ಜನಪದರ ನಂಬಿಕೆಗಳು ಪ್ರಾಕೃತಿಕ  ಪರಿಸರ ಪ್ರೇಮದ ಬೇರುಗಳು: ಎ.ಎನ್. ಸಿದ್ಧೇಶ್ವರಿ ಸಮರ್ಥನೆ

Date: 05-05-2021

Location: ಜೂಮ್ ಆಪ್


ಜನಪದರ ನಂಬಿಕೆಗಳು ಮೌಢ್ಯವಲ್ಲ. ಅವು ಪ್ರಕೃತಿ ಪ್ರೇಮದ ಆರೋಗ್ಯಕರ ಬೇರುಗಳು ಎಂದು ಜಾನಪದ ತಜ್ಞೆ ಡಾ. ಎ.ಎನ್. ಸಿದ್ಧೇಶ್ವರಿ ಅಭಿಪ್ರಾಯಪಟ್ಟರು.

ಕನ್ನಡ ಜಾನಪದ ಪರಿಷತ್ತು ಹಾಗೂ ಕನ್ನಡ ಜಾನಪದ ಯುವ ಬ್ರಿಗೇಡ್ ಜಂಟಿಯಾಗಿ ಬುಧವಾರ ಸಂಜೆ ಅಂತರ್ಜಾಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಜಾನಪದ ನಂಬಿಕೆಗಳು’ ಕುರಿತು ಉಪನ್ಯಾಸ ನೀಡಿದರು.

ನಂಬಿಕೆಗಳು ಜೀವನಾಧಾರ. ವಿಶೇಷವಾಗಿ ಜಾನಪದರ ನಂಬಿಕೆಗಳನ್ನು ಮೌಢ್ಯಗಳು ಎಂಬರ್ಥದಲ್ಲಿ ನೋಡಬಾರದು. ಏಕೆಂದರೆ, ಪ್ರಕೃತಿ ಜೀವಂತವಿರುವುದೇ ಪಂಚಭೂತಗಳಿಂದ. ಈ ಪಂಚಭೂತಗಳನ್ನು ಅವರು ದೇವರೆಂದು ತಿಳಿಯುತ್ತಾರೆ. ಆಧುನಿಕ ಯುಗವು ಸಹ ಪಂಚಭೂತಗಳಿಂದ ಮುಕ್ತವಿಲ್ಲ. ಅಷ್ಟಕ್ಕೂ, ಅವರು ನಂಬಿರುವ ನಂಬಿಕೆಗಳಿಂದ ಯಾವುದೇ ಕೋಮುದ್ವೇಷ ಹರಡುವುದಿಲ್ಲ. ಬದಲಾಗಿ, ಸಾಮಾಜಿಕ ಸಾಮರಸ್ಯ ಗಟ್ಟಿಯಾಗುತ್ತಾ ಬಂದಿದೆ. ಇದನ್ನು ನಾವು ಇಂದಿಗೂ ಕಾಣಬಹುದು. ಇಂತಹ ಪರಿಶುದ್ಧ ಮನಸ್ಸಿನ ನಂಬಿಕೆಗಳನ್ನು ಅಧ್ಯಯನ ಮಾಡುವಾಗ ಬೇರೆಯದೇ ಮಾನದಂಡ ಉಪಯೋಗಿಸಬೇಕು. ಅದು ವೈಚಾರಿಕ ಅಧ್ಯಯನವೂ ಆಗುತ್ತದೆ ಎಂದು ಸಮರ್ಥಿಸಿಕೊಂಡರು.

ನಂಬಿಕೆಗಳು ಜೀವನ ಮೌಲ್ಯ: ಜಾನಪದರ ನಂಬಿಕೆಗಳು ಅವರ ಜೀವನ ಮೌಲ್ಯಗಳಾಗಿವೆ. ಪರಿಶುದ್ಧ ಮನಸ್ಸಿನ ದ್ಯೋತಕಗಳಾಗಿವೆ. ಬದುಕಿನ ಸಾಮರಸ್ಯ ವೃದ್ಧಿಸುವ ಮೂಲಗಳಾಗಿವೆ. ಜೀವಪೋಷಕಗಳಂತೆ ಸಾಮಾಜಿಕತೆಯ ಜೀವಾಳವಾಗಿವೆ. ಸಮಾನತೆಯನ್ನು ಗೌರವಿಸುತ್ತವೆ. ಜಾನಪದರ ಆಹಾರ ಕ್ರಮ, ಚಿಂತನೆ, ಆಚಾರಗಳು ಹೀಗೆ ಅವರ ಒಟ್ಟು ಬದುಕಿನ ಸಾರವೇ ಈ ನಂಬಿಕೆಗಳು. ಮನೋ-ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ನಿರಂತರ ಕೊಡುಗೆ ನೀಡುತ್ತಾ ಬಂದಿವೆ. ಆದ್ದರಿಂದ, ಪ್ರತಿ ವ್ಯಕ್ತಿಯೂ ಸೇರಿದಂತೆ ಒಟ್ಟು ಸಮಾಜ ಆರೋಗ್ಯಕರವಾಗಿತ್ತು. ಜಾನಪದರ ನಂಬಿಕೆಗಳಂತಹ ಗಟ್ಟಿಯಾದ ಮನೋ-ದೈಹಿಕ ಸದೃಢತೆಯ ಜೀವನ ಶೈಲಿ ಇಲ್ಲದ್ದರಿಂದ ಕೊರೊನಾದಂತಹ ವೈರಸ್ ಗೆ ವ್ಯಕ್ತಿ ಹಾಗೂ ಸಮಾಜ ನರಳುತ್ತಿದೆ ಎಂದು ಸಮೀಕರಿಸಿದರು.

ಡಾ. ಎಸ್. ಬಾಲಾಜಿ ಅವರು ಅಧ್ಯಕ್ಷತೆವಹಿಸಿದ್ದರು. ಸಂಜಯಕುಮಾರ ಪ್ರಾರ್ಥಿಸಿದರು. ಮನೋಜಕುಮಾರ ಸ್ವಾಗತಿಸಿದರು. ಸಂಕೇತಕುಮಾರ ನಿರೂಪಿಸಿದರು.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...