"ಕನ್ನಡ ಭಾಷೆ ಸಾಹಿತ್ಯಗಳ ಸಂವರ್ಧನೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ: ಕನ್ನಡ ಭಾಷಾ ಕಲಿಕೆ, ಕನ್ನಡ ಶಾಲೆಗಳನ್ನು ಸ್ಥಾಪಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಲು ವಿವಿಧ ದತ್ತಿನಿಧಿಗಳನ್ನು ಸಂಗ್ರಹಿಸಿ ಬಳಸುತ್ತಾ ಬಂದಿರುವುದು. ಕನ್ನಡ ಪುಸ್ತಕಗಳ ಪ್ರಕಟಣೆಯ ಮೂಲಕ ಮತ್ತು ಗ್ರಂಥಗಳ ಮೂಲಕ ವಾಚನಾಭಿರುಚಿಯನ್ನು ಹೆಚ್ಚಿಸಿ, ಲೇಖಕರಿಗೆ ಮತ್ತು ಓದುಗರಿಗೆ ಪ್ರೋತ್ಸಾಹ ನೀಡಿರುವುದು," ಎನ್ನುತ್ತಾರೆ ರಘುನಾಥ್ ಕೃಷ್ಣಾಮಾಚಾರ್. ಅವರು ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರ ‘ಗೋರೆಗಾಂವ್ ಕರ್ನಾಟಕ ಸಂಘ’ ಕೃತಿ ಕುರಿತು ಬರೆದ ವಿಮರ್ಶೆ.
ಗೋರೆಗಾಂವ ಕರ್ನಾಟಕ ಸಂಘ: ಸುರೇಖಾ ಶೆಟ್ಟಿ: ಮುಂಬೈ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವುಗಳ ಹಿನ್ನೆಲೆಯಲ್ಲಿ ಗೋರೆಗಾಂವ ಕರ್ನಾಟಕ ಸಂಘದ ಸಾಧನೆಗಳನ್ನು ಮೇಲಿನ ಪುಸ್ತಕದಲ್ಲಿ ಲೇಖಕಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿ ದಾಖಲಿಸಿದ್ದಾರೆ. ಉಳಿದ ಸಂಘ ಸಂಸ್ಥೆಗಳಿಗೂ ಇದಕ್ಕೆ ಇರುವ ಅಂತರವನ್ನು ಇಲ್ಲಿ ನಮೂದಿಸಿದ್ದಾರೆ. ಅದಕ್ಕೆ ಕಾರಣಕರ್ತರಾದವರ ಹೆಸರುಗಳನ್ನು ಅವರು ಸಂಘದ ಬೆಳವಣಿಗೆಯಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ವಿವರಿಸಿದ್ದಾರೆ .
ಗೋರೆಗಾಂವ ಕರ್ನಾಟಕ ಸಂಘದ ವೈಶಿಷ್ಟ್ಯಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು - ಪುಸ್ತಕದ ಮಾಹಿತಿಯನ್ನು ಆಧರಿಸಿ.
1: ಕನ್ನಡ ಭಾಷೆ ಸಾಹಿತ್ಯಗಳ ಸಂವರ್ಧನೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ: ಕನ್ನಡ ಭಾಷಾ ಕಲಿಕೆ, ಕನ್ನಡ ಶಾಲೆಗಳನ್ನು ಸ್ಥಾಪಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಲು ವಿವಿಧ ದತ್ತಿನಿಧಿಗಳನ್ನು ಸಂಗ್ರಹಿಸಿ ಬಳಸುತ್ತಾ ಬಂದಿರುವುದು. ಕನ್ನಡ ಪುಸ್ತಕಗಳ ಪ್ರಕಟಣೆಯ ಮೂಲಕ ಮತ್ತು ಗ್ರಂಥಗಳ ಮೂಲಕ ವಾಚನಾಭಿರುಚಿಯನ್ನು ಹೆಚ್ಚಿಸಿ, ಲೇಖಕರಿಗೆ ಮತ್ತು ಓದುಗರಿಗೆ ಪ್ರೋತ್ಸಾಹ ನೀಡಿರುವುದು.
ನಾಡ ಹಬ್ಬವನ್ನು ಆರಂಭಿಸಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ನಮ್ಮ ಕರ್ನಾಟಕದ ಬೇರುಗಳ ನೆನಪು ಜೀವಂತವಾಗಿ ಉಳಿಯಲು ಕಾರಣಕರ್ತರು.
2: ಸದಸ್ಯರ ಸರ್ವತೋಮುಖ ವ್ಯಕ್ತಿತ್ವದ ವಿಕಾಸಕ್ಕೆ ಕೈಗೊಂಡ ಕಾರ್ಯಗಳು: ಅ)ವಿಚಾರ ಭಾರತಿ ಸಮ್ಮೇಳನಗಳನ್ನು ಆಯೋಜಿಸಿ, ಹೊರನಾಡಿನ ಕನ್ನಡ ವಿದ್ವಾಂಸರನ್ನು ಕರೆಸಿ, ಅವರಿಂದ ಉಪನ್ಯಾಸಗಳನ್ನು ಏರ್ಪಡಿಸಿ ಸದಸ್ಯರ ವೈಚಾರಿಕತೆಯನ್ನು ಬೆಳೆಸುವುದು. ಅವರಲ್ಲಿ ಇಬ್ಬರು (ಬರಗೂರು ರಾಮಚಂದ್ರಪ್ಪ ಮತ್ತು ಕಾಳೇಗೌಡ ನಾಗವಾರ) ನನ್ನ ಮೆಚ್ಚಿನ ಮೇಷ್ಟ್ರುಗಳು ಎಂಬುದು ವೈಯಕ್ತಿಕವಾಗಿ ನನಗೆ ಹೆಮ್ಮೆಯ ವಿಷಯ.
ಬ)ಪ್ರತಿ ವರ್ಷ ತಪ್ಪದೆ ಸದಸ್ಯರಿಗಾಗಿ ಏರ್ಪಡಿಸುವ ಶೈಕ್ಷಣಿಕ ಪ್ರವಾಸಗಳು. ಇದರಿಂದಾಗಿ ನಮ್ಮ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಕಣ್ಣಾರೆ ಕಂಡು ಅರಿವನ್ನು ವಿಸ್ತರಿಸುವ ಯೋಜನೆ
ಕ) ಸದಸ್ಯರ ಆರೋಗ್ಯ ಸಂವರ್ಧನೆಗೆ ಆಕ್ಯುಪ್ರೆಷರ್ ಮತ್ತು ಯೋಗ ತರಬೇತಿ.
ಡ). ರಂಗಾಸಕ್ತರಿಗೆ ಖ್ಯಾತ ನಿರ್ದೇಶಕ ಸದಾನಂದ ಸುವರ್ಣ ಅವರ ಮೂಲಕ ದೊರೆತ ರಂಗಸ್ಥಳದ ರಂಗತರಬೇತಿ.ಅದರಲ್ಲಿ ಪಾಲ್ಗೊಂಡ ನನ್ನ ಗೆಳೆಯರಾದ ಸಾ.ದಯಾ ಮತ್ತು ಗೋಪಾಲ ತ್ರಾಸಿ ರಂಗ ನಿರ್ದೇಶಕರಾಗಿ, ನಟರಾಗಿ ಹೊರಹೊಮ್ಮಿದ್ದಾರೆ.
ಮಹಿಳಾ ವಿಭಾಗದ ಮೂಲಕ ಮಹಿಳೆಯರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಲ್ಲಿನ ಕರ್ತೃತ್ವ ಶಕ್ತಿಯನ್ನು ಪೋಷಿಸಿ ಬೆಳೆಸಿದ್ದು. ಅದರ ಪರಿಣಾಮವಾಗಿ ಡಾ.ಸುನೀತಿ ಉದ್ಯಾವರ, ಶಕುಂತಲಾ ಪ್ರಭು, ಮೀನಾಕ್ಷಿ ಕಾಳಾವರ, ಪದ್ಮಜಾ ಮಣ್ಣೂರ ಮುಂತಾದವರು ವಿವಿಧ ಪದಾಧಿಕಾರಿಗಳಾಗಿ ಸಂಘದ ಬೆಳವಣಿಗೆಗೆ ದೇಣಿಗೆ ನೀಡಿದ್ದಾರೆ. ಅವರಲ್ಲಿ ಗ್ರಂಥಾಯನದ ನಿರ್ದೇಶಕಿಯಾದ ನನ್ನ ಶಿಷ್ಯೆ ಅಪರ್ಣಾ ರಾವ್ ಕೂಡ ಒಬ್ಬರು.
ಯುವ ವಿಭಾಗದ ಮೂಲಕ ಸದಸ್ಯ ಯುವಕರ ಪ್ರತಿಭೆಯನ್ನು ಪೋಷಿಸುವ ಕೆಲಸ ಕೂಡ ನಿರಂತರವಾಗಿ ಮಾಡಲಾಯಿತು. ಪ್ರಥಮ ಪತ್ರಿಕಾ ಸಮ್ಮೇಳನವನ್ನು ಆಯೋಜಿಸಿದ್ದ ಶ್ರೇಯಸ್ಸು ಕೂಡ ಇದಕ್ಕೆ ಸಲ್ಲಬೇಕು.ಅದನ್ನು ಮರಾಠಿ ಪತ್ರಕರ್ತರಾ ನಿಖಿಲ್ ವಾಗ್ಲೆ ಅವರು ಉದ್ಘಾಟಿಸಿದರು.ಗೆಳೆಯರಾದ ಅಶೋಕ್ ಸುವರ್ಣ ಮಾರ್ಗದರ್ಶನ ಮಾಡಿದರು.
ಮೇಲೆ ಉಲ್ಲೇಖಿಸಿದ ಯೋಜನೆಗಳನ್ನು ರೂಪಿಸಿ ವ್ಯವಸ್ಥಿತವಾಗಿ ಜಾರಿಗೆ ತಂದ ಶ್ರೇಯಸ್ಸು ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರವಿ.ರಾ.ಅಂಚನ್ ಅವರ ಸಲಹೆಗಾರರಾದ ಗೆಳೆಯರಾದ ಶ್ರೀನಿವಾಸ ಜೋಕಟ್ಟೆ ಅವರಿಗೆ ಸಲ್ಲಬೇಕು.
ಸಂಜೀವ ಶೆಟ್ಟಿಯವರಿಂದ ತೊಡಗಿ ಈಗಿನ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ರ ವರೆಗೆ ವಿವಿಧ ಅಧ್ಯಕ್ಷರ ಮಾರ್ಗದರ್ಶನದಲ್ಲಿ ನಿರಂತರವಾಗಿ ಬೆಳೆದು ಬಂದ ಕಥನದ ರೋಚಕ ನಿರೂಪಣೆ ಕೂಡ ಇಲ್ಲಿದೆ.
ಈ ಎಲ್ಲದರ ಪರಿಣಾಮವಾಗಿ ಇಂದು ಗೋರೆಗಾಂವ್ ಕರ್ನಾಟಕ ಸಂಘ ಮುಂಬೈನಲ್ಲಿ ಪ್ರತಿಷ್ಠಿತ ಸಂಘವಾಗಿ ಬೆಳೆದು ಬಂದಿದೆ. ಅದಕ್ಕೆ ತಕ್ಕಂತೆ ಈಚೆಗೆ ಗಡಿನಾಡಿನ ಪ್ರಶಸ್ತಿಗೆ ಪಾತ್ರವಾಗಿದೆ.
ಮೇಲಿನ ಎಲ್ಲವನ್ನೂ ವಿವಿಧ ಅಧ್ಯಾಯಗಳಾಗಿ ವಿಭಾಗಿಸಿ ವ್ಯವಸ್ಥಿತವಾಗಿ ಮಂಡಿಸಿ, ಅವರ ಕಾರ್ಯ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಗಳನ್ನು, ಅಧ್ಯಕ್ಷರ ಚಿತ್ರಗಳನ್ನು ಅಳವಡಿಸಿರುವುದು ಪುಸ್ತಕಕ್ಕೆ ಶೋಭೆ ತಂದಿದೆ.
ಹೊರನಾಡಾದ ಮುಂಬೈ ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿದು, ನಿರಂತರವಾಗಿ ಆರು ದಶಕಗಳ ಕಾಲ ಗೋರೆಗಾವ ಕರ್ನಾಟಕ ಸಂಘದ ವೈಶಿಷ್ಟ್ಯ ಪೂರ್ಣ ಸಾಧನೆಗೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ಮುಂಬೈ ವಿವಿ.ದ ಕನ್ನಡ ಸ್ನಾತಕೋತ್ತರ ಪದವಿಯ ಭಾಗವಾಗಿ, ಈ ಕೃತಿಯನ್ನು ರಚಿಸಿದ ಲೇಖಕಿಗೆ ಮತ್ತು ಅವರಿಗೆ ಮಾರ್ಗದರ್ಶನ ಮಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗಣೇಶ್ ಉಪಾಧ್ಯ ಅವರಿಗೆ ಕೂಡ ಅಭಿನಂದನೆ. ಪುಸ್ತಕ ಕಳಿಸಿ ಓದಲು ಅವಕಾಶ ಮಾಡಿಕೊಟ್ಟ ಸುರೇಖಾ ಶೆಟ್ಟಿ ಅವರಿಗೆ ಕೃತಜ್ಞತೆಗಳು. ಇಂತಹ ದಾಖಲಾತಿಗಳು ಮುಂಬೈ ಕನ್ನಡ ಸಂಘಟನೆಗಳ ಬಹುಮುಖಿ ಚಟುವಟಿಕೆಗಳು ಒಂದೆಡೆ ದೊರೆತು, ಕರ್ನಾಟಕದಲ್ಲಿ ಇರುವ ಕನ್ನಡಿಗರಿಗೆ ಹೊರನಾಡ ಕನ್ನಡಿಗರ ಸಾಹಸಗಾಥೆಯನ್ನು ಪರಿಚಯಿಸಲು ಸಹಾಯಕವಾಗಿವೆ. ಇಂತಹ ಕೃತಿಗಳು ಅಲ್ಲಿನ ಉಳಿದ ಕನ್ನಡ ಸಂಘಟನೆಗಳ ಕುರಿತು ಬರುವುದು ಅವಶ್ಯಕ.
"ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಕನ್ನಡ ಕಾದಂಬರಿಗಳ ಪರಂಪರೆಯ ಅವಗಾಹನೆಗೆ ಇದೊಂದು ಆಕರ ಕೃತಿ. ಇದಕ್ಕೆ ...
"ಮಧ್ಯಮ ವರ್ಗದ ಹುಡುಗರ ಪಾಡೆಲ್ಲ ಹೀಗೆ.. ಅನ್ನೋದಕ್ಕೂ ಅಂಜಿಕೆಯಾಗುತ್ತೆ. ಪ್ರೀತಿಗೆ ವರ್ಗ ಯಾವ್ದ್ ಆದ್ರೇನು..? ಅ...
"ಇವತ್ತಿನ ನಮ್ಮ ಬದುಕಿನ ಅದೆಷ್ಟೋ ಗೊಂದಲಗಳಿಗೆ , ಪ್ರಶ್ನೆಗಳಿಗೆ, ನಿರಂತರವಾಗಿ ಬಾಧಿಸುವ ಸೋಲುಗಳಿಗೆ, ಮಾನಸಿಕ ವೇ...
©2025 Book Brahma Private Limited.