ಕಲಾ ಜಗತ್ತಿನ ಉಕ್ಕಿನ ಮನುಷ್ಯ- ರಿಚರ್ಡ್ ಸೆರಾ

Date: 04-05-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ನ್ಯೂಯಾರ್ಕ್ ನ ಪ್ರೋಸೆಸ್ ಆರ್ಟ್ ಕಲಾವಿದ ರಿಚರ್ಡ್ ಸೆರಾ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ರಿಚರ್ಡ್ ಸೆರಾ (Richard Serra)
ಜನನ: 02 ನವೆಂಬರ್, 1938
ಶಿಕ್ಷಣ: ಯೇಲ್ ವಿವಿ, ಅಮೆರಿಕ
ವಾಸ: ತ್ರಿಬೆಕಾ, ನ್ಯೂಯಾರ್ಕ್
ಕವಲು: ಪ್ರೋಸೆಸ್ ಆರ್ಟ್
ವ್ಯವಸಾಯ: ಶಿಲ್ಪಗಳು, ವೀಡಿಯೊ ಆರ್ಟ್

ರಿಚರ್ಡ್ ಸೆರಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲಾವಿದನ ಭಾವನೆಗಳು-ಬೌದ್ಧಿಕ ಕಸರತ್ತಿಗಿಂತ ಅವರ ಕಲಾಕೃತಿ ಮತ್ತು ಅದಕ್ಕೆ ಬಳಸಲಾದ ಮಟೀರಿಯಲ್ ತಾವೇ ಮಾತಾಡಬೇಕು. ಕಲಾಕೃತಿ ಪೂರ್ಣಗೊಂಡ ಬಳಿಕ ಅಲ್ಲಿ ಕಲಾವಿದನಿಗೆ ಪಾತ್ರವಿಲ್ಲ. ಆ ಕಲಾಕೃತಿ ನೆಲೆನಿಂತ ಜಾಗ, ಅಲ್ಲಿ ಅದು ವೀಕ್ಷಕನೊಂದಿಗೆ ಏರ್ಪಡಿಸಿಕೊಳ್ಳುವ ಸಂಬಂಧ, ಅದು ನಿರ್ಮಿಸುವ ವಾತಾವರಣದಲ್ಲಿ ವೀಕ್ಷಕ ಪಡೆಯುವ ಅನುಭವ ಮುಖ್ಯವಾಗುತ್ತದೆ ಎಂದು ಪ್ರತಿಪಾದಿಸುವ ರಿಚರ್ಡ್ ಸೆರಾ 70ರ ದಶಕದಲ್ಲಿ ಮಿನಿಮಲಿಸಂ ಬಳಿಕ ಬಂದ ಆಬ್‌ಸ್ಟ್ರಾಕ್ಟ್ ಎಕ್ಸ್‌ಪ್ರೆಷನಿಸ್ಟ್ ಕಲಾವಿದರಲ್ಲಿ ಪ್ರಮುಖರು ಮತ್ತು ಅಮೆರಿಕದ ಮಹತ್ವದ ಕಲಾವಿದರಲ್ಲಿ ಮುಂಚೂಣಿಯವರಲ್ಲೊಬ್ಬರು ಎಂದು ಪರಿಗಣಿತರಾಗಿದ್ದಾರೆ.

ಕೇವಲ ಕಣ್ಣುಗಳನ್ನು ತಣಿಸುವುದಕ್ಕಿಂತ ಮುಂದೆ ಹೋಗಿ ವೀಕ್ಷಕರು ದೈಹಿಕವಾಗಿ ಪಾಲ್ಗೊಳ್ಳಲು ಸಾಧ್ಯವಾಗಬೇಕು ಎಂದು ಹೇಳುವ ಸೆರಾ, ಬೃಹತ್ ಗಾತ್ರದ ಉಕ್ಕಿನ ಕಲಾಕೃತಿಗಳಿಂದ ಪ್ರಸಿದ್ಧರು; ಅಷ್ಟೇ ವಿವಾದಾತ್ಮಕವಾದವರು. ಈ ಶತಮಾನದ ಅತ್ಯಂತ ವಿವಾದಾತ್ಮಕ ಕಲಾಕೃತಿ Tilted Arc ನ್ಯೂಯಾರಿಕಿನ ಮಾನ್ಯಟನ್‌ನಲ್ಲಿ ಫೆಡರಲ್ ಪ್ಲಾಝಾ ಎದುರು ಅವರು ರಚಿಸಿದಾಗ ಸ್ಥಳೀಯರಿಂದ ಭಾರೀ ಪ್ರತಿರೋಧ ಎದುರಿಸಬೇಕಾಯಿತು. 12 ಅಡಿ ಎತ್ತರ 120ಅಡಿ ಉದ್ದದ ಈ ಉಕ್ಕಿನ ಬಳುಕುಗೋಡೆಯನ್ನು ಸಾರ್ವಜನಿಕ ಒತ್ತಡ, ಸುದೀರ್ಘ ನ್ಯಾಯಾಲಯದ ಹೋರಾಟದ ಬಳಿಕ 1985ರಲ್ಲಿ ಕಿತ್ತು ತೆಗೆಯಲಾಯಿತು. ಆ ಕಲಾಕೃತಿಯ ಮೇಲೆ "Kill Serra" ಎಂದು ಬೆದರಿಕೆಯ ಪೋಸ್ಟರ್ ಹಚ್ಚುವ ತನಕ ಈ ವಿವಾದ ತಲುಪಿತ್ತು.

ಸ್ಪಾನಿಷ್ ಮೂಲದ ಹಡಗುಕಟ್ಟೆಯ ಪ್ಲಂಬರ್ ತಂದೆ ಮತ್ತು ರಷ್ಯನ್ ಯಹೂದಿ ತಾಯಿಗೆ ಜನಿಸಿದ ಸೆರಾಗೆ ಮೊದಲ ಬಾರಿಗೆ ಉಕ್ಕು ಆಕರ್ಷಿಸಿದ್ದು, ತಂದೆ ಕೆಲಸ ಮಾಡುವ ಹಡಗುಕಟ್ಟೆಯಲ್ಲಿ ಹಡಗೊಂದನ್ನು ನೀರಿಗಿಳಿಸುವ ಸಮಾರಂಭದಲ್ಲಿ, ಅಷ್ಟೊಂದು ಭಾರದ ಉಕ್ಕಿನ ತಗಡುಗಳ ದೋಣಿ ಸಮುದ್ರದ ನೀರಿನಲ್ಲಿ ಹತ್ತಿಯಂತೆ ತೇಲಿದಾಗ! ಆರಂಭದಲ್ಲಿ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ ಆಗಿದ್ದ ಸೆರಾ ಬಳಿಕ ಯೇಲ್ ವಿವಿಯಿಂದ ಕಲಾ ಪದವಿ ಪಡೆದರು. ಬಣ್ಣಗಳ ಎರಡು ಆಯಾಮದ ಕಲಾಕೃತಿಗಳು ತನಗೆ ತೃಪ್ತಿ ತರುತ್ತಿಲ್ಲ ಅನ್ನಿಸಿದಾಗ ಮೂರು ಆಯಾಮಗಳ ಶಿಲ್ಪಗಳತ್ತ ಹೊರಳಿಕೊಂಡ ಸೆರಾ, ನಡುವೆ ಅಲ್ಪಕಾಲ ಇಟಲಿಯಲ್ಲಿದ್ದಾಗ ಸ್ಟಫ್ ಮಾಡಿದ ಪ್ರಾಣಿಗಳನ್ನೊಳಗೊಂಡ ಕಲಾಕೃತಿಗಳನ್ನು ರಚಿಸಿ ಅಲ್ಲೂ ವಿವಾದಕ್ಕೀಡಾಗಿದ್ದರು; ಅವರ ಪ್ರದರ್ಶನವನ್ನು ಅಲ್ಲಿನ ಆಡಳಿತ ಮುಚ್ಚಿಸಿತ್ತು.

1966ರಲ್ಲಿ ಅಮೆರಿಕಕ್ಕೆ ಬಂದು ನೆಲೆಸಿದ ಸೆರಾ, ಆರಂಭದಲ್ಲಿ “ಗಟರ್”, “ಪ್ರಾಪ್ಸ್”, ಸ್ಪ್ಲಾಷ್” ಸರಣಿಗಳನ್ನು ರಚಿಸಿದರು ಮತ್ತು ಕ್ರಮೇಣ ದೊಡ್ಡ ಗಾತ್ರದ ಉಕ್ಕಿನ ಸ್ಥಳ ನಿರ್ದಿಷ್ಟ ಕಲಾಕೃತಿಗಳಿಗೆ ಹೊರಳಿಕೊಂಡರು. ಈ ನಡುವೆ ಅವರು ವೀಡಿಯೊ ಕಲಾಕೃತಿಗಳನ್ನೂ ರಚಿಸಿದ್ದಿದೆ. ಉಕ್ಕಿನ ದೊಡ್ಡ ಗಾತ್ರದ ಕಲಾಕೃತಿಗಳನ್ನು ರಚಿಸುವ ವೇಳೆಗೆ ಕಲಾಕೃತಿಗಳು ಮತ್ತು ವೀಕ್ಷಕನ ನಡುವಿನ ಸಂಬಂಧಗಳನ್ನು ಅನ್ವೇಷಿಸುತ್ತಾ ಹೊರಟ ಸೆರಾ ಸಂಗೀತ, ನೃತ್ಯಗಳನ್ನೂ ಇಷ್ಟಪಡುತ್ತಿದ್ದುದರಿಂದ ಅಲ್ಲಿನ ದೃಷ್ಯ ಸಂತುಲನಗಳು ಅವರನ್ನು ಆಕರ್ಷಿಸಿದ್ದವು. ಆ ಸಂತುಲನಗಳನ್ನವರು ತನ್ನ ಸ್ಥಳ ನಿರ್ದಿಷ್ಟ ಕಲಾಕೃತಿಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರು.

ಸಾರ್ವಜನಿಕ ಕಲಾಕೃತಿಗಳ ಬಗೆಗಿನ ಚರ್ಚೆಯನ್ನು ಮುಂಚೂಣಿಗೆ ತಂದ ಸೆರಾ ಅವರ ಪ್ರಭಾವ ತಮ್ಮ ಮೇಲಿದೆ ಎಂದು ಹಲವಾರು ಕಲಾವಿದರು ಮಾತ್ರವಲ್ಲದೇ ವಾಸ್ತುಶಿಲ್ಪಿಗಳು, ನಗರ ಯೋಜನಾ ಪರಿಣಿತರೂ ಅಭಿಪ್ರಾಯಪಡುತ್ತಾರೆ. ಸೆರಾ ಅವರ ಕಲಾಕೃತಿಗಳಿಗೆ, ಅವು ಪೌರುಷ ತೋರಿಸುವಗಂಡೂ ಕಲಾಕೃತಿಗಳ “ಕೊನೆಯುಸಿರು” ಎಂಬ ಟೀಕೆಯೂ ಬಂದದ್ದಿದೆ. ಅವರ ಈ ನಾಟಕೀಯ ಗುಣದ ಬೃಹತ್ ಶಿಲ್ಪಗಳಿಗೆ ಮುಂದುವರಿಕೆಯ ಪ್ರತಿಕ್ರಿಯೆಯಾಗಿ 80ರ ದಶಕದ ಸಮಕಾಲೀನ ಕಲಾ ಜಗತ್ತಿನಲ್ಲಿ ದಿನಬಳಕೆಯ ಸಾಮಾನ್ಯ ವಸ್ತುಗಳು ಸಮಕಾಲೀನ ಕಲಾಕೃತಿಗಳಾಗಿ ಬಳಕೆಯಾಗತೊಡಗಿದವು.

ಅವರ ಕಲಾಕೃತಿಗಳು ಪ್ರಚೋದಕವೂ, ಜನರಿಗೆ ಭಯ ಹುಟ್ಟಿಸಿ ವಿವಾದಾತ್ಮಕವೂ ಆಗುವ ಕುರಿತು ಅವರು ತನ್ನ ಅಭಿಪ್ರಾಯವನ್ನು ಮಂಡಿಸಿದ್ದು ಹೀಗೆ: I understand people are fearful of the pieces but that has to do with their lack of information about how rigorously the pieces are worked out beforehand. If they understood the engineering that went into the pieces, it would relieve their anxiety. They’re probably fearful because the pieces present physical and mechanical propositions they haven’t seen before and are predicated on a balance that looks haphazard even though it is not. (ಬಾಂಬ್ ಮ್ಯಾಗಜೀನಿನಲ್ಲಿ ಡೇವಿಡ್ ಸೀಡ್ನರ್ ನಡೆಸಿದ ಸಂದರ್ಶನ 1993, ಜನವರಿ)

ರಿಚರ್ಡ್ ಸೆರಾ ಅವರ ಟಿಲ್ಟೆಡ್ ಆರ್ಕ್ ವಿವಾದದ ಕಥೆ:

ರಿಚರ್ಡ್ ಸೆರಾ ಸಂದರ್ಶನ:

ಚಿತ್ರ ಶೀರ್ಷಿಕೆಗಳು:

ರಿಚರ್ಡ್ ಸೆರಾ ಅವರ “Nine,” (2019)

 

ರಿಚರ್ಡ್ ಸೆರಾ ಅವರ Band (2006)

 

ರಿಚರ್ಡ್ ಸೆರಾ ಅವರ Belts (1967)

 

ರಿಚರ್ಡ್ ಸೆರಾ ಅವರ Close pin prop (1969-81)

 

ರಿಚರ್ಡ್ ಸೆರಾ ಅವರ Composite 1-9 (2016)

 

ರಿಚರ್ಡ್ ಸೆರಾ ಅವರ Corner splash (1969)

 

ರಿಚರ್ಡ್ ಸೆರಾ ಅವರ NJ-1 (2015)

 

ರಿಚರ್ಡ್ ಸೆರಾ ಅವರ Snake (1994-97)

 

ರಿಚರ್ಡ್ ಸೆರಾ ಅವರ Tearing lead (1968)

 

ರಿಚರ್ಡ್ ಸೆರಾ ಅವರ verb list (1967-68)

ಈ ಅಂಕಣದ ಹಿಂದಿನ ಬರೆಹಗಳು:

ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್

‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ನಾದದ ಇಂಪು ಅಡುಗೆಯ ಕಂಪು- ರಾಗ ಎನ್...

12-05-2021 ಬೆಂಗಳೂರು

ಖ್ಯಾತ ಗಾಯಕಿ, ಲೇಖಕಿ ಹಾಗೂ ಕಿರಾನಾ ಘರಾನೆಯ ಗಾಯಕಿ ಶೀಲಾ ಧರ್ ಅವರ ಆತ್ಮಕಥೆ ‘ರಾಗ ಎನ್ ಜೋಶ್’. ಒಬ್ಬ ವ್...

ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು...

11-05-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ರವೀಂದ್ರನಾಥ ಟ್ಯಾಗೋರರ ಪ್ರಭಾವದಲ್ಲ...

07-05-2021 ಬೆಂಗಳೂರು

ಗುರುದೇವ ರವೀಂದ್ರನಾಥ ಟ್ಯಾಗೋರರ ಸಾಧನಾ ಎಂಬ ಅದ್ಭುತ ಪ್ರಬಂಧಗಳ ಸಂಕಲನ ಮತ್ತು ಕೆಲವು ಕವಿತೆಗಳ ಅಚ್ಚಳಿಯದ ಪ್ರಭಾವದಲ್ಲಿ...