ಕಾಲಘಟ್ಟದ ಚೌಕಟ್ಟಿನಲ್ಲಿ ಕಥೆಗಳ ಸುಂದರ ಹೆಣಿಕೆ: ಗಿರಿಶ್ ಕಾಸರವಳ್ಳಿ ಬಣ್ಣನೆ

Date: 23-01-2021

Location: ಬೆಂಗಳೂರು


ಭೂತ, ವರ್ತಮಾನ ಹಾಗೂ ಭವಿಷ್ಯ ಹೀಗೆ ಕಾಲಘಟ್ಟದ ಚೌಕಟ್ಟಿನಲ್ಲಿ ಕಥೆಗಳನ್ನು ಸುಂದರವಾಗಿ ಹೆಣೆದ ಕಥೆಗಾರರ ಶ್ರಮ ಪ್ರಶಂಸಾರ್ಹ ಎಂದು ಕನ್ನಡ ಚಲನಚಿತ್ರ ಹೆಸರಾಂತ ನಿರ್ದೇಶನ ಖ್ಯಾತಿಯ ಗಿರೀಶ ಕಾಸರವಳ್ಳಿ ಅವರು ಹೇಳಿದರು.

ಸಪ್ನ ಪ್ರಕಾಶನವು ಆಯೋಜಿಸಿದ್ದ ‘ಪುಸ್ತಕ ಸುಗ್ಗಿ’ ಸಮಾರಂಭದಲ್ಲಿ ಗೋಪಾಲಕೃಷ್ಣ ಕುಂಟಿನಿ ಅವರ ‘ವಿಲೇಜ್ ವರ್ಲ್ಡ್ ಮತ್ತು 24 ಕತೆಗಳು’, ವಿಕಾಸ ನೆಗಿಲೋಣಿ ಅವರ ‘ಬ್ರಹ್ಮಚಾರಿಯ ಹೆಂಡತಿ’, ಮೇಘನಾ ಸುಧೀಂದ್ರ ಅವರ ‘#AI ಕತೆಗಳು’ ಹಾಗೂ ಜಗದೀಶ ಶರ್ಮ ಸಂಪ ಅವರ ‘ಕಥೆಯಲ್ಲ ಜೀವನ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇದೀಗ ಬಿಡುಗಡೆಗೊಂಡಿರುವ ಎಲ್ಲ ಕೃತಿಗಳು ತಮ್ಮ ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ತಮ್ಮದೇ ರೀತಿಯಲ್ಲಿ ಹಿರಿಮೆ ಮೆರೆಯುತ್ತಿವೆ. ಕಥೆಗಳು ಕಾಲಘಟ್ಟದ ಸುಂದರ ಚೌಕಟ್ಟಿನಲ್ಲಿ ಕಂಗೊಳಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ರಾ.ನಂ. ಚಂದ್ರಶೇಖರ ಅಧ್ಯಕ್ಷತೆವಹಿಸಿದ್ದರು. ಸಪ್ನ ಪ್ರಕಾಶನದ ದೊಡ್ಡೇಗೌಡರು, ಸಾಹಿತಿ ದೊಡ್ಡರಂಗೇಗೌಡ, ಕವಿ ಸಿದ್ಧಲಿಂಗಯ್ಯ, ಚಲನಚಿತ್ರ ನಿರ್ದೇಶಕ ಮಂಸೋರೆ, ಕಲಾವಿದೆ ಆರೋಹಿ ನಾರಾಯಣ ಹಾಗೂ ರಂಜನಿ ರಾಘವನ್, ಪತ್ರಕರ್ತ ಜೋಗಿ, ವಾ.ಚ. ಚೆನ್ನೇಗೌಡ ಸೇರಿದಂತೆ ಕೃತಿಕಾರರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

MORE NEWS

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...

ಅರಸು ಬಗ್ಗೆ ಆಗಿನ ಪತ್ರಿಕೆಗಳು ನೆಗಟಿವ್ ಬರೆದದ್ದೇ ಹೆಚ್ಚು: ಎಸ್. ಜಿ. ಸಿದ್ದರಾಮಯ್ಯ

27-03-2024 ಬೆಂಗಳೂರು

ಬೆಂಗಳೂರು: ತುಂಬಾ ಕುತೂಹಲದಿಂದ ಈ ಕೃತಿಯನ್ನ ನಾನು ಓದಿದೆ. ಯಾಕೆಂದ್ರೆ ನಾವು ಅರಸು ರಾಜಕಾರಣ ಕಂಡವರು ಮತ್ತು ಫಲಾನುಭವಿಗ...