‘ಕಾಡುವ ಕಿರಂ’ ಕಾರ್ಯಕ್ರಮಕ್ಕೆ ಕವಿತೆಗಳ ಆಹ್ವಾನ 

Date: 13-10-2021

Location: ಬೆಂಗಳೂರು


2011ರಿಂದ ಜನಸಂಸ್ಕೃತಿ ಮತ್ತು ಕಾವ್ಯಮಂಡಲ ಸಂಯುಕ್ತ ಆಶ್ರಯದಲ್ಲಿ ನಡೆಯುವ ‘ಕಾಡುವ ಕಿರಂ’ ಕಾರ್ಯಕ್ರಮ ಈ ಬಾರಿ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕವಿಗಳಿಂದ ಕವಿತೆ ವಾಚನ ಆಯೋಜಿಸಲಾಗುತ್ತಿದ್ದು, ಕರ್ನಾಟಕ ಮತ್ತು ಹೊರ ರಾಜ್ಯ, ದೇಶಗಳಲ್ಲಿರುವ ಕವಿಗಳು ಕವಿತೆಗಳನ್ನು ಕಳಿಸಬಹುದಾಗಿದೆ.

ಆಯ್ಕೆಯಾದ ಕವಿತೆಗಳನ್ನು ಕಿರಂ ಪ್ರಕಾಶನದಿಂದ ಕೃತಿರೂಪದಲ್ಲಿ ಪ್ರಕಟಿಸಲಾಗುವುದು. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕಾಡುವ ಕಿರಂ ಕಾರ್ಯಕ್ರಮದಲ್ಲಿ ಕವಿಗಳು ಖುದ್ದಾಗಿ ಆಗಮಿಸಿ ಕವಿತೆಯನ್ನು ವಾಚಿಸಬೇಕು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕವಿಗಳು ಕವಿತೆಗಳನ್ನು ಕಳುಹಿಸಬಾರದು.

ಪಾಲಿಸಬೇಕಾದ ನಿಯಮಗಳು: ಒಬ್ಬರು ಒಂದು ಕವಿತೆಯನ್ನು ಮಾತ್ರ ಕಳಿಸಬಹುದಾಗಿದ್ದು, ಸ್ವರಚಿತ ಕನ್ನಡ ಕವಿತೆಯಾಗಿರಬೇಕು.ಭಾವಾನುವಾದ ಅಥವಾ ಭಾಷಾಂತರ ಕವಿತೆಯಾಗಿರಬಾರದು. ಆಯ್ಕೆಯಾದ ಕವಿತೆಗಳನ್ನು ಕಿರಂ ಪ್ರಕಾಶನದಿಂದ ಹೊರ ತರುವ ರಾಜ್ಯ ಮಟ್ಟದ ಕವಿತೆಗಳ ಸಂಕಲನದಲ್ಲಿ ಪ್ರಕಟಿಸಲಾಗುವುದು ಮತ್ತು ಬೆಂಗಳೂರಿನಲ್ಲಿ ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದ ಕವಿಗೋಷ್ಠಿಗೆ ಕವಿಗಳನ್ನು ಆಹ್ವಾನಿಸಲಾಗುವುದು. ಕವಿಗಳು ಕವಿತೆಗಳನ್ನು ಕಳುಹಿಸುವಾಗ ಕಡ್ಡಾಯವಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು.

ಕವಿತೆಯ ಆಯ್ಕೆ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಬಿಟ್ಟದ್ದು, ಈ ಕುರಿತು ಯಾವುದೇ ಪತ್ರ, ದೂರವಾಣಿ ವ್ಯವಹಾರಕ್ಕೆ ಅವಕಾಶವಿಲ್ಲ. ಕವಿತೆಗಳನ್ನು ತಿರಸ್ಕರಿಸುವ ಅಥವಾ ಆಯ್ಕೆ ಮಾಡುವ ಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಸೇರಿದ್ದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. 

ಕವಿತೆಗಳನ್ನು ಈ ಕೆಳಗಿನ ಮಿಂಚಂಚೆಯ ಮೂಲಕ ನವೆಂಬರ್ 15, 2021ರ ಒಳಗೆ ನಮಗೆ ಕಳುಹಿಸಬೇಕು.

ಮಿಂಚಂಚೆ: kaaduvakiram@gmail.com

 

 

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...