ಕಾರಕ-ವಿಬಕ್ತಿ

Date: 15-05-2023

Location: ಬೆಂಗಳೂರು


“ನಾಮಪದ ‘ಬರು’ ಎಂಬ ಕ್ರಿಯಾಪದದೊಂದಿಗೆ ಹೊಂದಿರುವ ಸಂಬಂದವನ್ನು ಮತ್ತು ‘ಮನೆ’ ಎಂಬ ನಾಮಪದ ‘ಬರು’ ಎಂಬ ಕ್ರಿಯಾಪದದೊಂದಿಗೆ ಹೊಂದಿರುವ ಸಂಬಂದವನ್ನು ಕಾರಕ ಎಂದು ಕರೆಯಲಾಗುತ್ತದೆ,'' ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕಾರಕ-ವಿಬಕ್ತಿ' ಎಂಬ ವಿಚಾರ ಕುರಿತು ಬರೆದಿದ್ದಾರೆ.

ವಿಬಕ್ತಿ ಎಂಬುದು ಒಡೆದು ತೋರಿಸುವಂತದ್ದು, ಒಡೆದು ತೋರಿಸಲು ಬರುವಂತದ್ದು ಎಂಬ ಅರ‍್ತವನ್ನು ಪಡೆದುಕೊಂಡಿದೆ. ಸಾಮಾನ್ಯವಾಗಿ ವಿಬಕ್ತಿ ಎಂಬ ಹೆಸರಿನಿಂದ ಪರಿಚಿತವಾಗಿರುವ ವ್ಯಾಕರಣದ ಒಂದು ರಚನೆಯು ಹೆಚ್ಚು ಕುತೂಹಲವನ್ನು ಸೆಳೆಯುವಂತದ್ದಾಗಿದೆ. ಇದಕ್ಕೆ ಕಾರಣಗಳೂ ಹಲವಿರಬಹುದು. ವಿಬಕ್ತಿಯನ್ನು ಅರಿತುಕೊಳ್ಳಬೇಕಾದರೆ ಅದಕ್ಕೆ ಮೂಲವಾಗಿರುವ ಕಾರಕ ಎಂಬ ಇನ್ನೊಂದು ವ್ಯಾಕರಣದ ಪರಿಕಲ್ಪನೆಯನ್ನು ಅರಿತುಕೊಳ್ಳಬೇಕು. ‘ಕರೋತತಿ ಇತಿ ಕಾರಹ’ ಅಂದರೆ ಮಾಡುವಂತದ್ದೆ ಕಾರಕ ಎಂಬುದು ಸಂಸ್ಕ್ರುತದಲ್ಲಿನ ವಿವರಣೆ. ಇಲ್ಲಿ ಕಾರಕ ಮತ್ತು ವಿಬಕ್ತಿ ಈ ಎರಡು ಪದಗಳು, ಪರಿಕಲ್ಪನೆಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡೋಣ.

ಇಲ್ಲಿ ಮಾತುಕತೆಗೆ ಅನುಕೂಲವಾಗಲೆಂದು ‘ಅವಳು’ ‘ಮನೆ’ ಮತ್ತು ‘ಕಟ್ಟು’ ಎಂಬ ಮೂರು ಪದಗಳನ್ನು ತೆಗೆದುಕೊಳ್ಳೋಣ. ಮೂರೂ ಪದಗಳಿಗೆ ಅವುಗಳದೆ ಆದ ಅರ‍್ತ ಎಂಬುದು ಇದೆ. ಅವುಗಳನ್ನು ಬಿಡಿಬಿಡಿಯಾಗಿ ಉಚ್ಚರಿಸಿದಾಗ ತಿಳಿದುಕೊಳ್ಳಲು ಸಾದ್ಯ. ಆದರೆ, ಈ ಮೂರೂ ಪದಗಳನ್ನು ಒಂದು ಸೂತ್ರದಲ್ಲಿ ಹೊಂದಿಸಿ ‘‘ಅವಳು’ ‘ಮನೆ’ ‘ಕಟ್ಟಿದಳು’’ ಎಂದು ಒಂದು ವಾಕ್ಯವಾಗಿ ಉಚ್ಚರಿಸಿದಾಗ ಆ ಪದಗಳನ್ನು ಬಿಡಿಯಾಗಿ ಉಚ್ಚರಿಸಿದಾಗ ದೊರೆಯದ ವಿಶೇಶವಾದ, ಪೂರ‍್ಣವಾದ ಅರ‍್ತವೊಂದು ದೊರೆಯುತ್ತದೆ. ಇಲ್ಲಿ ಪ್ರಶ್ನೆಯೆಂದರೆ ಬಿಡಿಬಿಡಿಯಾಗಿ ಉಚ್ಚರಿಸಿದಾಗ ದೊರೆಯದ ಅರ‍್ತವು ಒಟ್ಟುಗೂಡಿಸಿ ಉಚ್ಚರಿಸಿದಾಗ ಹೇಗೆ ದೊರೆಯುತ್ತದೆ ಎಂಬುದು.

ಸಾಮಾನ್ಯವಾಗಿ ಪ್ರತಿಯೊಂದು ಪದಕ್ಕೂ ಅರ‍್ತ ಇರುತ್ತದೆ. ಆ ಅರ‍್ತ ಎಲ್ಲಿಂದ ಬರುತ್ತದೆ ಎಂಬುದೊಂದು ಸೋಜಿಗ. ಅದರಂತೆಯೆ ಪದಗಳನ್ನು ಪೋಣಿಸಿ ವಾಕ್ಯವೊಂದನ್ನು ರಚಿಸಿದಾಗ ಆ ಪದಗಳಲ್ಲಿ ಇಲ್ಲದ ವಿಶೇಶವಾದ ಅರ‍್ತವೊಂದು ಬಂದು ಪ್ರಾಪ್ತಿಸುತ್ತದೆ. ಹೀಗೆ ಅರ‍್ತವು ಎಲ್ಲಿಂದ ಬರುತ್ತದೆ ಎಂಬುದು ಇನ್ನೊಂದು ಸೋಜಿಗ. ವಾಕ್ಯ ಹಂತದಲ್ಲಿ ಬಂದು ಒದಗುವ ಅರ‍್ತಕ್ಕೆ ಒಂದು ಹಂತಕ್ಕೆ ವಿವರಣೆ ಕೊಡುವುದಕ್ಕೆ ಸಾದ್ಯ. ಈ ವಿವರಣೆಯೆ ಮೂಲಬೂತವಾಗಿ ಕಾರಕ ಎಂಬ ಪರಿಕಲ್ಪನೆಯಾಗಿದೆ. ಸಂಸ್ಕ್ರುತದ ಹಳೆಯ ವ್ಯಾಕರಣವಾದ ಪಾಣಿನಿಯ ಅಶ್ಟಾದ್ಯಾಯಿಯಲ್ಲಿ ಕಾರಕದ ವಿವರಣೆ ಇದೆ. ಬಹುಶಾ ಕಾರಕ ಪರಿಕಲ್ಪನೆ ಪಾಣಿನಿಯದಿರಬಹುದು. ಇಲ್ಲಿ ಮಾತಾಡಿದ ವಾಕ್ಯವೊಂದನ್ನು ರಚಿಸುವಾಗ ಪದಗಳನ್ನು ಪೋಣಿಸಿದಾಗ ಅವುಗಳ ನಡುವೆ ಒಂದು ಬಗೆಯ ಸಂಬಂದ ಉಂಟಾಗುತ್ತದೆ. ಇದನ್ನೆ, ಈ ಸಂಬಂದವನ್ನೆ ಕಾರಕ ಎಂದು ಕರೆಯಲಾಗುವುದು. ಇದು ಕಣ್ಣಿಗೆ ಕಾಣದಂತೆ ವಾಕ್ಯದ ಒಳಗೆ ಪದಗಳ ನಡುವೆ ಬೆಸೆದುಕೊಂಡಿರುತ್ತದೆ. ಆದ್ದರಿಂದಲೆ ಕಾರಕ ಎಂದರೆ ಸಂಬಂದವನ್ನು ಉಂಟು ಮಾಡುವಂತದ್ದು ಎಂದು ಹೇಳಲಾಗುವುದು. ಕಾರಕ ಎಂಬುದಕ್ಕೆ ವಾಕ್ಯದಲ್ಲಿನ ಪದಗಳ ನಡುವಿನ ಸಂಬಂದ ಎಂದು ವ್ಯಾಕ್ಯಾನಿಸಲಾಗುವುದು.

ಸಾಮಾನ್ಯವಾಗಿ ಪದಗಳ ನಡುವೆ ಇರುವ ಸಂಬಂದ ಎಂದರೆ, ವಾಕ್ಯದಲ್ಲಿನ ನಾಮಪದ ಮತ್ತು ಕ್ರಿಯಾಪದ ಇವುಗಳ ನಡುವಿನ ಸಂಬಂದ ಎಂಬ ವಿವರಣೆ ಇದೆ. ಇದನ್ನು ಸಂಸ್ಕ್ರುತದ ವಯ್ಯಾಕರಣಿಯಾದ ಪಾಣಿನಿಯೂ, ಕನ್ನಡ ವಯ್ಯಾಕರಣಿಯಾಗಿರುವ ಕೇಶಿರಾಜನೂ ಹಾಗೆಯೆ ವಿಬಕ್ತಿ ವ್ಯಾಕರಣ ಸಿದ್ದಾಂತವನ್ನು ಮಂಡಿಸಿದ ಆದುನಿಕನಾದ ಚಾರ‍್ಲಸ್ ಪಿಲ್ಮೋರ್ ಕೂಡ ಇದೆ ಬಗೆಯ ವಿವರಣೆಯನ್ನು ಕೊಡುತ್ತಾನೆ. ಅಂದರೆ, ಮೇಲೆ ಕೊಟ್ಟ ವಾಕ್ಯದಲ್ಲಿ ‘ಅವಳು ಮನೆಗೆ ಬಂದಳು’ ಇದರಲ್ಲಿ ‘ಅವಳು’, ‘ಮನೆ’ ಇವು ನಾಮಪದಗಳು ಮತ್ತು ‘ಬರು’ ಇದು ಕ್ರಿಯಾಪದ. ‘ಅವಳು’ ಎಂಬ

ನಾಮಪದ ‘ಬರು’ ಎಂಬ ಕ್ರಿಯಾಪದದೊಂದಿಗೆ ಹೊಂದಿರುವ ಸಂಬಂದವನ್ನು ಮತ್ತು ‘ಮನೆ’ ಎಂಬ ನಾಮಪದ ‘ಬರು’ ಎಂಬ ಕ್ರಿಯಾಪದದೊಂದಿಗೆ ಹೊಂದಿರುವ ಸಂಬಂದವನ್ನು ಕಾರಕ ಎಂದು ಕರೆಯಲಾಗುತ್ತದೆ.

ಆದರೆ, ವಾಕ್ಯದಲ್ಲಿ ಎರಡು ನಾಮಪದಗಳ ನಡುವೆಯೂ ನೇರ ಸಂಬಂದ ಇರಲು ಸಾದ್ಯ. ಈ ವಾಕ್ಯವನ್ನು ಗಮನಿಸಿ, ‘ನನ್ನ ಮನೆ ಅಲ್ಲಿದೆ’. ಇದರಲ್ಲಿ ‘ನಾನು’ ಮತ್ತು ‘ಮನೆ’ ಎಂಬ ಎರಡು ನಾಮಪದಗಳು ಇವೆ ಮತ್ತು ಇವುಗಳ ನಡುವೆ ಒಂದು ಬಗೆಯ ಸಂಬಂದವೂ ಇದೆ. ಆದರೆ, ಇದನ್ನು ಕಾರಕ ಎಂದು ಕರೆಯಲಾಗುವುದಿಲ್ಲ. ಕೆಲಕೆಲವೆಡೆ ಈ ಎರಡು ನಾಮಪದಗಳ ನಡುವೆ ಇರುವ ಸಂಬಂದವನ್ನು ಕೂಡ ಕಾರಕವೆಂದು ಪರಿಗಣಿಸಿದಂತಿದೆಯಾದರೂ ಈ ವಿಚಾರ ಹೆಚ್ಚು ಚಲನೆಯಲ್ಲಿಲ್ಲ. ಸಂಸ್ಕ್ರುತದ ಪೂರ‍್ವಮೀಮಾಂಸೆಯಲ್ಲಿ ಈ ನಿಲುವು ಕಾಣಿಸುತ್ತದೆ ಎಂದು ಹೇಳಲಾಗುತ್ತದೆ, ಕವಿರಾಜಮಾರ‍್ಗದಲ್ಲಿಯೂ ಇಂತ ನಿಲುವಿಗೆ ಅವಕಾಶವಿದೆ ಎಂದು ಮಾತಾಡಲಾಗಿದೆ.

ವಾಕ್ಯದಲ್ಲಿನ ಪದಗಳ ನಡುವೆ ಇರುವ ಕಾರಕವು ಹಲವು ತೆರನಾಗಿದೆ. ಅಂದರೆ, ವಾಕ್ಯದಲ್ಲಿ ಪದಗಳ ನಡುವೆ ಕಂಡುಬರುವ ಪದಗಳ ನಡುವಿನ ಸಂಬಂದ ಬಗೆಬಗೆಯದಾಗಿರಬಹುದು, ಅದು ಒಂದೆ ರೀತಿಯದಾಗಿರಬೇಕಿಲ್ಲ. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ,

ಅವಳು ಮನೆಯನ್ನು ಕಟ್ಟಿದಳು
ಅವಳು ಮನೆಗೆ ಬಂದಳು
ಅವಳು ಮನೆಯಿಂದ ಬಂದಳು
ಅವಳು ಮನೆಯಲ್ಲಿ ಇದ್ದಾಳೆ

ಇಲ್ಲಿ ನಾಲ್ಕು ವಾಕ್ಯಗಳನ್ನು ಕೊಟ್ಟಿದೆ ಮತ್ತು ನಾಲ್ಕೂ ವಾಕ್ಯಗಳಲ್ಲಿ ‘ಮನೆ’ ಎಂಬ ಶಬ್ದವನ್ನು ಬಳಸಿದೆ. ಎಲ್ಲ ಕಡೆಯೂ ಈ ಶಬ್ದ ಬಿನ್ನ ರೂಪದಲ್ಲಿ ಬಳಕೆಯಾಗಿದೆ, ‘ಮನೆಯನ್ನು’, ‘ಮನೆಗೆ’, ‘ಮನೆಯಿಂದ’ ಮತ್ತು ‘ಮನೆಯಲ್ಲಿ’. ಈ ನಾಲ್ಕೂ ವಾಕ್ಯಗಳಲ್ಲಿ ಕ್ರಿಯಾಪದದ ಜೊತೆ ನಾಮಪದವು ಹೊಂದಿರುವ ಸಂಬಂದವು ಒಂದೆ ತೆರನಾಗಿಲ್ಲ ಎಂಬುದು ಅದರ ಅರ‍್ತವನ್ನು ಗಮನಿಸಿದಾಗ ಸ್ಪಶ್ಟವಾಗಿ ಗೊತ್ತಾಗುತ್ತದೆ. ಹಾಗಾದರೆ, ಇಲ್ಲಿ ಇರುವ ವ್ಯತ್ಯಾಸವನ್ನು ಗುರುತಿಸುವುದು ಹೇಗೆ ಎಂಬುದು ಸಹಜವಾಗಿ ಪ್ರಶ್ನೆಯಾಗುತ್ತದೆ. ಇದಕ್ಕೆ ಕಾರಕ ಎಂಬುದು ಹಲತೆರನಾಗಿದೆ ಎಂದು ವಿವರಿಸಲಾಗುತ್ತದೆ. ಪಾಣಿನಿ ಆರು ಬಗೆಯ ಕಾರಕ ಸಂಬಂದಗಳನ್ನು ವಿವರಿಸಲಾಗುತ್ತದೆ. ಆ ಸಂಬಂದಗಳನ್ನು ಕೆಳಗಿನಂತೆ ಪಟ್ಟಿ ಮಾಡಿದೆ.

ಈ ಕಾರಕ ಸಂಬಂದಗಳನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಮೊದಲು ಇಲ್ಲಿ ಇನ್ನೊಂದು ಅಂಶವನ್ನು ಸ್ಪಶ್ಟ ಮಾಡಿಕೊಳ್ಳಬೇಕು. ಪ್ರತಿಯೊಂದು ವಾಕ್ಯದಲ್ಲಿ ಒಂದು ಕೆಲಸ ಇರುತ್ತದೆ. ಇದನ್ನು ಮುಕ್ಯವಾಗಿ ತಿಳಿದುಕೊಳ್ಳಬೇಕು. ಈ ಕೆಲಸವನ್ನು ಮಾಡುವ ರೀತಿಯನ್ನೆ ವಿದವಿದದ ಕಾರಕವೆಂದು ಅರಿತುಕೊಳ್ಳಲು ಸಹಾಯಕವಾಗುತ್ತದೆ. ಇನ್ನು, ಕಾರಕ ಸಂಬಂದಗಳನ್ನು ಗಮನಿಸೋಣ.

ಕರ‍್ತ್ರು ಕಾರಕ: ವಾಕ್ಯದಲ್ಲಿರುವ ಕೆಲಸವನ್ನು ಮಾಡುವಂತದ್ದು
ಕರ‍್ಮ ಕಾರಕ: ವಾಕ್ಯದಲ್ಲಿರುವ ಕೆಲಸದ ಪರಿಣಾಮಕ್ಕೆ ಒಳಗಾಗುವಂತದ್ದು
ಕರಣ ಕಾರಕ: ವಾಕ್ಯದಲ್ಲಿರುವ ಕೆಲಸಕ್ಕೆ ಸಾದನವಾಗಿ ಬಳಕೆಯಾಗುವಂತದ್ದು
ಸಂಪ್ರದಾನ ಕಾರಕ: ವಾಕ್ಯದಲ್ಲಿರುವ ಕೆಲಸದ ಗುರಿಯಾಗಿರುವಂತದ್ದು
ಅಪಾದಾನ ಕಾರಕ: ವಾಕ್ಯದಲ್ಲಿರುವ ಕೆಲಸದ ಮೂಲವಾಗಿರುವಂತದ್ದು

ಸರಿ, ಇನ್ನು ವಿಬಕ್ತಿ ಎಂಬ ಪದವನ್ನು ಪರಿಚಯಿಸಿಕೊಳ್ಳೋಣ. ವಿಬಕ್ತಿ ಎಂದರೆ ಒಡೆದು ತೋರಿಸುವಂತದ್ದು ಎಂದು ಹೇಳಲಾಯಿತು. ಕಾರಕ ಎಂದರೆ ವಾಕ್ಯವೊಂದರಲ್ಲಿ ಪದಗಳ ನಡುವೆ ಇರುವ ಕಾಣಿಸದ ಸಂಬಂದ. ಈ ಕಾಣಿಸದ ಸಂಬಂದವನ್ನು ಒಡೆದು ತೋರಿಸುವುದು, ಕಣ್ಣಿಗೆ ಕಾಣುವಂತೆ ತೋರಿಸುವುದು ವಿಬಕ್ತಿ. ಅಂದರೆ, ವಾಕ್ಯದಲ್ಲಿನ ಪದಗಳ ಮೇಲೆ ಬಂದು ಸೇರುವ ಪ್ರತ್ಯಯಗಳು. ಈ ಮೇಲೆ ಕೊಟ್ಟಿರುವ ವಾಕ್ಯಗಳಲ್ಲಿ ‘ಮನೆ’ ಎಂಬ ಪದದ ಮೇಲೆ ಸೇರಿರುವ ವಿವಿದ ರೂಪಗಳನ್ನು, ಪ್ರತ್ಯಯಗಳನ್ನು ಗಮನಿಸಿ, -ಅನ್ನು, -ಗೆ, -ಇಂದ, -ಅಲ್ಲಿ. ಈ ಪ್ರತ್ಯಯಗಳು ವಿಬಿನ್ನ ಕಾರಕ ಸಂಬಂದಗಳನ್ನು ಅಬಿವ್ಯಕ್ತಿಸಲು ಬಳಕೆಯಾಗುತ್ತವೆ. ಹಾಗಾದರೆ, ಈ ನಾಲ್ಕು ಪ್ರತ್ಯಯಗಳು ಕ್ರಮವಾಗಿ ಕರ‍್ಮಕಾರಕ, ಸಂಪ್ರದಾನ ಕಾರಕ, ಅಪಾದಾನ ಕಾರಕ ಮತ್ತು ಅದಿಕರಣ ಕಾರಕ ಸಂಬಂದಗಳಾಗಿವೆ.

‘ವಿಬಕ್ತಿ ಪ್ರತ್ಯಯ’ ಎಂಬುದನ್ನೂ ತುಸು ಮಾತಾಡಬಹುದು. ನಾಮಪದದ ಮೇಲೆ ಕಾರಕ ಸಂಬಂದ ಅಬಿವ್ಯಕ್ತಿಗೆ ಬಳಕೆಯಾಗುವ ಪ್ರತ್ಯಯಗಳನ್ನು ವಿಬಕ್ತಿ ಎಂದು ಕರೆಯಲಾಗುತ್ತಿತ್ತು. ಪ್ರತ್ಯಯ ಎನ್ನುವುದು ಒಂದು ಸಾಮಾನ್ಯ ಪದ, ವಿಬಕ್ತಿ ಎಂಬುದು ನಿರ‍್ದಿಶ್ಟ ಪದ. ಆದುನಿಕ ಕಾಲದಲ್ಲಿ ಕ್ರಮೇಣ ವಿಬಕ್ತಿ ಎನ್ನುವುದನ್ನು ವಿಬಕ್ತಿ ಪ್ರತ್ಯಯ ಎಂದು ಕರೆಯಲಾಗುತ್ತದೆ. ಅಂದರೆ, ವಿಬಕ್ತಿ ಮತ್ತು ವಿಬಕ್ತಿ ಪ್ರತ್ಯಯ ಎರಡೂ ಒಂದೆ ಅರ‍್ತದಲ್ಲಿ ಬಳಕೆಯಾಗುತ್ತವೆ.

ಈ ವಿಬಕ್ತಿಗಳಿಗೆ, ಅಂದರೆ ಕಾಣದ ಕಾರಕ ಸಂಬಂದಗಳನ್ನು ಕಾಣುವ ರೀತಿಯಲ್ಲಿ ಅಬಿವ್ಯಕ್ತಗೊಳಿಸುವ ವಿಬಕ್ತಿಗಳನ್ನು ಹೆಸರಿಸುವ ಪದ್ದತಿಯೊಂದಿದೆ. ಕನ್ನಡ ಪರಂಪರೆಯಲ್ಲಿ ಇರುವ ವಿಬಕ್ತಿಗಳನ್ನು ಸಂಸ್ಕ್ರುತದ ಪಾಣಿನಿ ವಿವರಣೆಯಂತೆಯೆ ತೆಗೆದುಕೊಂಡಿದೆ. ಈ ಕೆಳಗಿನ ಪಟ್ಟಿಯನ್ನು ಗಮನಿಸಿ ಇದನ್ನು ಅರಿತುಕೊಳ್ಳಬಹುದು.

ಕರ‍್ಮ ಕಾರಕ ಮಾಡುಗ ಪ್ರತಮಾ ವಿಬಕ್ತಿ
ಕರ‍್ಮ ಕಾರಕ ಆಗುಗ ದ್ವಿತಿಯಾ ವಿಬಕ್ತಿ
ಕರಣ ಕಾರಕ ಸಾದನ ತ್ರುತಿಯಾ ವಿಬಕ್ತಿ
ಸಂಪ್ರದಾನ ಕಾರಕ ಗುರಿ ಚತುರ‍್ತಿ ವಿಬಕ್ತಿ
ಅಪಾದಾನ ಕಾರಕ ಮೂಲ/ಬಿಡುಗಡೆ ಪಂಚಮಿ ವಿಬಕ್ತಿ
ಸಂಬಂದ ಸಂಬಂದ ಶಶ್ಟಿ ವಿಬಕ್ತಿ
ಅದಿಕರಣ ಕಾರಕ ನೆಲೆ ಸಪ್ತಮಿ ವಿಬಕ್ತಿ

ಇಲ್ಲಿ ನಡುವೆ ಬಿಟ್ಟುಹೋಗಿರುವ ಶಶ್ಟಿ ಇದು ಎರಡು ನಾಮಪದಗಳ ನಡುವಿನ ಸಂಬಂದವನ್ನು ಹೇಳುತ್ತದೆ. ಇದು ಕಾರಕವಲ್ಲದಿದ್ದರೂ ವಿಬಕ್ತಿಗಳ ಪಟ್ಟಿಯಲ್ಲಿ ಕಾಣಿಸುತ್ತದೆ. ಆದ್ದರಿಂದ, ಕಾರಕಗಳಾರು, ವಿಬಕ್ತಿಗಳೇಳು ಎಂಬ ವಿವರಣೆ ಕಾಣಿಸುತ್ತದೆ.

ಸಂಬಂದ ಸಂಬಂದ ಶಶ್ಟಿ ವಿಬಕ್ತಿ

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...