ಜಾಗೃತ ಪ್ರಜ್ಞೆ ಮೂಡಿಸುವ ವೈದ್ಯ ಕಬೀರ: ಟಿ.ಎನ್. ವಾಸುದೇವ ಶರ್ಮಾ

Date: 25-09-2020

Location: ಬೆಂಗಳೂರು


"ಹಿಂದು ಮತ್ತು ಮುಸ್ಲಿಂ ಧರ್ಮಗಳ ನಡುವಿನ ಸಮನ್ವಯ ಮತ್ತು ವೈಷಮ್ಯಕ್ಕೆ ಸಾಕ್ಷಿಯಾಗಿದ್ದವರು ಕಬೀರ. ಈ ವೈಷಮ್ಯಗಳಿಂದ ಜನರ ಮನಸ್ಥಿತಿ ಹಾಳಾಗದಂತೆ ಜಾಗೃತ ಪ್ರಜ್ಞೆಯನ್ನು ಮೂಡಿಸುವಲ್ಲಿ ಕಬೀರ ಪಾತ್ರ ಪ್ರಮುಖವಾದದ್ದು" ಎಂದು ಬರಹಗಾರ ಟಿ.ಎನ್. ವಾಸುದೇವ ಶರ್ಮಾ ಅವರು ಅಭಿಪ್ರಾಯಪಟ್ಟರು. ಅವಧಿ ಆನ್‌ಲೈನ್‌ ಮ್ಯಾಗ್‌‌‌ ಫೇಸ್‌ಬುಕ್‌ ಲೈವ್‌ನಲ್ಲಿಕೇಶವ ಮಳಗಿ ಅವರ ‘ಹಂಸ ಏಕಾಂಗಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಈ ಮಾತನ್ನು ಹೇಳಿದರು.

"ಹಂಸ ಏಕಾಂಗಿ ಕೃತಿಯಲ್ಲಿ ಕನ್ನಡ ನೆಲದ ಲಯಗಳನ್ನು ಹಿಡಿದಿಟ್ಟುಕೊಂಡಿರುವ ಅನುವಾದ ಈ ಕೃತಿಯಲ್ಲಿದೆ. ಇಲ್ಲಿನ ಕವಿತೆಗಳಲ್ಲಿ ಶರೀಫರು, ತತ್ವಪದರು, ಜನಪದರು ಮಾತನಾಡುತ್ತಾರೆ. ಕಬೀರನ ಕವಿತೆಗಳಲ್ಲಿ ಸಂತೆ ಮತ್ತು ಹಂಸ ರೂಪಕಗಳು ಹೆಚ್ಚು ಬಳಕೆಯಲ್ಲಿವೆ. ಸಂತೆ ಎಂಬುದು ಸಮಾಜದ ಸಂತೆ ಆಗಿರಬಹುದು ಅಥವಾ ಆಂತರ್ಯದ ಸಂತೆಯೂ ಆಗಿರಬಹುದು ಹಾಗೆಯೇ ಹಂಸವೆಂದರೆ ಆತ್ಮ ಅಥವಾ ಆತ್ಮಕ್ಕೆ ತಗಲಿರುವ ರೋಗ ಎಂಬುದನ್ನು ಈ ರೂಪಕಗಳ ಮೂಲಕ ಬಳಸಿರುತ್ತಾರೆ ಹಾಗಾಗಿಯೇ ಕಬೀರ ಜನಪರಂಪರೆಯಲ್ಲಿ ಉಳಿದುಕೊಂಡಿರುವ ತತ್ವಜ್ಞಾನಿ ಎಂತಲೇ ಕತೆಯಿರಬಹುದು" ಎಂದರು.

ಕಾರ್ಯಕ್ರಮದಲ್ಲಿ ಲೇಖಕರಾದ ಕೇಶವ ಮಳಗಿ ಮತ್ತು ಅವಧಿ ಮ್ಯಾಗ್‌ನ ಸಂಪಾದಕರಾದ ಜಿ.ಎನ್‌. ಮೋಹನ್‌ ಉಪಸ್ಥಿತರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...