ಕಲೆ- ಇದ್ದದ್ದು ಇದ್ದಷ್ಟೇ; ಕಂಡದ್ದು ಕಂಡಷ್ಟೇ- ಫ್ರಾಂಕ್ ಸ್ಟೆಲ್ಲಾ

Date: 06-04-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕಾದ ಕಂಟೆಂಪೊರರಿ ಆರ್ಟ್ ಕಲಾವಿದ ಫ್ರಾಂಕ್ ಸ್ಟೆಲ್ಲಾ ಅವರ ಕಲಾ ಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಫ್ರಾಂಕ್ ಸ್ಟೆಲ್ಲಾ (Frank Stella)
ಜನನ: 12 ಮೇ, 1936
ಶಿಕ್ಷಣ: ಪ್ರಿನ್ಸ್ಟನ್ ವಿವಿ, ಅಮೆರಿಕ 
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಂಟೆಂಪೊರರಿ ಆರ್ಟ್, ಪೋಸ್ಟ್-ಪೇಂಟರ್ಲೀ ಅಬ್ಸ್ಟ್ರಾಕ್ಷನ್, ಕಲರ್ ಫೀಲ್ಡ್ ಪೇಂಟಿಂಗ್
ವ್ಯವಸಾಯ:  ಪೇಂಟಿಂಗ್, ಪ್ರಿಂಟ್‌ಗಳು, ಶಿಲ್ಪಗಳು 

ಫ್ರಾಂಕ್ ಸ್ಟೆಲ್ಲಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:   

ಫ್ರಾಂಕ್ ಸ್ಟೆಲ್ಲಾ ಅವರ ಬಗ್ಗೆ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ತಾನು ಸ್ವತಃ ಎಂದೂ ಮಿನಿಮಲಿಸ್ಟ್ ಕಲಾವಿದ ಎಂದು ಕರೆಸಿಕೊಳ್ಳದ ಫ್ರಾಂಕ್ ಸ್ಟೆಲ್ಲಾ ಆ ಕಲಾ ಚಳುವಳಿಗೆ ಕೊಟ್ಟ ಟ್ಯಾಗ್‌ಲೈನ್ “What you see is what you see,” ಇಂದು ಬಹಳ ಚಾರಿತ್ರಿಕ. ಕಲಾಕೃತಿಗಳೆಂದರೆ ಕಲ್ಪನಾ ವಿಲಾಸಕ್ಕೆ ಕಿಂಡಿಗಳು ಎಂಬ ಹಳೆಯ ಕಲ್ಪನೆಯನ್ನು ಮುರಿದು, ಅವು ಎರಡು ಆಯಾಮಗಳ ಕ್ಯಾನ್ವಾಸಿನ ಮೇಲಿನ ಬಣ್ಣಗಳೇ ಹೊರತು ಅದರಲ್ಲಿ ಭಾವ, ಬುದ್ಧಿ ಇತ್ಯಾದಿ ಗುಣವಿಶೇಷಗಳಿರಬೇಕಿಲ್ಲ ಎಂದು ನಿರಾಕರಿಸಿದರು. ಒಂದು ಕಲಾಕೃತಿ ಎಂದರೆ, "a flat surface with paint on it - nothing more," ಎಂಬುದು ಅವರ ನಿಲುವು. ತನ್ನ ಆರಂಭದ ದಿನಗಳಲ್ಲೇ ಆಗ ಚಾಲ್ತಿಯಲ್ಲಿದ್ದ ಆಬ್‍ಸ್ಟ್ರಾಕ್ಟ್ ಕಲಾಕೃತಿಗಳಿಂದ ದೂರನಿಂತು ಒಂದು ಬಣ್ಣದ, ಏರಿಳಿತಗಳಿಲ್ಲದ ಫ್ಲಾಟ್ ಗೆರೆಗಳ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದರು. 23ರ ಎಳೆ ಹರೆಯದಲ್ಲೆ ಅವರ Black Paintings (1958-60) ಸರಣಿ ಇದಕ್ಕೆ ಉದಾಹರಣೆ. 

ಅಮೆರಿಕದ ಪ್ರಸಿದ್ಧ MoMa ಗ್ಯಾಲರಿಯಲ್ಲಿ ಎರಡು ಬಾರಿ ರೆಟ್ರೊಸ್ಪೆಕ್ಟಿವ್ ಪ್ರದರ್ಶನಾವಕಾಶ ಪಡೆದ ಏಕೈಕ ಕಲಾವಿದ ಎಂಬ ಹಿರಿಮೆ ಅವರದು. ಹೆರಿಗೆ ತಜ್ಞ ತಂದೆ- ಫ್ಯಾಷನ್ ಇಲಸ್ಟ್ರೇಟರ್ ತಾಯಿ. ಅಮೆರಿಕನ್-ಇಟಾಲಿಯನ್ ದಂಪತಿಯ ಮೊದಲ ಮಗ ಫ್ರಾಂಕ್, ತನ್ನ ತಂದೆ ವೈದ್ಯಕೀಯ ಕಲಿಯುವ ವೇಳೆ ಮನೆಗಳಿಗೆ ಬಣ್ಣ ಹೊಡೆಯುವ ಪೇಂಟರ್ ಆಗಿ ದುಡಿಯುತ್ತಿದ್ದಾಗ ಪುಟ್ಟ ಹುಡುಗ, ಅಪ್ಪನಿಗೆ ಗೋಡೆಗಳಿಗೆ ಸ್ಯಾಂಡ್ ಪೇಪರ್ ಹಾಕಲು ಸಹಾಯ ಮಾಡುವುದಕ್ಕೆ ಹೋಗುತ್ತಿದ್ದುದಿದೆ. ಫ್ರಾಂಕ್ ಮೊದಲ ಬಾರಿಗೆ ಪೇಂಟು-ಬ್ರಷ್ ಮುಟ್ಟಿದ್ದು ಅಲ್ಲೇ. ತಾಯಿಯ ಆಸಕ್ತಿಯ ಫ್ಯಾಷನ್ ಮ್ಯಾಗಝೀನ್ ಒಂದರಲ್ಲಿ ಆಬ್‌ಸ್ಟ್ರಾಕ್ಟ್ ಎಕ್ಸ್‌ಪ್ರೆಷನಿಸ್ಟ್ ಕಲಾಕೃತಿಯನ್ನು ಹಿನ್ನೆಲೆಯಲ್ಲಿ ಹೊಂದಿದ್ದ ಚಿತ್ರವೊಂದನ್ನು ಕಂಡಾಗ ಫ್ರಾಂಕ್‌ಗೆ ಚಿತ್ರವೆಂದರೆ ಆಕೃತಿಗಳನ್ನು ರಚಿಸುವುದು ಮಾತ್ರವಲ್ಲ ಎಂದು ಮೊದಲ ಬಾರಿಗೆ ಗಮನಕ್ಕೆ ಬಂದದ್ದು. ಪ್ರಿನ್ಸ್‌ಟನ್ ವಿವಿಯಲ್ಲಿ ಚರಿತ್ರೆ ಪದವಿಯ ಜೊತೆಗೆ ಕಲೆಯಲ್ಲಿ ಪುಟ್ಟ ಪುಟ್ಟ ಕೋರ್ಸ್‌ಗಳನ್ನು ಮಾಡುತ್ತಿದ್ದ ಫ್ರಾಂಕ್ ಕಲಾವಿಭಾಗದ ಶಿಕ್ಷಕರ ಜೊತೆ ನ್ಯೂಯಾರ್ಕಿನ ಗ್ಯಾಲರಿಗಳನ್ನು ಸುತ್ತಾಡಿದಾಗ ಅವರಿಗೆ ಕಲಾಜಗತ್ತು ತೆರೆದುಕೊಳ್ಳತೊಡಗಿತು. ಕಲಿಕೆಯ ಬಳಿಕ  ಪೂರ್ವ ನ್ಯೂಯಾರ್ಕಿನಲ್ಲಿ ಸ್ಟುಡಿಯೊ ಒಂದನ್ನು ತೆರೆದು ಕಲಾಕೃತಿಗಳನ್ನು ರಚಿಸತೊಡಗಿದ ಫ್ರಾಂಕ್, ತನ್ನ ಭಿನ್ನ ಶೈಲಿಯ ಕಾರಣಕ್ಕಾಗಿ ಎಳವೆಯಲ್ಲೇ ಗಮನ ಸೆಳೆದರು. 

ಸಾಂಪ್ರದಾಯಿಕ ಚೌಕ-ಆಯತ ಆಕಾರದ ಕ್ಯಾನ್ವಾಸ್‌ಗಳ ಬದಲು ಬೇರೆಬೇರೆ ಆಕಾರದ ಕ್ಯಾನ್ವಾಸ್‌ಗಳನ್ನು ತಯಾರಿಸಿಕೊಂಡು, ಅದರಲ್ಲಿ ಚಿತ್ರಗಳನ್ನು ರಚಿಸತೊಡಗಿದರು, ಕಲಾಕೃತಿಗಳಿಂದ ಲೋಹದ ತುಣುಕು ರಿಲೀಫ್‌ಗಳು ಹೊರಚಾಚತೊಡಗಿದವು; ಮತ್ತು ಕ್ರಮೇಣ ಮೂರು ಆಯಾಮಗಳ ಶಿಲ್ಪಗಳತ್ತ ಅವರ ಗಮನ ಹರಿಯಿತು. ತನ್ನ ಶಿಲ್ಪಗಳು ಕೂಡ "A sculpture is just a painting cut out and stood up somewhere." ಎಂಬುದು ಅವರ ವ್ಯಾಖ್ಯಾನ. 

80-90ರ ದಶಕದಲ್ಲಿ ಬಣ್ಣಗಳ ಭರಪೂರ ಬಳಕೆಯ ಜೊತೆ ಅವರು ಬೃಹತ್ ಗಾತ್ರದ ಶಿಲ್ಪಗಳನ್ನೂ ರಚಿಸಿದರು. Prinz Friedrich von Homburg, Ein Schauspiel, 3X (1998-2001), Miami (1999) ಇತ್ಯಾದಿ ಅವರ ಮಹತ್ವದ ಸಾರ್ವಜನಿಕ ಶಿಲ್ಪಗಳು. ಅಮೆರಿಕದ ಮಹತ್ವದ ಸಮಕಾಲೀನ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿತರಾಗಿರುವ ಫ್ರಾಂಕ್ ಸ್ಟೆಲ್ಲಾ ಅವರನ್ನು ಆಧುನಿಕ ಕಲೆಯ ವಿಕಾಸದಲ್ಲಿ ಮಹತ್ವದ ಕೊಂಡಿ ಎಂದು ಭಾವಿಸಲಾಗುತ್ತದೆ. ಲಿಥೊಗ್ರಫಿ, ಸ್ಕ್ರೀನ್ ಪ್ರಿಂಟಿಂಗ್, ಎಚ್ಚಿಂಗ್ ಇತ್ಯಾದಿ ಮುದ್ರಣತಂತ್ರಗಳನ್ನು ಬಳಸಿ ಕೂಡ ಅವರು ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ. 

ಅಮೆರಿಕನ್ ಕಾದಂಬರಿಕಾರ ಹರ್ಮನ್ ಮೆಲ್ವಿಲ್ ಅವರ ಮೊಬಿ-ಡಿಕ್ ಕಾದಂಬರಿಯಿಂದ ಪ್ರೇರಿತರಾಗಿ ಹಲವು ಕಲಾಕೃತಿಗಳನ್ನು ಫ್ರಾಂಕ್ ರಚಿಸಿದ್ದಾರೆ. ತಮ್ಮ ಅಮೂರ್ತಚಿತ್ರಗಳ ಕಲ್ಪನೆಯನ್ನು ಅದು ಬದಲಿಸಿದ ಬಗ್ಗೆ  ಅವರು ವಿವರಿಸುವುದು ಹೀಗೆ: “I think it changed my idea about abstraction or about what I was doing. Abstraction didn’t have to be limited to a kind of rectilinear geometry or even a simple curve geometry. It could have a geometry that had a narrative impact. In other words, you could tell a story with the shapes. It wouldn’t be a literal story, but the shapes and the interaction of the shapes and colors would give you a narrative sense. You could have a sense of an abstract piece flowing along and being part of an action or activity. That sort of turned me on.” (“ಇಂಟರ್ವ್ಯೂ” ಮ್ಯಾಗಝೀನ್‌ಗೆ 2014, ನವೆಂಬರ್‌ನಲ್ಲಿ ನೀಡಿದ ಸಂದರ್ಶನದಲ್ಲಿ. ಸಂದರ್ಶಕರು: ಸ್ಟೆಲ್ಲಾ ಮೆಕ್ಕಾರ್ಥ್ನಿ) 

ಫ್ರಾಂಕ್ ಸ್ಟೆಲ್ಲಾ ಅವರ ಕಲಾಕೃತಿಗಳು

ಫ್ರಾಂಕ್ ಸ್ಟೆಲ್ಲಾ ಅವರೊಂದಿಗೆ ಮಾತುಕತೆ:  

ಚಿತ್ರ ಶೀರ್ಷಿಕೆಗಳು: 

ಫ್ರಾಂಕ್ ಸ್ಟೆಲ್ಲಾ  ಅವರ title not known (1967) 

 

  ಫ್ರಾಂಕ್ ಸ್ಟೆಲ್ಲಾ  ಅವರ “Ambergris,” (1993), from the “Moby-Dick Deckle Edges” series, courtesy of the National Gallery of Art 

 

 ಫ್ರಾಂಕ್ ಸ್ಟೆಲ್ಲಾ  ಅವರ “Fez (2),” (1964), fluorescent alkyd on canvas, gift of Lita Hornick, digital image © The Museum of Modern Art 

 

ಫ್ರಾಂಕ್ ಸ್ಟೆಲ್ಲಾ  ಅವರ “Firuzabad,” (1970), synthetic polymer paint on canvas, digital image © The Museum of Modern Art. 

ಫ್ರಾಂಕ್ ಸ್ಟೆಲ್ಲಾ  ಅವರ “Grajau I,” (1975), mixed media, aluminum, courtesy of The Glass House, A Site of the National Trust for Historic Preservation, photo by Andy Romer © 2020 Frank Stella 

 

 

 

 

ಫ್ರಾಂಕ್ ಸ್ಟೆಲ್ಲಾ  ಅವರ Gray Scramble (1968-69) 

 

ಫ್ರಾಂಕ್ ಸ್ಟೆಲ್ಲಾ  ಅವರ Harran II (1967) 

ಫ್ರಾಂಕ್ ಸ್ಟೆಲ್ಲಾ  ಅವರ Inflated Star and Wooden Star, aluminum, galvanized steel, and teak sculpture 

ಫ್ರಾಂಕ್ ಸ್ಟೆಲ್ಲಾ  ಅವರ Prinz Friedrich von Homburg, Ein Schauspiel, 3X, (1998-2001) 

 

ಫ್ರಾಂಕ್ ಸ್ಟೆಲ್ಲಾ  ಅವರ Salta nel mio Sacco (1984) 

ಈ ಅಂಕಣದ ಹಿಂದಿನ ಬರೆಹಗಳು: 

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

 

 

 

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...