ಜನತೆಯನ್ನೇ ಕಾವ್ಯವಾಗಿಸಿದ ಕವಿ ಡಾ.ಸಿದ್ದಲಿಂಗಯ್ಯ

Date: 20-07-2021

Location: ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು


“ದಲಿತ ಕವಿ ಸಿದ್ದಲಿಂಗಯ್ಯನವರ ಕವನಗಳು ಬರೀ ಕವನಗಳಲ್ಲ, ಅವು ಜನತೆಯ ಆಡು ನುಡಿಗಳು ಅಲ್ಲದೆ ಜನರಿಗೆ ದಿಕ್ಸೂಚಿಯೂ ಆಗಿದೆ. ಇದಕ್ಕೆ ಕಾರಣ ಅವರು ಜನತೆಯನ್ನೇ ಕಾವ್ಯವಾಗಿರಿಸಿದ್ದು” ಎಂಬುದಾಗಿ ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ಸಿದ್ದಲಿಂಗಯ್ಯನವರ ಒಡನಾಡಿಯಾಗಿದ್ದ ಡಾ. ಡೊಮಿನಿಕ್ ಡಿ. ಅವರು ಹೇಳಿದ್ದಾರೆ.

ಇತ್ತೀಚೆಗೆ ನಿಧನರಾದ ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ಪ್ರತಿಭೆ ಡಾ. ಸಿದ್ದಲಿಂಗಯ್ಯನವರಿಗೆ ನುಡಿನಮನದ ಸಲ್ಲಿಸುವ ಉದ್ದೇಶದಿಂದ ಬೆಸೆಂಟ್ ಮಹಿಳಾ ಕಾಲೇಜಿನ ಐಕ್ಯೂಎಸಿ ಮತ್ತು ಕನ್ನಡ ವಿಭಾಗವು “ಜನತೆಯನ್ನೇ ಕಾವ್ಯವಾಗಿಸಿದ ಕವಿ ಡಾ.ಸಿದ್ದಲಿಂಗಯ್ಯ” ಎಂಬ ವಿಷಯಾಧಾರಿತವಾಗಿ ರಾಷ್ಟ್ರಮಟ್ಟದ ಅಂತರ್ಜಾಲ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಡೊಮಿನಿಕ್ ಡಿ. ಅವರು ಸಿದ್ದಲಿಂಗಯ್ಯನವರು, ಜನಸಮುದಾಯದ ನಡುವಿನ ಕವಿಯಾಗಿ, ಜನ ಸಾಮಾನ್ಯರಿಗಾಗಿ, ಅವರ ವಿರುದ್ಧದ ದೌರ್ಜನ್ಯದಿಂದ ಬಿಡುಗಡೆ ಪಡೆಯಲು ನಡೆಸಿದ ಹೋರಾಟಗಳ ಸ್ವರೂಪ, ಮಹತ್ವವನ್ನು ವಿವರಿಸಿದರು. ಜೊತೆಗೆ ಸಿದ್ದಲಿಂಗಯ್ಯನವರ ಬದುಕು, ಬರಹ, ಹೋರಾಟ, ದಲಿತ ಚಳುವಳಿಯನ್ನು ಸಮರ್ಥವಾಗಿ ಮುನ್ನಡೆಸಿದ ಬಗೆಯನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಹೆಸರಾಂತ ರಂಗಕರ್ಮಿ, ಮಕ್ಕಳ ಮಂಟಪ ಪುತ್ತೂರು ಇಲ್ಲಿನ ಶ್ರೀ ಕೃಷ್ಣಪ್ಪ ಬಂಬಿಲ ಅವರು ಸಿದ್ದಲಿಂಗಯ್ಯನವರ ಕವಿತೆಗಳನ್ನು ಹಾಡುವ ಮೂಲಕ ಮೆರುಗು ತುಂಬಿದರು. ವಿಚಾರ ಸಂಕಿರಣದ ಪ್ರಾರಂಭದಲ್ಲಿ ನಡೆದ ಪುಟ್ಟ ಸಭಾಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ. ಯವರು ಅವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಸಿದ್ದಲಿಂಗಯ್ಯನವರ ಸಾಹಿತ್ಯಾವಲೋಕನ ಮಾಡಿದರು. ಸಭಾಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಸಯ್ಯದ್ ಖಾದರ್, ನ್ಯಾಕ್ ಸಂಯೋಜಕರಾದ ಡಾ. ಪ್ರವೀಣ್ ಕುಮಾರ್ ಕೆ.ಸಿ., ಹಿರಿಯ ಪ್ರಾಧ್ಯಾಪಕರಾದ ಪ್ರೊ. ಮೋಹನ್ ದಾಸ್ ಕೆ. ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಗೂಗಲ್ ಮೀಟ್ ಮತ್ತು ಕಾಲೇಜಿನ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರದಲ್ಲಿ ಮೂಡಿಬಂದ ಈ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಸುಮಾರು 200 ಮಂದಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...