ಕಲಾವಿದರ ದತ್ತಾಂಶ ಸಂಗ್ರಹ ಭರ್ತಿಗೆ ಅರ್ಜಿಗಳ ಆಹ್ವಾನ

Date: 14-05-2022

Location: ಬೆಂಗಳೂರು


ಕರ್ನಾಟಕ ನಾಟಕ ಅಕಾಡಮಿ ವತಿಯಿಂದ ಕಲಾವಿದರ ದತ್ತಾಂಶ ಸಂಗ್ರಹ ಭರ್ತಿಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯ ಕುರಿತು ಜಿಲ್ಲಾ ವ್ಯಾಪ್ತಿಯಿಂದ ಕಲಾವಿದರುಗಳು ಸೇವಾಸಿಂಧು ಫೋರ್ಟಲ್ https://sevasindhu.karnataka.gov.in/ ರ ಮೂಲಕ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಕಲಾವಿದರ ದತ್ತಾಂಶ ಸಂಗ್ರಹ ಅರ್ಜಿಯ ಭರ್ತಿ ಮಾಡುವ ದಿನಾಂಕವನ್ನು ಮೇ 30ರವರೆಗೆ ವಿಸ್ತರಿಸಲಾಗಿದೆ.

ಕಲಾವಿದರ ದತ್ತಾಂಶ ಸಂಗ್ರಹಕ್ಕಾಗಿ ಪಾಲಿಸಬೇಕಾಗಿರುವ ಮಾರ್ಗಸೂಚಿಗಳು: ಕಲಾವಿದರ ನೋಂದಾಣಿಗಾಗಿ ಸೇವಾಸಿಂಧು ಮೂಲಕ ನಿಗದಿತ ಅರ್ಜಿಯನ್ನು ಆನ್ ಲೈನಿನಲ್ಲೇ ಭರ್ತಿ ಮಾಡುವುದು. ಕಲಾವಿದರು ಅರ್ಜಿ ಸಲ್ಲಿಸಲು ಕನಿಷ್ಟ ವಯೋಮಿತಿ 8 ವರ್ಷಗಳು. ಕಲಾಕ್ಷೇತ್ರದಲ್ಲಿ ಕನಿಷ್ಟ 5 ವರ್ಷಗಳ ಕಲಾ ಸೇವೆ ಸಲ್ಲಿಸಿರಬೇಕು. ಅರ್ಜಿದಾರರು ತಾವು ಇರುವ ಸ್ಥಳದಲ್ಲೇ ಮೊಬೈಲ್, ಟ್ಯಾಬ್ ಅಥವಾ ಲ್ಯಾಪ್ ಟಾಪ್ ಮುಖಾಂತರ ನೋಂದಣಿ ಮಾಡಿಕೊಳ್ಳತಕ್ಕದ್ದು. ಗ್ರಾಮೀಣ ಪ್ರದೇಶದವರು ನಾಗರೀಕ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಅರ್ಜಿ ತುಂಬುವ ಪ್ರಕ್ರಿಯೆಯು ಅತ್ಯಂತ ಸರಳವಾಗಿದ್ದು, ಕೆಲವು ಅಂಶಗಳನ್ನು ಹೊರತುಪಡಿಸಿ, ಉಳಿದ ಅಂಶಗಳು ಬಹು ಆಯ್ಕೆ ಮೂಲಕ ತುಂಬಬಹುದಾಗಿದೆ. ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾನಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಸೇರಿದಂತೆ ಎಲ್ಲಾ ಕಲಾವಿದರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ತುಂಬಿಸುವಾಗ ಕೇಳಲಾದ ದಾಖಲೆಗಳನ್ನು ಕಡಿಮೆ ಮೆಗಾಬೈಟ್ (MB) ಇರುವಂತೆ ನೊಡಬೇಕಾಗುತ್ತದೆ. ಇದು ಅಪ್ಲೋಡ್ ಮಾಡಲು ಅನುಕೂಲವಾಗುತ್ತದೆ (KB ಗಳಿಗೆ ಮೀರದಂತೆ). ಪ್ರಮಾಣಪತ್ರಗಳು/ ದಾಖಲೆಗಳು/ ಫೋಟೋಗಳನ್ನು ಆಪ್ಲೋಡ್ ಮಾಡುವಾಗಲೂ ಇದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಕಲಾವಿದರು ಇತ್ತೀಚೆಗೆ ಪ್ರದರ್ಶಿಸಿದ ಕಾರ್ಯಕ್ರಮದ/ ಇದಕ್ಕಾಗಿಯೇ ಚಿತ್ರೀಕರಿಸಿದ ವಿಡಿಯೋ ಲಿಂಕ್ ನಮೂದಿಸಬೇಕಾಗುತ್ತದೆ(ಯುಟ್ಯೂಬ್, ಗೂಗಲ್ ಡ್ರೈವ್ ಇತ್ಯಾದಿ). ಸ್ವೀಕೃತಗೊಂಡ ಅರ್ಜಿ ಪರಿಶೀಲಿಸಿ ಸಮಿತಿಯ ಮುಂದೆ ಬಂದಾಗ ಹೆಚ್ಚಿನ ದಾಖಲೆಗಳು/ ಮಾಹಿತಿಗಳು/ಪುರಾವೆಗಳ ಅವಶ್ಯಕತೆ ಕಂಡುಬಂದಲ್ಲಿ ದಾಖಲಾಗಿರುವ ಮೊಬೈಲ್ ಸಂಖ್ಯೆಯನ್ನು ನೀಡತಕ್ಕದ್ದು. ಅರ್ಜಿ ಭರ್ತಿ ಮಾಡುವಾಗ ಆಧಾರ್ ನಂಬರ್ ಪರಿಶೀಲನೆಗೆ ಒ.ಪಿ.ಟಿ.ಯು ತಾವು ನೀಡಿರುವ ಮೊಬೈಲ್ ದೂರವಾಣಿಗೆ ಬರುತ್ತದೆ. ಇದನ್ನು ಅಧಿಕೃತ ಮೊಬೈಲ್ ನಂಬರ್ ಎಂದೇ ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

MORE NEWS

ಪರಿಷ್ಕೃತ ಪಠ್ಯ ಕೈಬಿಡುವವರೆಗೂ ಸರ್...

25-05-2022 ಬೆಂಗಳೂರು

ಪಠ್ಯಪುಸ್ತಕ ರಚನೆ, ಪರಿಷ್ಕರಣೆ ಹಾಗೂ ಮರುಪರಿಷ್ಕರಣೆ ನೆಪದಲ್ಲಿ ಮೂಲಭೂತವಾದಿತನವನ್ನು ತುಂಬುತ್ತಿರುವ ರಾಜ್ಯ ಸರ್ಕಾರವು ...

‘ಕಡಲ್ಗೊಳ್ಳರ ಸರಹದ್ದಿನಲ್ಲಿ’ ‘ ಒಂ...

25-05-2022 ವಿಜಯನಗರ, ಬೆಂಗಳೂರು

ಬೆಂಗಳೂರಿನ ವಿಜಯನಗರದ ಸೆಂಟ್ರಲ್ ಲೈಬ್ರರಿಯಲ್ಲಿ ಬುಧವಾರ ಆಯೋಸಿದ್ದಸಮಾರಂಭದಲ್ಲಿ ಲೇಖಕಿ ನೇಮಿಚಂದ್ರ ಅವರ“ ಕಡಲ್ಗ...

ಕವಿ ಬಿ.ಆರ್. ಲಕ್ಷ್ಮಣ್ ರಾವ್ ಗೆ ಸ...

25-05-2022 ತುಮಕೂರು

ತುಮಕೂರು ಜಿಲ್ಲೆಯ ತಿಪಟೂರಿನ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು 2022ನೇ ಸಾಲಿನಿಂದ ಹಿರಿಯ ಲೇಖಕರಿಗೆ ಸಾಹಿತ...