'ಕವಿ ಕಾಳಿದಾಸನ ಪೋಷಾಕು ತೊಟ್ಟು ಸಂಭ್ರಮಿಸಬೇಕಿದೆ'

Date: 11-11-2019

Location: ಬೆಂಗಳೂರು


ಶ್ರೀಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ವೇಷಭೂಷಣ ತೊಟ್ಟು ಸಂಭ್ರಮಿಸುವ ರೀತಿಯಲ್ಲಿ ಕವಿರತ್ನ ಕಾಳಿದಾಸನ ಉಡುಗೆ ತೊಡುಗೆ ತೊಟ್ಟು ಸಂಭ್ರಮಾಚರಣೆ ಮಾಡಬೇಕಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಅಭಿಪ್ರಾಯ ಪಟ್ಟರು. ಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘವು ಹೊರ ತಂದ ಕಾಳಿದಾಸನ ಮೇಘದೂತ ವಿಭಿನ್ನ ಕೋನಗಳ ಅವಲೋಕನ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಗ್ಲ ಕವಿ ಶೇಕ್ಸ್‌ಪಿಯರ್‌ ಅವರ ಹುಟ್ಟೂರಿನಲ್ಲಿ ಒಂದು ವಾರ ಶೇಕ್ಸ್‌ಪಿಯರ್ ಉಡುಗೆ-ತೊಡುಗೆ ತೊಟ್ಟು ಎಲ್ಲಿ ನೋಡಿದರೂ ಅವರ ಭಾವಚಿತ್ರ ಪ್ರದರ್ಶಿಸಿ ಸಂಭ್ರಮಿಸುತ್ತಾರೆ. ಹಾಗೆಯೇ ನಾವು ಕೂಡ ಕವಿ ಕಾಳಿದಾಸನನ್ನು ಜೀವಂತವಾಗಿರಿಸುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಒಂದು ನಿರ್ದಿಷ್ಟ ದಿನ ಕಾಳಿದಾಸನ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸುವ ಕಾರ್ಯಕ್ರಮ ರೂಪಿಸಬೇಕು.

ಸಂಸ್ಕೃತ ಮೇಘದೂತ ಕವಿಯನ್ನು ಲೇಖಕ ಪುರುಷೋತ್ತಮ ದಾಸ ಹೆಗ್ಡೆ ಅವರು ವಿಭಿನ್ನ ಕೋನಗಳ ಮೂಲಕ ಸೃಷ್ಟಿಸಿರುವ ಪುಸ್ತಕ ಹೊರ ತಂದಿದ್ದಾರೆ. ಸಂಸ್ಕೃತ ಗ್ರಂಥವನ್ನು ಅನುವಾದಿಸುವುದು ಸುಲಭದ ಕಾರ್ಯವಲ್ಲ. ಅಂತಹ ಕಾರ್ಯವನ್ನು ಹೆಗ್ಡೆಯವರು ಮಾಡಿದ್ಧಾರೆ ಎಂದು ಶ್ಲಾಘಿಸಿದರು. ಮೇಘದೂತ ಪ್ರೀತಿ-ಪ್ರೇಮವನ್ನು ನಿವೇದನೆ ಮಾಡಿಕೊಳ್ಳುವ ವಸ್ತುವನ್ನು ಈ ಕೃತಿ ಒಳಗೊಂಡಿದೆ. ಮೇಘವೇ ದೂತ. ನಳದಂಪತಿಯ ಕೃತಿಯಲ್ಲಿ ಹಂಸಪಕ್ಷಿಯೇ ದೂತ. ಹಾಗೆಯೇ ರಾಮಾಯಣದಲ್ಲಿ ರಾಮನಿಗೆ ಹನುಮಂತ ದೂತ ಎಂದು ವ್ಯಾಖ್ಯಾನಿಸಿದರು.

ಜಗತ್ತಿನ ಶ್ರೇಷ್ಠ ಕವಿ ಶೇಕ್ಸ್‌ಪಿಯರ್‍ಗೆ ಸರಿಸಮಾನದ ಕವಿ ಎಂದರೆ ಕಾಳಿದಾಸ. ವರನಟ ಡಾ. ರಾಜ್‍ಕುಮಾರ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಕವಿರತ್ನ ಕಾಳಿದಾಸನನ್ನು ಹೆಚ್ಚು ಜನರಿಗೆ ಪರಿಚಯಿಸಿದರು. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ರಾಜ್‍ಕುಮಾರ್ ಅವರ ಅಭಿನಯ ರೋಮಾಂಚನ ಉಂಟು ಮಾಡುತ್ತದೆ. ಅಂತಹ ಕಲಾವಿದ ಮತ್ತೊಮ್ಮೆ ಹುಟ್ಟುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘದ ಅಧ್ಯಕ್ಷ ಟಿ.ದೇವರಾಜ, ಕವಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ.ನಾರಾಯಣಘಟ್ಟ, ಸುವರ್ಣಮುಖಿ ಸಂಸ್ಕೃತಿ ಧಾಮದ ಆಚಾರ್ಯ ನಾಗರಾಜ್, ಕುರುಬರ ಸಂಘದ ಕಾರ್ಯಾಧ್ಯಕ್ಷ ಲಿಂಗಪ್ಪ, ಲೋಕೋಪಯೋಗಿ ಪ್ರಧಾನ ಇಂಜಿನಿಯರ್ ಗುರುಪಾದ ಸ್ವಾಮಿ, ಸಂಘದ ಕಾರ್ಯದರ್ಶಿ ದೊಡ್ಡೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

 

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...