ಕನ್ನಡವು ಸಂವಹನಕ್ಕಷ್ಟೇ ಅಲ್ಲ; ಅದಕ್ಕೆ ಹಲವು ಆಯಾಮಗಳಿವೆ: ಡಾ ವರದರಾಜ ಚಂದ್ರಗಿರಿ

Date: 01-10-2022

Location: ಬೆಂಗಳೂರು


ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಪೂರೈಸಲು 5 ಕೋಟಿ ಅನುದಾನ ಒದಗಿಸಲಾಗಿದ್ದು, ಇದು ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ನಡೆದ ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ, ಸಮ್ಮೇಳನದ' ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಸಮ್ಮೇಳನವು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ಇಲಿ ಕೈಗೊಂಡ ನಿರ್ಣಯಗಳು ಅನುಷ್ಠಾನವಾಗಿ ಕನ್ನಡ ಸಮೃದ್ದ ಭಾಷೆಯಾಗಿ ಮೂಡಿಬರಲು ಸಹಕಾರಿಯಾಗಲಿ ಎಂದು ಆಶಿಸಿದರು.

ಸಮಾರೋಪ ಭಾಷಣ ಮಾಡಿ ಮಾತಾನಾಡಿದ ಬೆಟ್ಟದರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ವರದರಾಜ ಚಂದ್ರಗಿರಿ ಅವರು ಸಾಹಿತ್ಯವೇ ಎಲ್ಲಾ ಮೌಲ್ಯಗಳ ತಾಯಿ. ವ್ಯಕ್ತಿತ್ವದ ಮೂಲ ಸಾಹಿತ್ಯದಲ್ಲಿ ಅಡಗಿದೆ.ಕನ್ನಡ ಕೇವಲ ಭಾಷೆಗೆ ಸೀಮಿತವಲ್ಲ.ಕನ್ನಡ ಸಂವಹನದ ಭಾಷೆಯಲ್ಲಿ ಸಂವೇದನೆಯ ಅನೇಕ ಅಂಶಗಳಿವೆ. ಇಂದು ಜೀವನದ ಎಲ್ಲಾ ಆಗು-ಹೋಗುಗಳು ಮೊಬೈಲ್ ಸ್ಮಾರ್ಟ್ ನಗಳಲ್ಲಿ ನಡೆಯುತ್ತಿದ್ದು ವ್ಯಾಪಾರೀಕರಣವೂ ಕನ್ನಡದ ಮೇಲೆ ಪರಿಣಾಮ ಬೀರುತ್ತಿದೆ.ಕನ್ನಡದ ಸ್ಥಿತಿ ಆತಂಕದಲ್ಲಿದೆ. ಸವಾಲುಗಳನ್ನು ಎದುರಿಸುತ್ತಿದೆ.ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯು ಭಾಷೆಯಲ್ಲಿ ಇಂಗ್ಲಿಷ್‌ನ ಹಾಗೆ ಕನ್ನಡವನ್ನು ಇಟ್ಟು ನೋಡುವ ಸಂದರ್ಭ ಬರುತ್ತದೆ.ಭಾಷೆಯ ಹಿಂದೆ ಹಲವು ಸಂವೇದನಾ ಸಂಗತಿಗಳಿವೆ ಎಂದು ತಿಳಿಯಬೇಕು.ನಮಗೆ ಎಲ್ಲವನ್ನೂ ಕಲಿಸಿದ್ದು ಸಾಹಿತ್ಯ. ಕನ್ನಡ ಭಾಷೆ ಕನ್ನಡವನ್ನು ಸಂವಹನಕ್ಕೆ ಮಾತ್ರ ಬಳಸುವುದು ಸರಿಯಲ್ಲ ಎಂದರು.

ಸಮ್ಮೇಳನಾಧ್ಯಕ್ಷ ಡಾ.ಎಚ್.ಜಿ.ಶ್ರೀಧ‌ರ್‌ ಮಾತನಾಡಿ,ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಬೇಕು.ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸಿದಾಗ ಸಂಸ್ಕೃತಿ ,ಸಾಹಿತ್ಯ ಜೀವಂತವಾಗಿ ಮುಂದಿನ ತಲೆಮಾರಿಗೆ ದಾಟಿಬರಲಿದೆ. ಓದುವಾಗ ಪ್ರತಿಯೊಬ್ಬರೂ ಏಕಾಗ್ರತೆ ರೂಢಿಸಿಕೊಳ್ಳಬೇಕು ಮನುಷ್ಯತ್ವ ಮಾನವೀಯತೆ ಇನ್ನೂಬರ ಪ್ರೀತಿಸುವುದನ್ನು ಸಾಹಿತ್ಯ ತಿಳಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಓದಬೇಕು. ಸಾಹಿತ್ಯವನ್ನು ಓದುವಾಗ ಸಹಾನುಭೂತಿ ಇರಬೇಕು ಕೃತಿಯು ಕೇವಲ ಕಥೆಯಲ್ಲ ಅದು ಸಂಸ್ಕೃತಿ, ಸಮುದಾಯದ ಜೀವನ ಪಧ್ಧತಿಯನ್ನು ಕಟ್ಟಿಕೊಡುವುದನ್ನು ತಿಳಿಸಿಕೊಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಎಂ.ಪಿ.ಶ್ರೀನಾಥ್ ಮಾತನಾಡಿ, ತಾಲೂಕು ಮಟ್ಟದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ನಡೆದಿದ್ದು ಜಿಲ್ಲಾ ಸಮ್ಮೇಳನದಂತೆ ಮೂಡಿಬಂದಿದೆ.ಸಮ್ಮೇಳನಗಳು ಉಳಿದ ಎಂಟು ತಾಲೂಕುಗಳಲ್ಲಿ ನಡೆಯಬೇಕು ಎಂದು ತಿಳಿಸಿದರು.ಪುತ್ತೂರಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಒದಗಿಸಿರುವುದಕ್ಕೆ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಪುಥಮ ತಾಲೂಕು ಸಾಹಿತ್ಯ ಸಮ್ಮೇಳನ ಸುಬ್ರಹ್ಮಣ್ಯ ನಟ್ಟೋಜರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆದಿದೆ. ಎಂದು ಪುಶಂಸೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ನಗರ ಸಭಾ, ಪೌರಾಯುಕ್ತ ಮಧು ಎಸ್ ಮನೋಹ‌ರ್‌ ಮಾತನಾಡಿ, ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡದ ಮಹತ್ವವನ್ನು ತಿಳಿಸಲಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕಾದ ಹೊಣೆ ವಿದ್ಯಾರ್ಥಿಗಳಲ್ಲಿದೆ.ಮುಂದೆ ಜಿಲ್ಲೆ, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳೂ ಪುತ್ತೂರಿನಲ್ಲಿ ನಡೆಯಲಿ ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ನಟ್ಟೋಜ, ಸಂಚಾಲಕಿ ರಾಜಶ್ರೀ ನಟ್ಟೋಜ, ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷ ಐತಪ್ಪ ನಾಯ್ಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್‌ ಪ್ರಭಾಕರ್, ಗೌರವ ಕೋಶಾಧ್ಯಕ್ಷ ಡಾ.ಹರ್ಷ ಕುಮಾರ್ ರೈ, ನಿಕಟಪೂರ್ವ ಅಧ್ಯಕ್ಷೆ ಹರಿಣಿ ಪುತ್ತೂರಾಯ, ಆಶಾ ಬೆಳ್ಳಾರೆ, ಕುಂಬ್ರ ದುರ್ಗಾಪ್ರಸಾದ್ ರೈ, ಕುಸುಮ್‌ರಾಜ್, ಡಾ|ವಿಜಯ ಕುಮಾರ್ ಮೊಳೆಯಾರ,ಯು.ಎಲ್.ಉದಯ ಕುಮಾರ್, ಅಬೂಬಕ್ಕರ್ ಆರ್ಲಪದವು, ಬಾಬು ಎಂ., ಯಶಸ್ವಿನಿ, ಸುಬ್ಬಪ್ಪ ಕೈಕಂಬ, ಕ.ಸಾ.ಪ. ಉಳ್ಳಾಲ ಘಟಕದ ಅಧ್ಯಕ್ಷ ಧನಂಜಯ ಕುಂಬ್ಳೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

MORE NEWS

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

29-03-2024 ಬೆಂಗಳೂರು

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...