Date: 04-09-2024
Location: ಬೆಂಗಳೂರು
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು “ರಾಜ್ಯಮಟ್ಟದ ನಾಟಕ ರಚನಾ ಶಿಬಿರ"ವನ್ನು 2024 ಅ.03 ರಿಂದ ಅ. 07ರವರೆಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ, ಶಿವಮೊಗ್ಗ ಜಿಲ್ಲೆಯಲ್ಲಿ ಹಮ್ಮಿಕೊಂಡಿದೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ರಂಗಭೂಮಿಯಲ್ಲಿ ಹೆಸರು ಮಾಡಿರುವ18 ರಿಂದ 40 ವರ್ಷದೊಳಗಿರುವ 20 ಯುವ ಬರಹಗಾರರಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ನಾಡಿನ ಶ್ರೇಷ್ಠ ನಾಟಕಕಾರರು ಹಾಗೂ ಕಲಾವಿದರು ಈ ಶಿರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ: 17.09.2024 ರೊಳಗೆ ಈ ಕೆಳಗಿನ ವಿಳಾಸಕ್ಕೆ ವಿವರದೊಂದಿಗೆ ಅರ್ಜಿಯನ್ನು ಕಳುಹಿಸಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಶಿಬಿರಾರ್ಥಿಗಳ ನೋಂದಣಿ ಮತ್ತು ಪ್ರವೇಶ ಉಚಿತವಾಗಿದ್ದು, ರಂಗಭೂಮಿ ಕ್ಷೇತ್ರದ ಎಲ್ಲಾ ಯುವ ಬರಹಗಾರರು ಭಾಗವಹಿಸಬೇಕಾಗಿ ಕೋರಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿಯನ್ನು ಕಳುಹಿಸಿಕೊಡಬೇಕಾದ ವಿಳಾಸ: ಶ್ರೀಮತಿ ನಿರ್ಮಲಾ ಮಠಪತಿ
ರಿಜಿಸ್ಟ್ರಾರ್
ಕರ್ನಾಟಕ ನಾಟಕ ಅಕಾಡೆಮಿ
ಕನ್ನಡ ಭವನ, ನೆಲಮಹಡಿ, ಚಾಲುಕ್ಯ ವಿಭಾಗ,
ಜೆ.ಸಿ.ರಸ್ತೆ, ಬೆಂಗಳೂರು
ದೂ: 080-22244176, 22237484 / 9481327867
ಬೆಂಗಳೂರು: ಶ್ರೀ ಸಾಯಿಗನ ಪ್ರೊಡಕ್ಷನ್ಸ್ ಹಾಗೂ ವಾಯ್ಸಿಂಗ್ ಸೈಲೆನ್ಸ್, ಕಾವ್ಯಸ್ಪಂದನ ಪಬ್ಲಿಕೇಷನ್ಸ್ ವತಿಯಿಂದ ಮ್ಯೂಸಿಕ...
ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನ...
ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ‘ಸಾವಿತ್ರಿಬಾಯಿ ಫುಲೆ’ ಹಾಗೂ ‘ಜ್ಯೋತಿ ಬಾ ಫುಲೆ’...
©2024 Book Brahma Private Limited.