ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್

Date: 30-11-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಇಪರ್ಫಾರ್ಮೆನ್ಸ್ ಆರ್ಟ್, ಇನ್ಸ್ಟಾಲೇಷನ್ ಆರ್ಟ್, ಮತ್ತು ಸ್ಕಲ್ಪ್ಚರ್ ಕಲಾವಿದ ಡೊನಾಲ್ಡ್ ಕ್ಲಾರೆನ್ಸ್ ಜಡ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಡೊನಾಲ್ಡ್ ಕ್ಲಾರೆನ್ಸ್ ಜಡ್ (Donald Clarence Judd)
ಜನನ: 03 ಜೂನ್, 1928
ಮರಣ:12 ಫೆಬ್ರವರಿ, 1994
ಶಿಕ್ಷಣ: ಕೊಲಂಬಿಯಾ ವಿವಿ, ನ್ಯೂಯಾರ್ಕ್
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಮಿನಿಮಲಿಸ್ಟ್ ಆರ್ಟ್
ವ್ಯವಸಾಯ: ಮಿನಿಮಲಿಸ್ಟ್ ಕಲಾಕೃತಿಗಳು

ಡೊನಾಲ್ಡ್ ಜಡ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಡೊನಾಲ್ಡ್ ಜಡ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಶಿಲ್ಪಗಳನ್ನು ಮತ್ತು ಪೇಂಟಿಂಗ್‌ಗಳನ್ನು ಅವುಗಳಿರುವ ಸ್ವರೂಪದಲ್ಲಿ ತಿರಸ್ಕರಿಸಿ, ಅವು ಭ್ರಮಾತ್ಮಕತೆಯನ್ನು ಸೃಷ್ಟಿಸುವ ಬದಲು ತಾನಿದ್ದಲ್ಲಿ ತನ್ನ ಪಾಡಿಗೆ ಇದ್ದಾಗಲೇ ಅದು ಕಲೆ. ಒಂದು ಕಲಾಕೃತಿಯನ್ನು ಎತ್ತಿ ಪೀಠದ ಮೇಲಿರಿಸಿದಾಗ ಮಾತ್ರ ಅದು ಕಲಾಕೃತಿ ಅಲ್ಲ ಎಂಬ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿದ ಡೊನಾಲ್ಡ್ ಕ್ಲಾರೆನ್ಸ್ ಜಡ್, ಕಲಾಕೃತಿಗಳು ಯಾರೋ ಕೆಲವರ ಆಸ್ವಾದನೆಗೆ ಸೀಮಿತವಾಗಿರುವ ಬದಲು ಹೆಚ್ಚು ಜನರಿಗೆ ತಲುಪುವಂತಾಗಬೇಕು; ಆ ಮೂಲಕ ಕಲೆಯ ಪ್ರಜಾತಾಂತ್ರೀಕರಣ ನಡೆಯಬೇಕೆಂಬುದನ್ನು ಬಲವಾಗಿ ನಂಬಿದವರು.

ಅವರ ಕಾಲದ ಅಮೂರ್ತ ಎಲ್ಸ್‌ಪ್ರೆಷನಿಸ್ಟ್ ಕಲಾವಿದರು ಕಲಾಕೃತಿಗಳಲ್ಲಿ ಕಲಾವಿದನ ಟಚ್ ಇರಬೇಕೆಂಬುದನ್ನು ಪ್ರತಿಪಾದಿಸುತ್ತಿದ್ದ ಹೊತ್ತಿನಲ್ಲೇ, ಫ್ಯಾಕ್ಟರಿಗಳಲ್ಲಿ ತಯಾರಾದ ಹೈ ಫಿನಿಶ್ ಕಬ್ಬಿಣ, ಉಕ್ಕು, ಪ್ಲಾಸ್ಟಿಕ್, ಫ್ಲೆಕ್ಸಿಗ್ಲಾಸ್ ಇತ್ಯಾದಿಗಳನ್ನು ಬಳಸಿ ಫ್ಯಾಕ್ಟರಿ ತಯಾರಿಯ ಸೌಂದರ್ಯವನ್ನೇ ಕಲಾಕೃತಿ ಎಂದು ಪ್ರತಿಪಾದಿಸಿದರು. ಅವರ ಕಲಾಕೃತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುನರಾವರ್ತನೆಗೊಳ್ಳುವ ಜಾಮೆಟ್ರಿಕ್ ಫಾರ್ಮ್‌ಗಳನ್ನು “ಅಲ್ಲಿ ಹೂರಣ ಇಲ್ಲ” ಎಂದು ಅಂದಿನ ಕಲಾವಿಮರ್ಶಕರು ಟೀಕಿಸಿದ್ದೂ ಇದೆ. ಆದರೆ ತನ್ನ ಪ್ರಯತ್ನಗಳಲ್ಲಿ ಕಲೆ ಮತ್ತು ಕಲೆಯ ವೀಕ್ಷಕರ ನಡುವಿನ ದೈಹಿಕ-ಮಾನಸಿಕ ಅಂತರಗಳನ್ನು ಮರುರೂಪಿಸುವ ಮೂಲಕ ಕಲಾಕೃತಿ ಮತ್ತು ವೀಕ್ಷಕರಿಬ್ಬರೂ ಆ ಪರಿಸರದ ಭಾಗವಾಗಿಬಿಡುತ್ತಾರೆ ಎಂಬುದು ಅವರ ಚಿಂತನೆಯಾಗಿತ್ತು.

ಅಮೆರಿಕದ ಮಿಸ್ಸೋರಿ ಪ್ರಾಂತ್ಯದ ಎಕ್ಸೆಲ್ಸರ್ ಸ್ಪ್ರಿಂಗ್ಸ್‌ನಲ್ಲಿ ಜನಿಸಿದ ಜಡ್, ತನ್ನ ಬಾಲ್ಯವನ್ನು ಅಜ್ಜನ ತೋಟದ ಮನೆಯಲ್ಲೇ ಕಳೆದರು. ಹದಿಹರೆಯದಲ್ಲಿ ಸೇನೆ ಸೇರಿ, ಕೊರಿಯಾದಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಸೇನೆಯ ಭಾಗವಾದರು. ಬಳಿಕ ಕೊಲಂಬಿಯಾ ವಿವಿಯಿಂದ ಫಿಲಾಸಪಿ ಮತ್ತು ಕಲಾಚರಿತ್ರೆ ವಿಷಯಗಳಲ್ಲಿ ಪದವಿ ಪಡೆದರು. ನ್ಯೂಯಾರ್ಕಿನ ಸೋಹೋದಲ್ಲಿ ಐದಂತಸ್ಥಿನ ಕಬ್ಬಿಣದ ಪುಟ್ಟ ಕಟ್ಟಡವನ್ನು ತಮ್ಮ ಮನೆ-ಸ್ಟುಡಿಯೋ ಆಗಿ ಪರಿವರ್ತಿಸಿಕೊಂಡ ಜಡ್, ಆರಂಭದಲ್ಲಿ ಉಡ್‌ಕಟ್ ಕಲಾಕೃತಿಗಳನ್ನು ರಚಿಸುತ್ತಿದ್ದರು. ಅವರ ಮೊದಲ ಪ್ರಮುಖ ಕಲಾಪ್ರದರ್ಶನ ನಡೆದದ್ದು 1963ರಲ್ಲಿ. 1970ರ ಹೊತ್ತಿಗೆಲ್ಲ ಅವರು ಮಿನಿಮಲಿಸಂನ ಪ್ರಮುಖ ಪ್ರವರ್ತಕರಾಗಿ ಬೆಳೆದಿದ್ದರು.

ಸ್ವತಃ ಕಲಾವಿಮರ್ಶಕರೂ ಆಗಿ, ಅಮೆರಿಕದ ಪ್ರಮುಖ ಕಲಾ ಮ್ಯಾಗಜೀನ್‌ಗಳಲ್ಲಿ ವಿಮರ್ಶೆ ಬರೆಯುತ್ತಿದ್ದ ಜಡ್ ಅವರ 1964ರ ಪ್ರಬಂಧ “ Specific Objects”, ಇಂದಿಗೂ ಕೂಡ ಮಿನಿಮಲಿಸಂನ ಪರಿಪೂರ್ಣ ವ್ಯಾಖ್ಯಾನ ಎಂದೇ ಪರಿಗಣಿತವಾಗಿದೆ. 20ನೇ ಶತಮಾನದ ಮಧ್ಯಭಾಗದಲ್ಲಿ ಕಾಣಿಸಿಕೊಂಡ ಈ ಮಿನಿಮಲಿಸಂ ಚಳುವಳಿಯ ಪ್ರಮುಖ ನಾಯಕರಾಗಿರುವ ಜಡ್ ಮೇಲೆ ಟೆಕ್ಸಾಸ್‌ನ ಮರುಭೂಮಿ ಅಪಾರ ಪ್ರಭಾವ ಬೀರಿತ್ತು. ಅವರು ಒಂದು ಹಂತದಲ್ಲಿ ಆ ಮರುಭೂಮಿಯ 130 ಚದರ ಕಿಮೀ ಜಾಗವನ್ನು ( ಅಂದಾಜು 32,000 ಎಕರೆ!) ಖರೀದಿಸಿ, ಅಲ್ಲಿ ತನ್ನ ಮತ್ತು ಹಲವು ಕಲಾವಿದರ ಕಲಾಕೃತಿಗಳ ಮ್ಯೂಸಿಯಂ ನಿರ್ಮಿಸಿದರು ಅದರ ದೇಕರೇಕಿಗಾಗಿ ಸಿನ್ಸಿನಾಟಿ ಫೌಂಡೇಷನ್ ಕೂಡ ಸ್ಥಾಪನೆಗೊಂಡಿತು. ಈ ಕೇಂದ್ರ ಈಗ ಮ್ಯೂಸಿಯಂ ಮಾತ್ರವಲ್ಲದೇ ಜಗತ್ತಿನಾದ್ಯಂತ ಕಲಾವಿದರ ರೆಸಿಡೆನ್ಸಿ, ಕಲಾ ಸಂಶೋಧನಾ ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ.

ಕಲಾ ಸಿದ್ಧಾಂತಿಯಾಗಿರುವ ಜೊತೆಗೆ ಉಪನ್ಯಾಸಕರೂ, ಪೀಠೋಪಕಣಗಳ ವಿನ್ಯಾಸಕರೂ ಆಗಿದ್ದ ಜಡ್ ಅವರ ಕಲಾಕೃತಿಗಳು ಜಗತ್ತಿನಾದ್ಯಂತ ಎಲ್ಲ ಪ್ರಮುಖ ಸಮಕಾಲೀನ ಕಲಾ ಗ್ಯಾಲರಿಗಳಲ್ಲಿ, ಮ್ಯೂಸಿಯಂಗಳಲ್ಲಿ ಇವೆ. ಜಡ್ 1994ರಲ್ಲಿ ಲಿಂಫೋಮಾಕ್ಕೆ ಬಲಿಯಾದರು. 1964ರಲ್ಲಿ ನೃತ್ಯ ಕಲಾವಿದೆ ಜೂಲಿ ಫಿಂಚ್ ಅವರ ಜೊತೆ ಮದುವೆ ಆಗಿದ್ದ ಜಡ್, ಅವರ ಜೊತೆ ವಿಚ್ಛೇದನದ ಬಳಿಕ ಕಲಾವಿದೆ ಲಾರೆಟಾ ವಿನ್ಸಿಯಾರೆಲಿ ಅವರ ಜೊತೆ ಬದುಕಿದರು, ಬಳಿಕ, ಈಗ ಸಿನ್ಸಿನಾಟಿ ಫೌಂಡೇಷನ್ ನಿರ್ದೇಶಕಿ ಆಗಿರುವ ಮಾರಿಯಾನ್ ಸ್ಟೋಕ್‌ಬ್ರ್ಯಾಂಡ್ ಅವರ ಜೊತೆ ಬದುಕಿದ್ದರು. ಮಾರುಕಟ್ಟೆಯಲ್ಲೂ ಅವರಿಗೆ ಯಶಸ್ಸು ಸಿಕ್ಕಿತ್ತು.

ಡೊನಾಲ್ಡ್ ಜಡ್ ಅವರ ಕಲಾಕೃತಿಗಳ ಕುರಿತು ಸಂವಾದ:

ಡೊನಾಲ್ಡ್ ಜಡ್ ಅವರ ಕುರಿತ ಡಾಕ್ಯುಮೆಂಟರಿ:

ಚಿತ್ರ ಶೀರ್ಷಿಕೆಗಳು:
ಡೊನಾಲ್ಡ್ ಜಡ್ ಅವರ 100 untitled works in mill aluminum (1982-1986)

ಡೊನಾಲ್ಡ್ ಜಡ್ ಅವರ Inside the Judd retrospective at the MoMA Photo- Courtesy of MoMA

ಡೊನಾಲ್ಡ್ ಜಡ್ ಅವರ untitled - (1991)

ಡೊನಾಲ್ಡ್ ಜಡ್ ಅವರ untitled (1956)

ಡೊನಾಲ್ಡ್ ಜಡ್ ಅವರ untitled (1962)

ಡೊನಾಲ್ಡ್ ಜಡ್ ಅವರ untitled (1967)

ಡೊನಾಲ್ಡ್ ಜಡ್ ಅವರ untitled (1973)

ಡೊನಾಲ್ಡ್ ಜಡ್ ಅವರ untitled (1978)

ಡೊನಾಲ್ಡ್ ಜಡ್ ಅವರ untitled (1988)

ಡೊನಾಲ್ಡ್ ಜಡ್ ಅವರ untitled (1990)

ಡೊನಾಲ್ಡ್ ಜಡ್ ಅವರ untitled (1991)

ಡೊನಾಲ್ಡ್ ಜಡ್ ಅವರ Untitled (for Leo Castelli) (1977)

ಈ ಅಂಕಣದ ಹಿಂದಿನ ಬರೆಹಗಳು:
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...