತನ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಟ್ಟು ಯೋಗ್ಯ ಬೆಲೆ ದೊರಕುವಂತೆ ಮಾಡಿ. ಇದರಿಂದಾಗಿ ಆತ ಘನತೆಯಿಂದ ಬದುಕುವಂತಾಗುತ್ತದೆ ಎಂದು ಆಧುನಿಕ ಪ್ರಭತ್ವ ಮತ್ತು ಮಾರುಕಟ್ಟೆಯ ವ್ಯವಸ್ಥೆಗೆ ಚಾಟಿ ಏಟು ಬೀಸಿದವರು  ಮಹಮ್ಮದ್ ಯೂನಸ್.

ಬಡವರೆಂದರೆ, ಅಪ್ರಾಣಿಕರು, ಸಾಲ ಹಿತಿರುಗಿಸಲು ಅಸಮರ್ಥರು ಎಂದು ಬ್ಯಾಂಕುಗಳು ನಂಬಿದ್ದ ಕಾಲಘಟ್ಟದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ, ಸಾಲ ಹಿತಿರುಗಿಸುವಲ್ಲಿ ಬಡವರು ಶೇಕಡ 96 ರಷ್ಟು ಪ್ರಾಮಾಣಿಕರು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು. ಇಂದಿನ ಕಿರುಸಾಲ, ಸ್ತ್ರೀ ಸ್ವಸಹಾಯ ಸಂಘಗಳ ಪರಿಕಲ್ಪನೆಗೆ ನಾಂದಿ ಹಾಡಿದ ಮಾನವೀಯ ಮುಖವುಳ್ಳ ಅರ್ಥಶಾಸ್ತ್ರಜ್ಞ. ಅವರ ಬದುಕಿನ ಯಶೋಗಾಥೆಯ ಆತ್ಮಚರಿತ್ರೆಯನ್ನು “ ಬಡವರ ಬಾಪು” ಹೆಸರಿನಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಇದು ನಿಮ್ಮ ಎದೆಯ ಕದ ತಟ್ಟಿದರೆ ನನ್ನ ಶ್ರಮ ಸಾರ್ಥಕ.


ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. ಬೆಸಗರಹಳ್ಳಿಯಲ್ಲಿ ಪ್ರೌಢ ಶಿಕ್ಷಣ ಮತ್ತು ಪಿ.ಯು.ಸಿ ವಿದ್ಯಾಭ್ಯಾಸ ಹಾಗೂ ಬೆಂಗಳೂರು ವಿ.ವಿ.ಪುರಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಹಂಪಿಯ ಕನ್ನಡ ವಿ.ವಿಯಲ್ಲಿ ಜಾಗತೀಕರಣ ಕುರಿತ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.  ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು, ಪರಿಸರ, ಮತ್ತು ಜಾಗತಿಕ ಬಡತನದ ಕುರಿತು ವಿಶೇಷ ಆಸಕ್ತಿ. ಕಳೆದ 13 ವರ್ಷಗಳಿಂದ ಉದಯ ವಾಹಿನಿಯಲ್ಲಿ ಪತ್ರಕರ್ತರಾಗಿ, ಪ್ರಸ್ತುತ ಹುಬ್ಬಳ್ಳಿಯ ಉತ್ತರ ಕರ್ನಾಟಕದ ಪ್ರಾದೇಶಿಕ ಕಛೇರಿಯ ಮುಖ್ಯಸ್ಥರಾಗಿದ್ದು, ಧಾರವಾಡದಲ್ಲಿ ವಾಸಿಸುತ್ತಿದ್ದಾರೆ. ಕೃತಿಗಳು: ಸುಮ್ಮಾನದ ಪದ್ಯಗಳು ಮತ್ತು ಕಾಶ್ಮೀರದ ಹಾಡು (ಕವನ ಸಂಕಲನಗಳು). ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಾರತೀಯ ಮಹಿಳೆ ಮತ್ತು ಉಮರ್ ಖಯಾಮನ ಪದ್ಯಗಳುಸ ಹಾಗೂ ಮಿರ್ಜಾ ಗಾಲೀಬ್ (ಕಥನ ಮತ್ತು ಕಾವ್ಯ),  ಐದು ಜೀವನ ಚರಿತ್ರೆಗಳು (ಕೆ.ವಿ.ಶಂಕರಗೌಡ (ಕರ್ನಾಟಕ ವಿಧಾನ ಮಂಡಲದ ಸಂಸದೀಯ ಪಟುಗಳ ಮಾಲಿಕೆಯ ಕೃತಿ) ಮತ್ತು ಎದೆಯ ಕದ ತೆರೆದು(ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ಮಹಮ್ಮದ್ ಯೂನಸ್ ಆತ್ಮಕಥೆ) ಹಾಗೂ ಬಿಳಿ ಸಾಹೇಬನ ಭಾರತ(ಜಿಮ್ ಕಾರ್ಬೆಟ್ ಜೀವನ ಕಥನ) ಮರುಭೂಮಿಯ ಹೂವು (ವಾರಿಸ್ ಡೆರಿಸ್ ಳ ಆತ್ಮ-ಕಥೆ) ಹಾಗೂ ಪುತ್ರಶೋಕ. 


 

MORE FEATURES

ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’

20-04-2024 ಬೆಂಗಳೂರು

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ...

ಈ ಪುಸ್ತಕ ಇರಬೇಕಾದದ್ದು ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ

20-04-2024 ಬೆಂಗಳೂರು

`ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ, ಮನದಲ್ಲಿ ಎಂಬ ಆಸೆಯಿಂದಾಗಿ ಹರಿಯುವ ಸ್ಥಿತಿಯಲ್ಲಿದ್ದ ಆ ಹಾಳೆಗಳನ್ನೇ ಚೀಲದಲ...

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...