ಕಲಬುರಗಿಯಲ್ಲಿ ಕತಾ ಸಂವಾದ

Date: 16-02-2020

Location: ಕಲಬುರಗಿ


ಕಲಬುರಗಿಯ ಸಂವಾದ ಯುವ ಸಂಪನ್ಮೂಲ ಕೇಂದ್ರದಲ್ಲಿ ಕಥಾ ಸಂವಾದ ಜರುಗಿತು. ‘ಬಿ.ವಿ ವೀರಭದ್ರಪ್ಪ ಅವರ ' ಮೂರು ಮೆಟ್ಟಲ ಕಥೆ' ಮತ್ತು ಡಾ. ವಿನಯ ಒಕ್ಕುಂದ ಅವರ 'ಒಂದು ಖಾಸಗಿ ಪತ್ರ' ಕಥೆಗಳ ಓದು ಮತ್ತು ಸಂವಾದ ನಡೆಸಲಾಯಿತು. 

ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ಶಿವಗಂಗಾ ರುಮ್ಮಾ ಯುವಜನರೊಡನೆ ಮೂರು ಮೆಟ್ಟಿಲ ಕಥೆ ಕುರಿತು ಚರ್ಚೆ ನಡೆಸಿದ ಅವರು 'ಒಂದು ಖಾಸಗಿ ಪತ್ರ'ದ ಮುಖಾಂತರ ಒಬ್ಬ ಹುಡುಗಿ/ಮಹಿಳೆ ತನ್ನ ಖಾಸಗಿತನ ಕಳೆದುಕೊಳ್ಳುತ್ತಲೇ ಬೇರೆಯವರ ವಿಚಾರವೂ ತನ್ನ ವಿಚಾರ ಎನ್ನುವ ಹಾಗೆ ಬಿಂಬಿತಳಾಗುತ್ತಾಳೆ. ಒಂದು ಹೆಣ್ಣಿನ ಬದುಕು ಆರಂಭದಿಂದಲೂ ಖಾಸಗಿ ಆಗಿರೋದಿಲ್ಲ. ಮುಗಿಯುವಾಗಲೂ ಕೂಡ ಅದು ಖಾಸಗಿಯಾಗಿರೋದಿಲ್ಲ. ಅದು ಯಾರದೋ ನೆರಳಾಗಿ ಅಂದರೆ ಬೇರೆಯವರ ಖಾಸಗಿತನವನ್ನ ತನ್ನ ಖಾಸಗಿತನವಾಗಿ ಪರಿಭಾವಿಸಬೇಕಾದ ಪತಿಸ್ಥಿತಿ ಬಂದುಬಿಡುತ್ತದೆ. ಅವಳ ನಿಜದ ವ್ಯಕ್ತಿತ್ವ ಎಂಥದ್ದು ಎನ್ನುವುದನ್ನು ಹೇಳಿಕೊಳ್ಳಲು ಅವಳಿಗೆ ಅವಕಾಶಗಳೇ ಸಿಕ್ಕದೇ ಇರುವ ಹಾಗೆ ಇಡೀ ವ್ಯವಸ್ಥೆ ಹೇಗೆ ತನ್ನ ಛಾಪನ್ನ ಮೂಡಿಸಿದೆ ಅನ್ನೋದನ್ನ 'ಒಂದು ಖಾಸಗಿ ಪತ್ರ' ಕಥೆ ತಿಳಿಸುತ್ತದೆ. ವರ್ಗಗುಣ ಮತ್ತು ವರ್ಗ ಪ್ರಜ್ಞೆಯ ಕುರಿತು ಹೇಳುತ್ತದೆ. ಕ್ಲಾಸ್ ಅಂದರೆ ವ್ಯಕ್ತಿಯೋರ್ವನ ಬಳಿ ಇರುವ ಸಂಪತ್ತು, ಪ್ರಭುತ್ವ, ಅಧಿಕಾರವೂ ಆಗಿರಬಹುದು. ವರ್ಗಗುಣ ಯಾವಾಗಲೂ ಯಾವೊಂದರ ಒಡೆತನಕ್ಕೆ ಮಾಲಿಕತ್ವಕ್ಕೆ ಸಂಬಂಧಪಟ್ಟಿರುದನ್ನು ‘ಮೂರು ಮೆಟ್ಟಲ ಕಥೆ’ಯಲ್ಲಿ ಬಿಂಬಿತವಾಗಿದೆ’ ಎಂದು ಕತೆಗಳ ಆಶಯವನ್ನು ಶಿವಗಂಗಾ ರುಮ್ಮಾ ಅವರು ತಿಳಿಸಿದರು.

ನಂತರ ಯುವಜನರೊಡನೆ ಸಂವಾದ ನಡೆಸಿದರು. ಸಂವಾದದಲ್ಲಿ ಚನ್ನಬಸಪ್ಪ ಸರ್, ಸಿಯುಕೆ ಸಂಶೋಧನಾ ವಿದ್ಯಾರ್ಥಿ ಮಧು ಬಿರಾದಾರ, ಬಸಯ್ಯಸ್ವಾಮಿ ಕುಮಲದಿನ್ನಿ, ರವಿಂದ್ರ ಕತ್ತಿ, ಪ್ರದೀಪ್ ಎನ್.ಆರ್ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ರುವಾರಿಯನ್ನು ರುಕ್ಮಿಣಿ ನಾಗಣ್ಣವರ ವಹಿಸಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...