Date: 14-05-2022
Location: ಬೆಂಗಳೂರು
‘ಕನ್ನಡ ಭಾಷೆ, ಸಾಹಿತ್ಯ ಉಳಿಯಬೇಕಾದರೆ ಹೆಚ್ಚೆಚ್ಚು ಮಕ್ಕಳ ಸಾಹಿತ್ಯ ಕೃತಿಗಳು ಪ್ರಕಟವಾಗಬೇಕು’ ಎಂದು ಹಿರಿಯ ಕಾದಂಬರಿಗಾರ್ತಿ ರಜನಿ ನರಹಳ್ಳಿ ಹೇಳಿದರು.
ಅಭಿನವ ಪ್ರಕಟಿಸಿರುವ ಕೆ.ವಿ.ತಿರುಮಲೇಶ್ ಅವರ ಆದಿಕಾವ್ಯದ 10 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮ ಬಾಲ್ಯಕಾಲದಲ್ಲಿ ಜಿ.ಪಿರಾಜರತ್ನ, ಪಂಜೆ ಮಂಗೇಶರಾಯರು, ಹೊಯಿಸಳ, ಕುವೆಂಪು, ಬೇಂದ್ರೆ, ಅನುಪಮಾ ನಿರಂಜನ ಹೀಗೆ ಅನೇಕರು ಮಕ್ಕಳಿಗಾಗಿ ಬರೆಯುತ್ತಿದ್ದರು. ಅವರ ಕತೆಗಳನ್ನು ಓದುತ್ತಾ, ಕಲಿಯುತ್ತಾ ನಮ್ಮ ಭಾಷಾ ಸಾಮರ್ಥ್ಯವೂ ಹೆಚ್ಚಿತು. ಈಗ ಮಕ್ಕಳ ಸಾಹಿತ್ಯ ಬರೆಯುವವರೇ ಕಡಿಮೆ. ಮಕ್ಕಳಿಗೆ ಬಾಲ್ಯದಲ್ಲಿ ಸಾಹಿತ್ಯದ ರುಚಿ ಹತ್ತಿಸದಿದ್ದರೆ, ಮುಂದೆ ಕನ್ನಡ ಭಾಷೆ, ಸಂಸ್ಕೃತಿಯ ಬಗೆಗೆ ಅವರನ್ನು ಆಸಕ್ತಿ ಹುಟ್ಟುವುದಾದರೂ ಹೇಗೆ ? ಎಂದರು.
ಬಹುಶಃ ಹೀಗೆ ಮಕ್ಕಳ ಹತ್ತು ಪುಸ್ತಕಗಳನ್ನು ಒಂದೇ ಬಾರಿಗೆ ಪ್ರಕಟಿಸಿದ್ದು, ನನಗೆ ತಿಳಿದ ಮಟ್ಟಿಗೆ ಇದೇ ಮೊದಲು. ಆಕರ್ಷಕ ಮುಖಪುಟ ವಿನ್ಯಾಸವೂ ಮಕ್ಕಳಿಗೆ ಮುದನೀಡುವಂತಿದೆ ಎಂದರು. ಡಿವಿಜಿ ಅವರಿಗೆ ‘ಮಂಕುತಿಮ್ಮ’, ರಾಜರತ್ನಂ ಅವರಿಗೆ ‘ಕಸ್ತೂರಿ’ ಸಿಕ್ಕರೆ, ತಿರುಮಲೇಶರಿಗೆ ‘ಪುಟ್ಟ ಸಿಕ್ಕಿದ್ದಾನೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ತಿರುಮಲೇಶರು ನವ್ಯ ಕಾಲಘಟ್ಟದಲ್ಲಿ ಬರವಣಿಗೆಯನ್ನು ಆರಂಭಿಸಿದರೂ, ಅವರ ಸಾಹಿತ್ಯದ ಆಶಯಗಳು ನವೋದಯ ಕಾಲಘಟ್ಟವನ್ನು ಒಳಗೊಳ್ಳುತ್ತದೆ. ಹೀಗಾಗಿ ಅವರಿಗೆ ಮಕ್ಕಳ ಸಾಹಿತ್ಯ ರಚಿಸುವುದು ಸಾಧ್ಯವಾಯಿತು. ಮಕ್ಕಳ ಮನೋಪ್ರಪಂಚವನ್ನು ಸುಲಭವಾಗಿ ಮತ್ತು ಆಕರ್ಷಕವಾಗಿ ಕಟ್ಟಿಕೊಡುವ ಅವರ ಕ್ರಮ ಮಾದರಿಯಾದುದು.ಮಕ್ಕಳ ಸಾಹಿತ್ಯವನ್ನು ಪ್ರಕಟಿಸುವ ಅಭಿನವದ್ದು ಕೂಡ ಮಾದರಿಯ ನಡೆ’ ಎಂದರು.
ಕವಿ ಪಿ.ಚಂದ್ರಿಕಾ, ಅಭಿನವ ರವಿಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ಪಠ್ಯಪುಸ್ತಕ ರಚನೆ, ಪರಿಷ್ಕರಣೆ ಹಾಗೂ ಮರುಪರಿಷ್ಕರಣೆ ನೆಪದಲ್ಲಿ ಮೂಲಭೂತವಾದಿತನವನ್ನು ತುಂಬುತ್ತಿರುವ ರಾಜ್ಯ ಸರ್ಕಾರವು ...
ಬೆಂಗಳೂರಿನ ವಿಜಯನಗರದ ಸೆಂಟ್ರಲ್ ಲೈಬ್ರರಿಯಲ್ಲಿ ಬುಧವಾರ ಆಯೋಸಿದ್ದಸಮಾರಂಭದಲ್ಲಿ ಲೇಖಕಿ ನೇಮಿಚಂದ್ರ ಅವರ“ ಕಡಲ್ಗ...
ತುಮಕೂರು ಜಿಲ್ಲೆಯ ತಿಪಟೂರಿನ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು 2022ನೇ ಸಾಲಿನಿಂದ ಹಿರಿಯ ಲೇಖಕರಿಗೆ ಸಾಹಿತ...
©2022 Book Brahma Private Limited.