ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ 10 ಮಂದಿ ಭಾಜನ

Date: 29-11-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2022 ಮತ್ತು 2023ನೇ ಸಾಲಿನಲ್ಲಿ ಕೊಡಮಾಡುವ ‘ಗೌರವ ಪ್ರಶಸ್ತಿ’ಗೆ ಹತ್ತು ಮಂದಿ ಸಾಧಕರು ಭಾಜನರಾಗಿದ್ದಾರೆ.

2022ನೇ ಸಾಲಿನ ಗೌರವ ಪ್ರಶಸ್ತಿಗೆ ಗದಗದ ವೀರಭದ್ರಪ್ಪ ಕಾಳಪ್ಪ ಕವಲೂರು (ಸಂಪ್ರದಾಯ ಶಿಲ್ಪ), ಚಿಕ್ಕಮಗಳೂರಿನ ಎಸ್.ಪಿ. ಫಣಿಯಾಚಾರ್ (ಸಂಪ್ರದಾಯ ಶಿಲ್ಪ), ಯಾದಗಿರಿಯ ಬನಪ್ಪ ಬಡಿಗೇರ (ಜಾನಪದ ಶಿಲ್ಪ), ಬೆಂಗಳೂರಿನ ಗೋಪಿನಾಥ್ ಎಸ್. (ಸಮಕಾಲೀನ ಶಿಲ್ಪ) ಹಾಗೂ ಶಿವಮೊಗ್ಗದ ಸಿ. ವಿ. ರಾಮಕೃಷ್ಣ (ಸಿಮೆಂಟ್ ಶಿಲ್ಪ) ಆಯ್ಕೆಯಾಗಿದ್ದಾರೆ.

2023ನೇ ಸಾಲಿನ ಗೌರವ ಪ್ರಶಸ್ತಿಗೆ ಬಾಗಲಕೋಟೆಯ ಅಲ್ಲಿಸಾಬ್ ಸೈ ನದಾಫ್ (ಸಂಪ್ರದಾಯ ಶಿಲ್ಪ), ಹಾವೇರಿ ಯಮಾನಪ್ಪ ಷಣ್ಮುಖಪ್ಪ ಬಡಿಗೇರ (ಸಂಪ್ರದಾಯ ಶಿಲ್ಪ), ಕಲಬುರಗಿಯ ವೀರಣ್ಣ ಶಿಲ್ಪಿ (ಸಂಪ್ರದಾಯ ಶಿಲ್ಪ), ಬೆಂಗಳೂರಿನ ಶಾಂತಮಣಿ ಎಂ, (ಸಮಕಾಲಿನ ಶಿಲ್ಪ) ಹಾಗೂ ದಾವಣಗೆರೆಯ ಟಿ. ಶ್ರೀನಿವಾಸ್ (ಸಿಮೆಂಟ್ ಶಿಲ್ಪ) ಭಾಜನರಾಗಿದ್ದಾರೆ.

'ಗೌರವ ಪ್ರಶಸ್ತಿ'ಯು ತಲಾ ₹ 50 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ನೇತೃತ್ವದ ಕಾರ್ಯಕಾರಿ ಸಮಿತಿ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಿದೆ. ಅಕಾಡೆಮಿ ರಿಜಿಸ್ಟ್ರಾರ್ ಆರ್. ಚಂದ್ರಶೇಖರ್ ಅವರು ಪ್ರಶಸ್ತಿ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.

'ಶಿಲ್ಪಶ್ರೀ ಪ್ರಶಸ್ತಿ' ಪುರಸ್ಕೃತರು:
2023ನೇ ಸಾಲಿನ 'ಶಿಲ್ಪಶ್ರೀ ಪ್ರಶಸ್ತಿ'ಗೆ 10 ಶಿಲ್ಪಿಗಳು ಆಯ್ಕೆಯಾಗಿದ್ದಾರೆ. ವಿಜಯಪುರದ ಬಸವರಾಜ್ ಕೆ. ಮಾಯಾಚಾರಿ, ಶಿವಮೊಗ್ಗದ ಶ್ರೀಧರಮೂರ್ತಿ ಕೆ., ಕಲಬುರಗಿಯ ಮಹೇಶ್‌ಕುಮಾ‌ರ್ ಡಿ. ತಳವಾರ್, ಮಂಡ್ಯದ ಎಚ್.ಕೆ. ಅಣ್ಣಯ್ಯಚಾರ್, ಧಾರವಾಡದ ಸುರೇಶ್‌ ಎಸ್. ಕಮ್ಮಾರ, ಬೆಂಗಳೂರಿನ ಆರ್. ವೇಣುಗೋಪಾಲ್, ಚಿತ್ರದುರ್ಗದ ಬಾಬುಚರಣ್ ಎನ್.ಕೆ., ಬೆಂಗಳೂರು ಗ್ರಾಮಾಂತರದ ರಘು ಎಂ, ಹಾವೇರಿಯ ಮರಿಯಪ್ಪ ໖. ಹೊನ್ನಮ್ಮನವ‌ರ್ ಹಾಗೂ ಮೈಸೂರಿನ ವಿಚಾರ್ ಬಿ.ಎನ್. ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

18ನೇ ವಾರ್ಷಿಕ ಶಿಲ್ಪಕಲಾ ಪ್ರದ- ರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಕಲಾಕೃತಿಗಳಲ್ಲಿ ಆರು ಶಿಲ್ಪ ಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಮೈಸೂರಿನ ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಬಹುಮಾನಕ್ಕೆ ತುಮ ಕೂರಿನ ಮಂಜುನಾಥ್ ಅವರ ಹೊಯ್ಸಳ ಶೈಲಿ ಗಣಪತಿ ಶಿಲ್ಪ ಕಲಾಕೃತಿ, ಮನೋಹರ ಕಾಳಪ್ಪ ಪತ್ತಾರ ವಿಜಯಪುರ ಅವರ ಬಹುಮಾನಕ್ಕೆ ಉಡುಪಿಯ ಪ್ರಕಾಶ ಆಚಾರ್ಯ ಅವರ ಧನ್ವಂತರಿ ಮರದ ಕಲಾಕೃತಿ ಆಯ್ಕೆಯಾಗಿದೆ. ಪ್ರಶಸ್ತಿಗಳ ವಿತರಣಾ ಸಮಾರಂಭ ಹಾಗೂ ಶಿಲ್ಪಕಲಾ ಪ್ರದ- ರ್ಶನವನ್ನು ಡಿಸೆಂಬ‌ರ್ ತಿಂಗಳಲ್ಲಿ ಹಮ್ಮಿ- ಕೊಳ್ಳಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾ‌ರ್ ತಿಳಿಸಿದ್ದಾರೆ.

 

MORE NEWS

ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಡಿ.ಉಮಾಪತಿ ಭಾಜನ 

05-12-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ "...

ಬೆಂಗಳೂರು ಲಿಟ್ ಫೆಸ್ಟ್ ನಲ್ಲಿ ‘ಮಕ್ಕಳ ಸಾಹಿತ್ಯದ ಕಲರವ’ ಹೀಗಿರಲಿದೆ ನೋಡಿ...

05-12-2024 ಬೆಂಗಳೂರು

ಬೆಂಗಳೂರು: ಮಕ್ಕಳನ್ನು ಸಾಹಿತ್ಯಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಮಕ್ಕಳಿಗೋಸ್ಕರ ವೇದಿಕೆಗಳನ್...

ಡಿಸೆಂಬರ್ 7ಕ್ಕೆ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ

05-12-2024 ಬೆಂಗಳೂರು

ಕೊಟ್ಟಿಗೆಹಾರ: ಇಲ್ಲಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ 7ರಂದು ಪುಸ್ತಕ ಪರಿಶೆ ಕಾರ್ಯಕ್ರಮ ನ...