ಕನಕದಾಸ ಅಧ್ಯಯನ ಕೇಂದ್ರಕ್ಕೆ ಅಧಿಕಾರೇತರ ಸದಸ್ಯರ ನೇಮಕ

Date: 22-09-2021

Location: ಬೆಂಗಳೂರು


ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರನ್ನ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕುರಿತು ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಅನುಷ್ಟಾನಗಳ ದೃಷ್ಠಿಯಿಂದ ಕಾರ್ಯಾನುಷ್ಠಾನ ಮಂಡಳಿಗೆ ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸಮಿತಿಯನ್ನ ಪುನರ್ ರಚಿಸಿ ಆದೇಶ ಹೊರಡಿಸಲಾಗಿದೆ.

ಡಾ.ಶುಭ ಮರವಂತೆ, ರಾಯಚೂರಿನ ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಮೈಸೂರಿನ .. ಭಾಸ್ಕರ್, ಮಂಗಳೂರಿನ ಧನಂಜಯ ಕುಂಬ್ಳೆ, ಮೈಸೂರಿನ ಜ್ಯೋತಿ ಶಂಕರ್, ಬೆಂಗಳೂರಿನ ಡಾ. ಎನ್.ಆರ್ ಲಲಿತಾಂಬ , ಅವರನ್ನ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

MORE NEWS

ಸಂಘ ಗೀತೆ ರಚನೆಕಾರ, ಪ್ರಸಿದ್ಧ ಕವಿ...

25-10-2021 ಬೆಂಗಳೂರು

'ಎಲ್ಲಾ ಭೇದ ಮರೆತು, ಬನ್ನಿರಿ ನಾವು ಸಮಾನ' ಎಂಬ ಪ್ರಖ್ಯಾತ ಸಂಘ ಗೀತೆಯ ರಚನೆಕಾರ, ಪ್ರಸಿದ್ಧ ಕವಿ ಮತ್ತು ಹಿರಿ...

ಖಗೋಳಶಾಸ್ತ್ರದ ‘ಗಣಿತಗನ್ನಡಿ’ ಸಂಶೋ...

24-10-2021 ಮೀಟ್.ಗೂಗಲ್

ಖಗೋಳಶಾಸ್ತ್ರ ಕುರಿತು ಅತ್ಯಂತ ಖಚಿತವಾದ, ನಿಖರವಾದ ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡ ಹಾಗೂ ತಾಳೆಗರಿಯಲ್ಲಿ ದಾಖಲಾಗಿರು...

‘ಕನ್ನಡ ಕಾಯಕ ವರ್ಷ’ ಕನ್ನಡ ಕೈಬರಹದ...

24-10-2021 ಬೆಂಗಳೂರು

‘ಕನ್ನಡ ಕಾಯಕ ವರ್ಷ’ ಶೀರ್ಷಿಕೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ...