ಕಲಾವಿದರ ಸಾಮಾಜಿಕ ಹೊಣೆಗಾರಿಕೆಯ ಪ್ರತೀಕ ಸಫ್ದರ್ ಹಾಶ್ಮಿ: ನಸೀರುದ್ದೀನ್ ಶಾ

Date: 31-10-2020

Location: ಬೆಂಗಳೂರು


"ಬೀದಿ ನಾಟಕಕಾರ ಸಫ್ಧರ್ ಹಾಶ್ಮಿಯ ಹತ್ಯೆ ನಡೆಯಿತು. ಆದರೆ, ಕರಾಳ ವ್ಯವಸ್ಥೆಯ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ ಕಲಾವಿದ ಸಫ್ದರ್ ಹಾಶ್ಮಿ ಅವರು ಕಲಾವಿದರ ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಗಿದ್ದಾರೆ. ಕಲಾವಿದರು ಇದನ್ನು ಮರೆಯಬಾರದು" ಎಂದು ಬಾಲಿವುಡ್ ಖ್ಯಾತ ನಟ ನಸೀರುದ್ದೀನ್ ಶಾ ಅವರು ಹೇಳಿದರು.

ಲೇಖಕ ಎಂ.ಜಿ. ವೆಂಕಟೇಶ ಅವರು ‘ಹಲ್ಲಾ ಬೋಲ್ ಸಫ್ದರ್ ಹಾಶ್ಮಿ ಸಾವು ಮತ್ತು ಬದುಕು’ ಶೀರ್ಷಿಕೆಯಡಿ ಕನ್ನಡಕ್ಕೆ (ಮೂಲ ಸುಧನ್ವ ದೇಶಪಾಂಡೆ ಅವರ ಇಂಗ್ಲಿಷ್ ಕೃತಿ) ಅನುವಾದಿಸಿದ ಕೃತಿಯನ್ನು ಆನ್ ಲೈನ್ ನಲ್ಲಿ ಲೋಕಾರ್ಪಣೆ ಮಾಡಿದ ನಂತರ ನಸೀರುದ್ದೀನ್ ಅವರು ಮಾತನಾಡಿದರು.

"ಜೀವ ಪರ ಸಂಕಲ್ಪದೊಂದಿಗೆ ಶೋಷಕ-ಉಳ್ಳವರ ಕ್ರೌರ್ಯದ ವಿರುದ್ಧ ಜನಜಾಗೃತಿ ಮೂಡಿಸಲು ಬೀದಿಗೆ ಇಳಿದು ನಾಟಕಗಳನ್ನು ಆಡುತ್ತಿದ್ದ ಸಫ್ದರ್ ಹಾಶ್ಮಿ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗಿತ್ತು. ಸಫ್ದರ್ ಹಾಶ್ಮಿ ಅವರಂತೆ ಬೀದಿಗೆ ಬರುವ ಇತರೆ ಕಲಾವಿದರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಭೀತಿ ಹುಟ್ಟಿಸಲು ಶೋಷಕರ ಸುಪಾರಿ ದುಷ್ಕರ್ಮಿಗಳಿಂದ ಅವರ ಹತ್ಯೆ ನಡೆಸಲಾಗಿತ್ತು. ಆದರೆ, ಶೋಷಣಾ ವ್ಯವಸ್ಥೆಯನ್ನು ಸದಾ ವಿರೋಧಿಸುವುದು ಕಲಾವಿದರ ಸಾಮಾಜಿಕ ಹೊಣೆಗಾರಿಕೆ ಆಗಿದೆ. ಆದ್ಕರಿಂದ, ಸಫ್ದರ್ ಹಾಶ್ಮಿ ಅವರು ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವೇ ಆಗಿದ್ದಾರೆ" ಎಂದು ಅಭಿಪ್ರಾಯಪಟ್ಟರು.

"ತಮ್ಮ ಹತ್ಯೆಗೆ ಸಂಚುಗಳು ನಡೆಯುತ್ತಿದ್ದರ ಬಗ್ಗೆ ಸಫ್ದರ್ ಹಾಶ್ಮಿ ಅವರಿಗೆ ತಿಳಿದಿತ್ತು. ಆದರೆ, ವ್ಯವಸ್ಥೆಯ ವಿರುದ್ಧ ಸತ್ಯ ಹೇಳುವುದೇ ಅವರಿಗೆ ಮುಖ್ಯವಾಗಿತ್ತು. ಕಲಾವಿದನೊಬ್ಬನಿಗೆ ಇಂತಹ ಸಂಕಲ್ಪ-ಗಟ್ಟಿತನ ಬೇಕು. ಇಂದು ನಾವು ಅದನ್ನು ಪ್ರದರ್ಶಿಸುತ್ತೇವೆಯೇ? ಎಂಬುದರ ಅವಲೋಕನ ನಡೆಯಬೇಕಿದೆ. ಕಲಾವಿದರಲ್ಲಿ ಈ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸಫ್ದರ್ ಹಾಶ್ಮಿ ಅವರ ಕುರಿತು ಇಂತಹ ಕಾರ್ಯಕ್ರಮಗಳು ಹೆಚ್ಚಬೇಕು" ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ನಟ ಅಚ್ಯುತ್ ಕುಮಾರ, ಜನವಾದ ಮಹಿಳಾ ಸಂಘಟನೆಯ ಕೆ. ಎಸ್. ವಿಮಲಾ, ಕೃತಿಯ ಮೂಲ ಲೇಖಕ ಸುಧನ್ವ ದೇಶಪಾಂಡೆ, ಅನುವಾದಕ ಎಂ.ಜಿ. ವೆಂಕಟೇಶ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದರು.

MORE NEWS

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...

ಅರಸು ಬಗ್ಗೆ ಆಗಿನ ಪತ್ರಿಕೆಗಳು ನೆಗಟಿವ್ ಬರೆದದ್ದೇ ಹೆಚ್ಚು: ಎಸ್. ಜಿ. ಸಿದ್ದರಾಮಯ್ಯ

27-03-2024 ಬೆಂಗಳೂರು

ಬೆಂಗಳೂರು: ತುಂಬಾ ಕುತೂಹಲದಿಂದ ಈ ಕೃತಿಯನ್ನ ನಾನು ಓದಿದೆ. ಯಾಕೆಂದ್ರೆ ನಾವು ಅರಸು ರಾಜಕಾರಣ ಕಂಡವರು ಮತ್ತು ಫಲಾನುಭವಿಗ...