ಮಕ್ಕಳು ಸೃಜನಶೀಲ ಸಾಹಿತ್ಯ ಬೆಳೆಸಿಕೊಳ್ಳಲು ಪೋಷಕರು ಸಹಕರಿಸಬೇಕು: ಶ್ರೀಧರ್‌

Date: 01-11-2019

Location: ಕಾಂತಾವರ


ಇಂದಿನ ಮಕ್ಕಳು ಸೃಜನಶೀಲರು, ಅವರಿಗೆ ಓದು, ಸಂಗೀತ, ನೃತ್ಯ ಮುಂತಾದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪೋಷಕರು ಪ್ರೇರೇಪಿಸಬೇಕು ಎಂದು ಸಾಹಿತಿ ಕೆ.ಆರ್‌. ಶ್ರೀಧರ್‌ ಅವರು ಅಭಿಪ್ರಾಯಪಟ್ಟರು. 

ಕಾಂತಾವರ ಕನ್ನಡ ಸಂಘ ಆಯೋಜಿಸಿರುವ ಎರಡು ದಿನದ ಕಾಂತಾವರ ಉತ್ಸವ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಧರ್‌ ಅವರು ಮಾತನಾಡಿದರು. 

ಇಂದಿನ ಯುವಜನರು ಓದುವ ಆಸಕ್ತಿಯಿಂದ ಹೊರಗೆ ಉಳಿದಿಲ್ಲ. ಅವರ ಹವ್ಯಾಸಗಳು ಬದಲಾಗಿವೆ. ಹಾಗಾಗಿ ಮಕ್ಕಳಿಗೆ ದಿನದಲ್ಲಿ ಕನಿಷ್ಟ ಎರಡು ಗಂಟೆ ಸೃಜನಶೀಲ ಹವ್ಯಾಸದಲ್ಲಿ ತೊಡಗಿಕೊಳ್ಳಲು ಪೋಷಕರು ಸಹಕರಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ಮನೋಹರ ಗ್ರಂಥಮಾಲೆಯ ಮುಖ್ಯಸ್ಥರಾಗಿರುವ ರಮಾಕಾಂತ ಜೋಶಿ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ, ಎಸ್.ಆರ್‌. ವಿಘ್ನರಾಜ್‌ ಅವರಿಗೆ ವಿದ್ವತ್‌ ಪರಂಪರಾ ಪುರಸ್ಕಾರ, ಪುಟ್ಟು ಕುಲಕರ್ಣಿ ಅವರಿಗೆ ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರ ಹಾಗೂ ಶಾರಧಾ ಭಟ್‌ ಅವರಿಗೆ ಕಾಂತಾವರ ಲಲಿತಕಲಾ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  

ಸಾಹಿತಿ ವಿಜಯಾ ಶ್ರೀಧರ್‌, ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ನಾ. ಮೊಗಸಾಲೆ  ಹಾಗೂ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...