ಕರ್ನಾಟಕದಲ್ಲೂ ಪುಸ್ತಕೋದ್ಯಾನ: ಸಿದ್ಧಲಿಂಗಯ್ಯ ಆಶಯ

Date: 05-12-2019

Location: ಬೆಂಗಳೂರು


ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ್ತಕೋದ್ಯಾನ ಪರಿಕಲ್ಪನೆyu ಕರ್ನಾಟಕದಲ್ಲಿಯೂ ಜಾರಿಯಾಗಬೇಕು ಎಂದು ಸಾಹಿತಿ ಡಾ. ಸಿದ್ಧಲಿಂಗಯ್ಯ ಆಶಿಸಿದರು.

ನಗರದ ನಯನ ರಂಗಮಂದಿರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ, ವಿವಿಧ ಲೇಖಕರ 28 ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪುಸ್ತಕೋದ್ಯಾನ  ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಇಡೀ ಕುಟುಂಬ ಪುಸ್ತಕೋದ್ಯಾನಕ್ಕೆ ಭೇಟಿ ನೀಡಿ ಇಡೀ ದಿನ ಕಳೆಯುವ ಪ್ರವೃತ್ತಿ ಅಲ್ಲಿ ಕಂಡು ಬರುತ್ತದೆ. ಹಾಗೆಯೇ ಕರ್ನಾಟಕದಲ್ಲಿಯೂ ಪುಸ್ತಕೊದ್ಯಾನ ರೂಪುಗೊಂಡರೆ, ಬರಹಗಾರರು, ಓದುಗರು ಮತ್ತು ಪ್ರಕಾಶಕರಿಗೆ ಒಟ್ಟಾರೆ ಪುಸ್ತಕೋದ್ಯಮಕ್ಕೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಡಾ. ವಸುಂಧರಾ ಭೂಪತಿ ಮಾತನಾಡಿ,’ವೈದ್ಯಕೀಯ ಸಾಹಿತ್ಯ ಬರೆಯುವ ಜನ ತುಂಬ ಕಡಿಮೆ. ಅವರು ಬರೆಯಲು ವಿನಿಯೋಗಿಸುವ ಸಮಯವನ್ನು ವೃತ್ತಿಯಲ್ಲಿ ಬಳಸಿದರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು. ಆದರೆ, ಬರಹದ ಹಂಬಲ ಮತ್ತು ಸಮಾಜದ ಬಗೆಗಿನ ಕಾಳಜಿಗಾಗಿ ಕೆಲವೇ ಮಂದಿ ವೈದ್ಯರು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಅಂತಹವರಿಂದ ಬರೆಸುವ ಹೊಣೆ ನಮ್ಮ ಮೇಲಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಕಡಿಮೆ ಬೆಲೆಯಲ್ಲಿ ಓದುಗರಿಗೆ ಉತ್ತಮ ವಿಚಾರಗಳ ಪುಸ್ತಕಗಳನ್ನು ತಲುಪಿಸುವ ಹೊಣೆ ಹೊತ್ತಿದೆ. ಆ ದಿಸೆಯಲ್ಲಿ ವೈದ್ಯಕೀಯ ಪುಸ್ತಕಗಳನ್ನು ಸಹ ಪ್ರಕಟಿಸಿ ಜನರಿಗೆ ಸುಲಭ ಬೆಲೆಯಲ್ಲಿ ಸಿಗುವಂತೆ ಮಾಡಲಿ’ ಎಂದರು. 

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಎಂ.ಎನ್. ನಂದೀಶ್‌ ಹಂಚೆ ಮಾತನಾಡಿ, ಕನ್ನಡ ಅಭಿಜಾತ ಸಾಹಿತ್ಯವನ್ನು ಡಿಜಟಲೀಕರಣ ಮಾಡುವ ಮಹತ್ವದ ಯೋಜನೆಯನ್ನು ಪ್ರಾಧಿಕಾರ ಕೈಗೆತ್ತಿಕೊಳ್ಳುತ್ತಿದ್ದೆ. ಹಸ್ತಪ್ರತಿ ಸಂಗ್ರಹಣೆ ಮತ್ತು ಶೇಖರಣೆ ಸಹ ಮಾಡಲು ಪ್ರಾಧಿಕಾರದಿಂದ ಯೋಜನೆ ರೂಪಿಸಲಾಗುವುದು’ ಎಂದರು.

ಪುಸ್ತಕಗಳು ಹಾಗೂ ಲೇಖಕರು

ಸಾಹಿತ್ಯ ಭಾರತೀ ಎನ್. ಅನಂತರಂಗಾಚಾರ್‌
ಎನ್. ನರಸಿಂಹಯ್ಯ ಸಾಹಿತ್ಯ ಸಂಪುಟ 1 ಎನ್. ನರಸಿಂಹಯ್ಯ
ಎನ್. ನರಸಿಂಹಯ್ಯ ಸಾಹಿತ್ಯ ಸಂಪುಟ 2 ಎನ್. ನರಸಿಂಹಯ್ಯ
ಎನ್. ನರಸಿಂಹಯ್ಯ ಸಾಹಿತ್ಯ ಸಂಪುಟ 3 ಎನ್. ನರಸಿಂಹಯ್ಯ
ಎನ್. ನರಸಿಂಹಯ್ಯ ಸಾಹಿತ್ಯ ಸಂಪುಟ 4 ಎನ್. ನರಸಿಂಹಯ್ಯ
ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ – 4 ಮೂಡ್ನಾಡು ಚಿನ್ನಸ್ವಾಮಿ
ಮುಳ್ಳೂರು ನಾಗರಾಜ್‌ ಸಮಗ್ರ ಸಾಹಿತ್ಯ ಸಂಪುಟ-1 ಅಪ್ಪಗೆರೆ ಸೋಮಶೇಖರ್‌
ಮುಳ್ಳೂರು ನಾಗರಾಜ್‌ ಸಮಗ್ರ ಸಾಹಿತ್ಯ ಸಂಪುಟ-2 ಅಪ್ಪಗೆರೆ ಸೋಮಶೇಖರ್‌
ಮುಳ್ಳೂರು ನಾಗರಾಜ್‌ ಸಮಗ್ರ ಸಾಹಿತ್ಯ ಸಂಪುಟ-3 ಅಪ್ಪಗೆರೆ ಸೋಮಶೇಖರ್‌
ಮುಳ್ಳೂರು ನಾಗರಾಜ್‌ ಸಮಗ್ರ ಸಾಹಿತ್ಯ ಸಂಪುಟ-4 ಅಪ್ಪಗೆರೆ ಸೋಮಶೇಖರ್‌
ಕನ್ನಡ ಆಡುಮಾತು ಬರೆವಣಿಗೆಗಳಲ್ಲಿ ವಿಕಲ್ಪರೂಪಗಳು, ರೂಢಿಯ ತಪ್ಪುಗಳು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ
ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಭುವನೇಶ್ವರಿ ಹೆಗಡೆ
ಕಥೆಗಳ ಸೂಡು ಅಮರೇಶ ನುಗಡೋಣಿ
ನ್ಯಾಸ್ತನೆ ನೆಲಬಾಲನೆ ಕೆ ವೈ ಎನ್
ಅನವರತ ಆಯ್ದ ವಿಮರ್ಶಾ ಲೇಖನಗಳು ಎಸ್.ಆರ್. ವಿಜಯಶಂಕರ್
ಮರೆಯಾಗುತ್ತಿರುವ ಸಂಪ್ರದಾಯಗಳು . ಸಿ. ಕೆ. ಪರಶುರಾಮಯ್ಯ
ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು ಡಾ|| ಕೆ.ಎಸ್. ಪವಿತ್ರ
ತೀವ್ರ ಮಾನಸಿಕ ಕಾಯಿಲೆಗಳು ಡಾ|| ಕೆ.ಎಸ್. ಪವಿತ್ರ
ನರ ಮತ್ತು ಮಿದುಳು ರೋಗಗಳು ಡಾ|| ಕೆ.ಎಸ್. ಪವಿತ್ರ
ಮಕ್ಕಳಿಗೂ ಮನಸ್ಸಿದೆ ಕೆ ಎಸ್ ಚೈತ್ರ
ಅಪಸ್ಮಾರ - ಅಂಜದಿರಿ ಕೆ ಆರ್‌ ಶ್ರೀಧರ್‌
ಪಾಸಿಟಿವ್ ಮನಸ್ಸು ಸಿ ಆರ್‌ ಚಂದ್ರಶೇಖರ್‌
ನೆಗೆಟಿವ್ ಮನಸ್ಸು ಸಿ ಆರ್‌ ಚಂದ್ರಶೇಖರ್‌
ಸಂತಾನ ಹೀನತೆ ಎಚ್. ಗಿರಿಜಮ್ಮ
ರಕ್ತದೊತ್ತಡ ಎನ್. ಗೋಪಾಲಕೃಷ್ಣ
ವೈದ್ಯಕೀಯ ಪರೀಕ್ಷೆಗಳು ನಾ. ಸೋಮೇಶ್ವರ
ಔಷಧಗಳು ನಡೆದು ಬಂದ ದಾರಿ ನಾ. ಸೋಮೇಶ್ವರ
ಆಪ್ತವಚನ - ಆಯುರ್ವೇದ ಡಾ|| ಸತ್ಯನಾರಾಯಣ ಭಟ್‌

MORE NEWS

ಸಾಹಿತಿ ಈಶ್ವರ ಕಮ್ಮಾರ ಇನ್ನಿಲ್ಲ...

21-01-2020 ಧಾರವಾಡ

ಧಾರವಾಡದಲ್ಲಿರುವ ಮಕ್ಕಳ ಹಿರಿಯ ಸಾಹಿತಿ ಈಶ್ವರ ಕಮ್ಮಾರ ಮಂಗಳವಾರ ನಸುಕಿನ ಜಾವದಲ್ಲಿ ಹೃದಯಾಘಾತದಿಂದ ನಿಧನರಾದರು. ಇಂದು ...

ಪ್ರಾದೇಶಿಕತೆಯ ಸೊಗಡಿನಲ್ಲಿ'ದಡ ಸೇರ...

20-01-2020 ರಾಯಚೂರು

ರಾಯಚೂರಿನ ಕನ್ನಡ ಭವನದಲ್ಲಿ ಜ. 19  ರಂದು ಅಮರೇಶ ನುಗಡೋಣಿ ಅವರ "ದಡ ಸೇರಿಸು ತಂದೆ" ಆರನೆಯ ಕಥಾ ಸಂಕಲ...

ಭಾರತದಲ್ಲಿ ವಿಜ್ಞಾನ ಪ್ರಗತಿ, ಬದಲಾ...

20-01-2020 ಬೆಂಗಳೂರು

ವೈಜ್ಞಾನಿಕವಾಗಿ ಈ ದೇಶ ಎಷ್ಟೇ ಪ್ರಮಾಣದಲ್ಲಿ ಮುಂದುವರಿದಿದ್ದರೂ ಮೇಲ್ವರ್ಗದವರ  ಜಾತಿಹೀನ ಮನಸ್ಥಿತಿ ಇನ್ನೂ ಬದಲಾಗ...

With us

Top News
Exclusive
Top Events