ಕನ್ನಡ ಸಾಹಿತ್ಯವನ್ನು ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಶೀಘ್ರವೇ  ಸಮೀಕರಿಸಬೇಕಿದೆ

Date: 05-02-2020

Location: ಕಲಬುರಗಿ ( ಚೆನ್ನಣ್ಣ ವಾಲೀಕಾರ ವೇದಿಕೆ)


ಕನ್ನಡ ಸಾಹಿತ್ಯವನ್ನು ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಶೀಘ್ರವೇ ಸಮೀಕರಿಸುವತ್ತ ಗಮನ ನೀಡದಿದ್ದರೆ ಕನ್ನಡ ಭಾಷೆ ಅಭಿವೃದ್ಧಿಯಲ್ಲಿ ಬಹು ದೊಡ್ಡ ಆತಂಕ ಎದುರಿಸಬೇಕಾಗುತ್ತದೆ ಎಂದು ತಂತ್ರಜ್ಞರು ಸಾಮೂಹಿಕವಾಗಿ ಎಚ್ಚರಿಕೆ ನೀಡಿದರು. ಅಂಬೇಡ್ಕರ್‌ ಸಭಾಂಗಣದ ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಕನ್ನಡ ಭಾಷೆ: ಹೊಸ ತಂತ್ರಜ್ಞಾನ’ ಗೋಷ್ಠಿಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ತಂತ್ರಜ್ಞ ಸುಧೀಂದ್ರ  ಹಾಲ್ದೊಡ್ಡೇರಿ ಮಾತನಾಡಿ “ಎಲ್ಲಾ ಪರಕೀಯ ಭಾಷೆಗಳ ದಾಳಿಯನ್ನು ತಡೆದುಕೊಂಡು ಈಗಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಅನನ್ಯ-ಸಧೃಡವಾದ ಭಾಷೆ ಕನ್ನಡ. ಸಾಹಿತ್ಯವನ್ನು ಓದುಗರಿಗೆ ಮುಟ್ಟಿಸುವುದು ಹಿಂದೆಂಗಿಂತ ವೇಗ, ಸರಳತೆ ಮತ್ತು ಅಗ್ಗತೆಯನ್ನು ಕಂಪ್ಯೂಟರ್‌, ಮೋಬೈಲ್ ಬಳಕೆ ಹೆಚ್ಚಿಸಿವೆ” ಎಂದು ಅಭಿಪ್ರಾಯ ಪಟ್ಟರು.  

“ತಂತ್ರಜ್ಞಾನ ಹೊಸದಾಗಿ ಹೆಜ್ಜೆ ಇಡುವುದರೊಂದಿಗೆ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ತರುತ್ತದೋ ಎಂಬ ಆತಂಕವನ್ನು ಸಹ ತರುತ್ತಿದೆ. ಈ ಆತಂಕವನ್ನು ಹಿಂದಿಟ್ಟು ಹೊಸ ಕನ್ನಡ ಸಾಹಿತ್ಯವನ್ನು ನಾವು ತಂತ್ರಜ್ಷಾನಕ್ಕೆ ಅಳವಡಿಸಿ ಕನ್ನಡವನ್ನು ಮೇಲೆತ್ತಬೇಕಿದೆ. ವಿದೇಶದಲ್ಲಿ ಇಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಕ್ರಾಂತಿ ಮಾಡುತ್ತಿದ್ದು ಅದರ ಸಾಧಕ- ಭಾದಕಗಳನ್ನ ನಾವು ಅರಿಯಬೇಕು” ಎಂಬುದನ್ನು ಟಿ. ಜಿ. ಶ್ರೀನಿಧಿ ತಿಳಿಸಿದರು.

“ಸಾಹಿತ್ಯಕ್ಕೆ ಉಪಯೋಗವಾಗುವಂತಹ ತಂತ್ರಜ್ಞಾನದಿಂದ ವಿಮುಖರಾಗದೆ ಸ್ವೀಕರಿಸುವ ಮನೋಭಾವ ಹೊಂದಬೇಕಿದೆ. ಇ - ಪುಸ್ತಕ ಮತ್ತು ಮುದ್ರಿತ ಪುಸ್ತಕ ಸಮಾನಾಂತರವಾಗಿ ಹೋಗುತ್ತಿದ್ದು, ಮೊಬೈಲ್‌ನಲ್ಲಿ ಓದನ್ನು ತಲುಪಿಸುವ ಮೂಲಕ ಸಾಹಿತ್ಯದ ಉಳಿವು ಸಾಧ್ಯವಿದೆ. ಕೇಳು ಪುಸ್ತಕಗಳನ್ನು ಇಂಗ್ಲೀಷ್ ಪುಸ್ತಕೋಧ್ಯಮದಲ್ಲಿ ಮುಂದುವರೆದಿದ್ದು ಇದನ್ನು ಪುಸ್ತಕ ನವೋದ್ಯಮಿಗಳು ಅಳವಡಿಸಿಕೊಳ್ಳಬೇಕಿದೆ. ವೃತ್ತಿಪರ ಅನುವಾದಕರು ಅಲ್ಲವದವರಿಗೆ ಈ ತಂತ್ರಜ್ಞಾನ ಹೊಸ ವೇದಿಕೆಯನ್ನು ಕಲ್ಪಿಸಿದ್ದು ಅದರ ಬಗೆಗಿನ ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ” ಎಂದು ಸಲಹೆ ನೀಡಿದರು ಜಿ. ಎನ್. ನರಸಿಂಹ ಮೂರ್ತಿ

“ಸಾಹಿತ್ಯವನ್ನು ಸಂವಹನದ ಮಾಧ್ಯಮವಾಗಿ ಬಳಸಿ ವಲಸೆಗಾರರಿಗೆ, ಕಛೇರಿ ಕೆಲಸಕ್ಕೆ ಇ – ತಂತ್ರಜ್ಞಾನ ಸಹಾಕವಾಗಿ ನಿಲ್ಲುತ್ತದೆ. ಕನ್ನಡ ಭಾಷಾ ಉಳಿವು ಬರವಣಿಯಿಂದ ಸಾಧ್ಯವಾಗಬೇಕಿದೆ. ಶಾಲೆಗಳಲ್ಲಿ ಮಕ್ಕಳಿಗೆ ಇ - ಮ್ಯಾಗಸೈನ್ ಅನ್ನು ತಯಾರು ಮಾಡುವ ಮೂಲಕ ಮಕ್ಕಳಿನಲ್ಲೇ ಸಾಹಿತ್ಯಾಸಕ್ತಿ ಬೆಳೆಯುತ್ತದೆ. ಇದು ಕನ್ನಡ ಕಲಿಯಲು, ಬರೆಯಲು ಇನ್ನೊಂದು ಮಾಧ್ಯಮವಾಗುತ್ತದೆ” ಎಂದರು.

ಕಂಬಾರರ ಮಾತನ್ನು ನೆನಪಿಸುತ್ತಾ ಮಾತನ್ನು ಆರಂಭಿಸಿದ ಬೇಳೂರು ಸುದರ್ಶನ “ಕನ್ನಡ ಸಾಹಿತ್ಯವು ತಂತ್ರಾಂಶದಲ್ಲಿ ಕುಂಟುತ್ತಾ ಸಾಗುತ್ತಿದೆ. ಇ - ಪುಸ್ತಕ ನಿರ್ಮಾಣ, ಸಿಮೆಂಟಿಕ್‌ ವೆಬ್‌ ಈ ಮಾನದಂಡಗಳನ್ನು ರೂಪಿಸುತಿದ್ದೇವೆ” ಎಂದರು.

ತಂತ್ರಾಂಶದಲ್ಲಿ ಕನ್ನಡ ಬಳಕೆ ಬಗ್ಗೆ ಮಾತನಾಡಿದ ಅವರು “ಸಾರ್ವಜನಿಕ ಮತ್ತು ಸಂಶೋಧನಾತ್ಮಕ ತಂತ್ರಾಂಶಗಳಲ್ಲಿ ಆಗುತ್ತಿರುವ ಬದಲಾವಣೆಗಳು ಕಾರ್ಯ ಸಮನ್ವಯದ ಕೊರತೆಯಿಂದ ಸಾಹಿತ್ಯವನ್ನು ತಂತ್ರಜ್ಞಾನದಲ್ಲಿ ಅಳವಡಿಸಲು ತೊಡಕಾಗುತ್ತಿದೆ. ಕನ್ನಡ ತಂತ್ರಾಶಗಳು ಹಂಚಿ ಹೋಗಿದ್ದು, ಇಂದು ಅವರ ಮಾನದಂಡಗಳು ಒಂದೇ ಆಗಿರಬೇಕಿದ್ದು ಎಲ್ಲರೂ ಒಟ್ಟಿಗೆ ಕೂತು ಚರ್ಚಿಸಬೇಕಿದೆ. ಪರಸ್ಪರ ಏಕಿಕೃತ ಜಾಲತಾಣ ಅಗತ್ಯವಾಗಿ ಮುಂದಿನ ದಿನಗಳಲ್ಲಿ ಆಗಬೇಕಿದೆ.

ಭಾಷಾ ಶಾಸ್ತ್ರಜ್ಞರು ಮತ್ತು ತಂತ್ರಜ್ಞರಲ್ಲಿ ಒಂದು ಸಮನ್ವರ ಸಾಧಿಸಬೇಕು. ಒಂದೇ ರೀತಿಯ ಸಂಶೋಧನೆಗಳನ್ನು ನಿಲ್ಲಿಸಿ ಸಮನ್ವಯ ಸಾಧಿಸಿ ಸುಲಭವಾಗಿ-ವಿವರವಾಗಿ ನಿರೂಪಿಸುವರಿಗೆ ಅವಕಾಶ ನೀಡಲು ಮುಂದಾಗಬೇಕು. ಅಲ್ಲದೆ ಯೂನಿಕೋಡೇತರವನ್ನು ಯೂನಿಕೋಡ್‌ಗೆ ಅನುವಾದಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಅಭಿವೃದ್ಧಿಗೆ ಸಂಬಂಧಿಸಿದ ಸವಾಲುಗಳನ್ನು ತೆರೆದಿಟ್ಟು ಮುಂದಿನ ಸಾಧ್ಯತೆಗಳ ಕುರಿತು ತಿಳಿಸಿದರು. 

ಕನ್ನಡ ಸಾಹಿತ್ಯ ವಿಶೇಷವಾಗಿ ಶಾಸ್ತ್ರೀಯ ಸಾಹಿತ್ಯವನ್ನು ನೂತನ ತಂತ್ರಜ್ಞಾನಕ್ಕೆ ಸಂಪೂರ್ಣವಾಗಿ ಅಳವಡಿಸುವ ಕೆಲಸವಾಗಬೇಕು. ತಂತ್ರಜ್ಞಾನದ ವೇಗಕ್ಕೆ ಜಾಗತಿಕ ಭಾಷೆಗಳು ಸ್ಪರ್ಧೆಯಲ್ಲಿವೆ. ಅವುಗಳಿಗೆ ಹೋಲಿಸಿದರೆ ಕನ್ನಡದ ನಡೆ ನಿಧಾನವಾಗಿದೆ. ಈಗಿರುವ ವೇಗದಲ್ಲೇ ತೃಪ್ತಿಪಡುವಂತಿಲ್ಲ ಎನ್ನುವ ಮೂಲಕ ಜಾಗತಿಕವಾಗಿ ಕನ್ನಡ  ಬೆಳೆಯುವಲ್ಲಿಯ ಅಡೆತಡೆಗಳ ಕುರಿತು ಗಮನ ಸೆಳೆದರು. 

ಮನು ಬಳಿಗಾರ್‌, ಸುಬ್ರಹ್ಮಣ್ಯ ವಿ ಭಟ್‌, ಪಂಡಿತಾರಾಧ್ಯ, ಬಸವರಾಜು ಐನೋಳಿ, ಮಲ್ಲಿಕಾರ್ಜುನ ಬಾದಾಮಿ, ಬಾಬು ಜಾಧವ ಮತ್ತು ಸಾಹಿತ್ಯಾಸಕ್ತರು ಹಾಜರಿದ್ದರು.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...