ಖರ್ಗೆ ಬದುಕಿನಲ್ಲಿ ಬಾಬಾಸಾಹೇಬರ ನಡೆ-ನುಡಿಗಳ ಬದ್ಧತೆ : ಅಗ್ರಹಾರ ಕೃಷ್ಣಮೂರ್ತಿ ಬಣ್ಣನೆ

Date: 21-07-2021

Location: ಬುಕ್ ಬ್ರಹ್ಮ ಫೇಸ್ ಬುಕ್ ಲೈವ್ ಮತ್ತು ಯೂಟ್ಯೂಬ್ ನೇರ ಪ್ರಸಾರ


ಸಮಾನತೆಯ ಸಮಾಜದ ಕನಸು ಕಂಡ ಬಾಬಾಸಾಹೇಬರ ನಡೆ-ನುಡಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬದುಕಿನಲ್ಲಿ ಬದ್ಧತೆ ತೋರಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ನಿವೃತ್ತ ಪ್ರಾದೇಶಿಕ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.

ಕಲಬುರಗಿಯ ಕುಟುಂಬ ಪ್ರಕಾಶನ ಪ್ರಕಟಿಸಿದ ಹಾಗೂ ಡಾ., ಎಚ್.ಟಿ. ಪೋತೆ ಅವರ ‘ಬಾಬಾ ಸಾಹೇಬರೆಡೆಗೆ’ (ಶ್ರೀ ಮಲ್ಲಿಕಾರ್ಜುನ ಖರ್ಗೆಜೀ ಅವರ ಜೀವನ ಕಥನ) ಕೃತಿಯನ್ನು ಅಂತರ್ಜಾಲತಾಣದ ಮೂಲಕ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.

ಬಾಬಾಸಾಹೇಬರಿಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅರ್ಧ ಶತಮಾನದ ಅಂತರವಿದೆ. ಆದರೆ, ಅವರ ನಡೆ-ನುಡಿಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಈ ಅಂಶವನ್ನು ಲೇಖಕರು ‘ಬಾಬಾಸಾಹೇಬರೆಡೆಗೆ’ ಕೃತಿಯಲ್ಲಿ ತೋರಿದ್ದಾರೆ ಎಂದು ಪ್ರಶಂಸಿಸಿದರು.

ಸದ್ದಿಲ್ಲದ ಸೇವೆ: ಹಲವು ವರ್ಷಗಳಿಂದ ರಾಜಕಾರಣದಲ್ಲಿದ್ದರೂ ಪ್ರಚಾರಕ್ಕಾಗಿ ಹಂಬಲಿಸಿದವರಲ್ಲ. ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖರ್ಗೆ ರಾಜಕಾರಣಿಯಲ್ಲ; ಅವರೊಬ್ಬ ಮುತ್ಸದ್ಧಿ. ದಲಿತ ನಾಯಕ ಬಿ ಶ್ಯಾಮಸುಂದರ್ ಅವರೊಂದಿಗೆ ಒಡನಾಟವಿದ್ದ ಖರ್ಗೆ ಅವರು ಬಾಬಾಸಾಹೇಬರ ವೈಚಾರಿಕತೆಯನ್ನು ಬದುಕಾಗಿಸಿಕೊಂಡ ಹಲವಾರು ಯುವಕರನ್ನು ಪ್ರೋತ್ಸಾಹಿಸಿದರು. ತಂದೆಯವರು ಅಧಿಕಾರದಲ್ಲಿದ್ದಾಗ ಮಕ್ಕಳು ಅಧಿಕಾರದ ದುರುಪಯೋಗ ನಡೆಯುತ್ತದೆ. ಆದರೆ, ಹೀಗಾಗದಂತೆ ಮಲ್ಲಿಕಾರ್ಜುನ ಖರ್ಗೆ ಅವರು ನೋಡಿಕೊಂಡಿದ್ದು ಪ್ರಶಂಸನೀಯ. ಕರ್ನಾಟಕ ರಾಜ್ಯದ ಅಭಿವೃದ್ಧಿಯನ್ನು ಒಂದೆಡೆ ಇಟ್ಟು ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಟ್ಟು,, ಅವರ ಅಭಿವೃದ್ಧಿ ಪರ ವಿಚಾರಗಳನ್ನು ಪರಿಚಯಿಸಿದ್ದಾರೆ ಎಂದರು.

ನಗುಮುಖವಿರದ ಅಂಬೇಡ್ಕರ್ : ಕಲಬುರಗಿಯ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕೃತಿಯ ಲೇಖಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ ‘ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಾಬಾಸಾಹೇರ ಬದುಕಿನಲ್ಲಿ ಸಾಕಷ್ಟು ಸಾಮ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.

ಡಾ. ಅಂಬೇಡ್ಕರ್ ಅವರ ಯಾವುದೇ ಭಾವಚಿತ್ರಗಳಲ್ಲಿ ನಗುಮುಖವಿಲ್ಲ, ಅಂತೆಯೇ ಖರ್ಗೆಯವರೂ ಸಹ..ಜೀವನದಲ್ಲಿ ಸಾಕಷ್ಟು ನೋವನ್ನುಂಡವರು ಸಮಾಜಕ್ಕಾಗಿ ದುಡಿಯುವವರು ಇರುವ ಪರಿಯದು..ಖರ್ಗೆ ಯಾವತ್ತೂ ಆಶ್ವಾಸನೆ ಕೊಟ್ಟವರಲ್ಲ, ಕೆಲಸ ಮಾಡಿ ತೋರಿಸಿದವರು..ಅಂಬೇಡ್ಕರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಬಾಲ್ಯದಲ್ಲೇ ತಾಯಿಯ ಪ್ರೇಮದಿಂದ ವಂಚಿತರು. ಆದರೆ, ಸಮಾಜದ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತರು ಎಂದು ಬಣ್ಣಿಸಿದರು.

ಇಂದಿನ ರಾಜಕಾರಣಿಗಳಲ್ಲಿ ತಾಳ್ಮೆಯೆಂಬುದಿಲ್ಲ..ಸೂಕ್ತ ಕಾಲಕ್ಕಾಗಿ ಕಾಯುವವರೂ ಅಲ್ಲ. ಆದರೆ, ಖರ್ಗೆಯವರು ಬುದ್ಧನ ಬಗೆಗಿನ ಓದು ಹಾಗೂ ಅಂಬೇಡ್ಕರ್‌ ಅವರ ಹೋರಾಟವನ್ನೇ ಕಂಡು ಬೆಳೆದವರು. ತಾಳ್ಮೆಯನ್ನು ಕರಗತಮಾಡಿಕೊಂಡೇ ರಾಜಕಾರಣ ಮಾಡಿದವರು ಎಂದರು.

ಕರ್ನಾಟಕ ಒಪ್ಪಿಲ್ಲ: ಖರ್ಗೆಯವರನ್ನು ಕರ್ನಾಟಕ ಇನ್ನೂ ಒಪ್ಪಿಕೊಂಡಿಲ್ಲ, ಅರ್ಥಮಾಡಿಕೊಂಡಿಲ್ಲ. ಮಠಗಳು ಸಹ ರಾಜಕಾರಣದಲ್ಲಿ ಮೂಗು ತೂರಿಸುತ್ತಿವೆ. ವಾಸ್ತವ ಹೀಗಿರುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಕ್ತ ಸ್ಥಾನ-ಮಾನ ಸಿಕ್ಕಿಲ್ಲ ಎಂದು ವಿಷಾದಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಮುಖ್ಯ ಅತಿಥಿಗಳಾಗಿದ್ದರು.

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...