ಶಿಷ್ಟ ಸಾಹಿತ್ಯದ ತಾಯಿ ಬೇರು ಜಾನಪದ ಸಾಹಿತ್ಯ: ಶಂಭುಲಿಂಗ ವಾಲ್ದೊಡ್ಡಿ

Date: 08-09-2019

Location: ಬೀದರ್


ಜನರ ಬಾಯಿಯಿಂದ ಬಾಯಿಗೆ ಹರಿದುಬಂದ ಜಾನಪದ ಸಾಹಿತ್ಯವು ಶಿಷ್ಟ ಸಾಹಿತ್ಯದ ತಾಯಿ ಬೇರಾಗಿದೆ ಎಂದು ಹಿರಿಯ ಜಾನಪದ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ ತಿಳಿಸಿದರು.

ಶನಿವಾರ ನಡೆದ ಜಾನಪದ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತಿಗಳಾದ ಕೆ.ಎಂ. ವಿಶ್ವನಾಥ ಮರತೂರ ಅವರು ’ಪರಂಪರೆಯ ಅಧ್ಯಯನದಿಂದ ಕಾವ್ಯ ರಚಿಸಬೇಕು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಕಾವ್ಯ ಬಹಳ ಕಾಲ ಪ್ರಸ್ತುತತೆಯಿಂದ ಕೂಡಿರುತ್ತದೆ. ಆ ನಿಟ್ಟಿನಲ್ಲಿ ಕವಿಗಳ ಪ್ರಯತ್ನವಿರಲಿ’ ಎಂದು ಅಭಿಪ್ರಾಯಪಟ್ಟರು.

ಜಾನಪದ ಸಾಹಿತ್ಯ ಪ್ರಸ್ತುತತೆ ಕುರಿತು ಮಾತನಾಡಿದ ಎನ್.ಬಿ. ರೇಣುಕಾ ಅವರು ’ಜಾನಪದವು ಈಗ ಒಂದು ಅಧ್ಯಯನ ಶಿಸ್ತಾಗಿ ಬೆಳೆದಿದೆ. ಶ್ರೇಷ್ಠ ಹಾಗೂ ಸುದೀರ್ಘ ಹಿನ್ನಲೆ ಹೊಂದಿರುವ ಜಾನಪದ ಸಾಹಿತ್ಯವು ಬದುಕಿನ ಕಠಿಣ ಪರಿಸ್ಥಿತಿಯಲ್ಲಿ ಶಾಂತಿ ನೆಮ್ಮದಿಯಿಂದ ಬಾಳಲು ಮಾರ್ಗದರ್ಶಿಯಾಗಿದೆ. ಮನುಷ್ಯನ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳ್ಳಿಸುವಲ್ಲಿ ಪೂರಕವಾಗಿದೆ’ ಎಂದರು.

ಕವಿಗೋಷ್ಠಿಯಲ್ಲಿ ಬಾಬುರಾವ ಚಿಮಕೋಡೆ, ಸಾರಿಕಾ ಗಂಗಾ, ವೀರಭದ್ರಪ್ಪಾ ಉಪ್ಪಿನ, ವಿದ್ಯಾವತಿ ಹಿರೇಮಠ, ಬಾನುಪ್ರೀಯ ಅರಳಿ, ಮಂಗಲಾ ಪೊಳ್, ಅನಿಲಕುಮಾರ ದೇಶಮುಖ, ಸಂತೋಷಕುಮಾರ ಸುಂಕದ, ಬುದ್ಧದೇವಿ ಸಂಗಮ, ಕವಿತಾ ಬಂಬುಳಗೆ, ಸ್ವರೂಪರಾಣಿ ನಾಗೂರೆ, ದೇವಿದಾಸ ಚಿಮಕೋಡ, ವೀರೇಶ್ವರಿ ಮೂಲಗೆ, ಲಕ್ಷ್ಮಣ ಮೇತ್ರೆ, ಶಿವಯೋಗಿ, ಉಷಾರಾಣಿ, ಶೇಖ್ ಬೀಬಿ ಆಶೀಫ್, ಅಂಬಿಕಾ ಸ್ವರಚಿತ ಕವನ ವಾಚಿಸಿದರು.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...