ಕನ್ನಡದ ಪ್ರಣತಿ ಒಡೆಯದೆ, ಜ್ಯೋತಿ ಕಳೆಯದೆ ಪ್ರಕಾಶಿಸಬೇಕಿದೆ-ಉತ್ತಂಗಿ ಚೆನ್ನಪ್ಪ

Date: 29-01-2020

Location: ಬೆಂಗಳೂರು


ಕಲಬುರಗಿಯಲ್ಲಿ ನಡೆದ (1949ರ ಮಾರ್ಚ್ 5 ರಿಂದ 7ರ) 32ನೇ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ರೆವೆರೆಂಡ್ ಉತ್ತಂಗಿ ಚೆನ್ನಪ್ಪ ಅವರು ಅಲಂಕರಿಸಿದ್ದರು. ‘ತಿರುಳ್ಗನ್ನಡ ತಿರುಕ’ ಎಂದು ಗುರುತಿಸಲಾಗುತ್ತಿದ್ದ ಉತ್ತಂಗಿ ಚೆನ್ನಪ್ಪ ಅವರು ಧಾರವಾಡದ ಬಾಷೆಲ್ ಮಿಷೆನ್ ಸಂಸ್ಥೆಯಲ್ಲಿ ನಂತರ ವಿವಿಧೆಡೆ ಸುಮಾರು 33 ವರ್ಷ ಕಾಲ ಕ್ರಿಶ್ಚಿಯನ್ ಧರ್ಮೋಪದೇಶಕರಾಗಿದ್ದರು. ಎರಡು ಸಾವಿರ ವಚನಗಳಿರುವ ಸರ್ವಜ್ಞನ ಕೃತಿಯನ್ನು ಮೊದಲ ಬಾರಿಗೆ ಸಂಪಾದಿಸಿ ಪ್ರಕಟಿಸಿದವರು ಚೆನ್ನಪ್ಪ. ‘ಅನುಭವ ಮಂಟಪ; ದಿ.ಹಾರ್ಟ್ ಆಫ್ ವೀರಶೈವಿಜಂ’, ಮೋಳಿಗೆಯ ಮಾರಯ್ಯ ಹಾಗೂ ಮಹಾದೇವಿ ರಾಣಿಯರ ವಚನಗಳು, ಸಿದ್ಧರಾಮ ಸಾಹಿತ್ಯ ಸಂಗ್ರಹ, ಬಸವೇಶ್ವರನೂ ಕರ್ನಾಟಕದ ಅಭ್ಯುದಯವೂ, ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ ಸೇರಿದಂತೆ ಹತ್ತು ಹಲವು ಕೃತಿಗಳನ್ನು, ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ.  ಉತ್ತಂಗಿ ಚೆನ್ನಪ್ಪ ಅವರ ಆಯ್ದ ಅಧ್ಯಕ್ಷೀಯ ನುಡಿಗಳನ್ನು ’ಬುಕ್‌ ಬ್ರಹ್ಮ’ ಇಲ್ಲಿ ನೀಡುತ್ತಿದೆ.

 ***

ಪ್ರಾಂತೀಯ ಇಲ್ಲವೇ ಪ್ರಾದೇಶಿಕ ಭಾಷೆಯಾಗಿರುವ ಕನ್ನಡಕ್ಕೆ ಪ್ರಥಮ ಸ್ಥಾನವೂ ರಾಷ್ಟ್ರಭಾಷೆಯಾದ ಹಿಂದಿ ನುಡಿಗೆ ದ್ವಿತೀಯ ಸ್ಥಾನವೂ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ಆಂಗ್ಲ ಭಾಷೆಗೆ ತೃತೀಯ ಸ್ಥಾನವೂ ಸಲ್ಲಬೇಕೆಂದು ನನ್ನ ಅಭಿಪ್ರಾಯ.

***

ಕನ್ನಡ ನಾನು-ನುಡಿಗಳ ಸೇವೆಗಾಗಿ (ಕ್ರೈಸ್ತರಾದ) ನಾವಿನ್ನೂ ಮುಂದಾಗಬೇಕಿದೆ. ಕನ್ನಡ ನಾಡನ್ನು ಕಟ್ಟುವ, ಕನ್ನಡ ನುಡಿಯನ್ನು ಸಂಸ್ಕರಿಸುವ ಮಹತ್ಕಾರ್ಯದಲ್ಲಿ ನಾವೆಲ್ಲರೂ ಕನ್ನಡಿಗರಿಗೆ ನೆರವಾಗಬೇಕು. ಅವರೊಡನೆ ಸಮರಸವಾಗಿ ಬೆರೆತು ಬಾಳಬೇಕು. ಕನ್ನಡ ನಾಡು ನಮ್ಮಿಂದ ನುಡಿಯ ಸೇವೆಯನ್ನು ನಿರೀಕ್ಷಿಸುತ್ತದೆ.

***

ಕನ್ನಡದ ಪ್ರಣತಿ ಒಡೆಯದೆ ಕನ್ನಡ ಜ್ಯೋತಿ ಕಳೆಯದೆ ಕನ್ನಡದ ಮುಂದಿನ ಪೀಳಿಗೆ ಪ್ರಭುದೇವರಂತೆ ಪ್ರಕಾಶಿಸಬೇಕಾದರೆ ಇಂದಿನ ನಾವು ಕೆಲವರು ಚೆನ್ನಬಸವಣ್ಣನವರಂತೆ ಬತ್ತಿಯಾಗಿ ಸುಡಬೇಕು; ಇನ್ನೂ ಕೆಲವರು ಬಸವಣ್ಣನವರಂತೆ ಎಣ್ಣೆಯಾಗಿಯೂ ಸುಡಬೇಕು; ಕೊನೆಯ ಹನಿಯವರೆಗೆ!

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...