ಕಸಾಪದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಆಯ್ಕೆಯಾದ ಪುಸ್ತಕಗಳ ಪಟ್ಟಿ ಪ್ರಕಟ

Date: 14-02-2025

Location: ಬೆಂಗಳೂರು


ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 51 ದತ್ತಿಗಳ 57 ಪ್ರಶಸ್ತಿಗಳಿಗೆ ಬರಹಗಾರರಿಂದ ಕೃತಿಗಳನ್ನ ಆಹ್ವಾನಿಸಿದ್ದು, ಇದೀಗ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳ ಪಟ್ಟಿ ಪ್ರಕಟವಾಗಿದೆ.

ಕಸಾಪ ನೀಡುವಂತಹ ದತ್ತಿ ಪ್ರಶಸ್ತಿಯಾದ ವಸುದೇವ ಭೂಪಾಲಂ ದತ್ತಿನಲ್ಲಿ ನಾಲ್ಕು ಪುಸ್ತಕಗಳಿಗೂ ಮತ್ತು ರತ್ನಾಕರವರ್ಣಿ-ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗುತ್ತದೆ. ಇದಕ್ಕೆ ರಾಜ್ಯ ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ 12 ಜನ ಪರಿಣಿತರ ಸಮಿತಿ ಪ್ರಾಥಮಿಕವಾಗಿ ಆಯ್ಕೆ ಮಾಡಿತ್ತು.

ನಾಡೋಜ ಡಾ.ಮಹೇಶ ಜೋಶಿಯವರ ನೇತೃತ್ವದ ಸಮಿತಿ ಪಾರದರ್ಶಕವಾಗಿ ಕೆಳಕಂಡ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಿದ್ದು ಶೀಘ್ರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪುಸ್ತಕ ದತ್ತಿ ಪ್ರಶಸ್ತಿಗಳಿಂದ ‘ಪುಸ್ತಕ ಸಂಸ್ಕೃತಿ ನಮ್ಮಲ್ಲಿ ಇನ್ನಷ್ಟು ಬೆಳೆಯಲಿದೆ ಎಂದು ಆಶಿಸಿರುವ ಅವರು ಯುವಜನರು ಪುಸ್ತಕಗಳನ್ನು ಪ್ರಕಟಿಸಲು ಇದು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದಾರೆ. ಬರಹಗಾರರ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನ್ನಡಾಭಿಮಾನಿಗಳು ಇನ್ನಷ್ಟು ‘ಪುಸ್ತಕ ದತ್ತಿ’ಗಳನ್ನು ಸ್ಥಾಪಿಸಲು ನಾಡೋಜ ಡಾ. ಮಹೇಶ ಜೋಶಿಯವರು ಕೋರಿದ್ದಾರೆ. ಒಂದು ಲಕ್ಷ ರೂಪಾಯಿಗಳಿಗೆ ಕಡಿಮೆ ಇಲ್ಲದಂತೆ ಪರಿಷತ್ತಿನಲ್ಲಿ ದತ್ತಿ ಇಟ್ಟು ಅದರ ಬಡ್ಡಿಯಿಂದ ಪುಸ್ತಕ ಬಹುಮಾನವನ್ನು ಆಸಕ್ತರು ನೀಡಬಹುದಾಗಿದೆ. ಈ ಕುರಿತ ವಿವರಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಿಂದ ಪಡೆಯಬಹುದು ಎಂದು ನಾಡೋಜ ಡಾ. ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ 2023ನೆಯ ಸಾಲಿಗೆ ಆಯ್ಕೆಯಾದ ಕೃತಿಗಳು ಮತ್ತು ಲೇಖಕರ ಪಟ್ಟಿ;

ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿಗೆ ಹರಿಹರ ಶ್ರೀನಿವಾಸರಾವ್ ಅವರ ‘ಕರ್ನಾಟಕ ಜಲವಿಜ್ಞಾನ ತಂತ್ರಜ್ಞಾನ’, ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಅಮರೇಶ ಯತಗಲ್ ಅವರ
‘ಗತಾನುಶೀಲನ’, ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ `ಅನುವಾದ ಸಾಹಿತ್ಯಕ್ಕಾಗಿ’ : ಅನುವಾದ ಸಾಹಿತ್ಯ ಕೃತಿಗೆ ವಿಕಾಸ್ ಆರ್. ಮೌರ್ಯರ ಅವರ ‘ಅಂಬೇಡ್ಕರ್ ಜಗತ್ತು’, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ : ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ ಎಸ್. ಗುರುಮೂರ್ತಿ ಅವರ ‘ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ’, ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿಗೆ ರತ್ನಾಕರ್ ಪಿ ಅವರ ‘ಸೀತಕಲ್ಲು ಬಸದಿ’, ವಸುದೇವ ಭೂಪಾಲಂ ದತ್ತಿಗೆ 2023ರಲ್ಲಿ ಪ್ರಕಟವಾದ ಅತ್ಯುತ್ತಮ ಕಾದಂಬರಿ ಕೃತಿಗೆ ಮಧುಮಾಲ ಬಿ. ಲಿಗಾಡೆ ಅವರ ಕಾದಂಬರಿ `ಅಪರ್ಣಾ’, 2023ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನ ಪ್ರಶಸ್ತಿಗೆ ಟಿ.ಎಸ್. ಶ್ರವಣ ಕುಮಾರಿ ಅವರ ‘ಬೆಳಕು ಹರಿವ ಮುನ್ನ’, 2023ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕೃತಿಗೆ ಮೌಲಾಲಿ ಕೆ. ಆಲಗೂರ ಅವರ ‘ನಲುಗದಿರಲಿ ಪರಿಸರ’, 2023ರಲ್ಲಿ ಪ್ರಕಟವಾದ ವೈಚಾರಿಕ ಲೇಖನಗಳ ಕೃತಿಗೆ ಶಶಿಧರ ಉಬ್ಬಳಗುಂಡಿ ಅವರ `ಬೆತ್ತಲೆಯ ಬದುಕಿಗಾಗಿ ಕತ್ತಲೆ ಕಾದಾಟ', ದಿ. ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿಗೆ ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರ ‘ನೆನಪಿಸಿಕೊಂಡ ವಿನೋದ ಪ್ರಸಂಗಗಳು’, ದಿ. ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿಗೆ ಶ್ರೀಕಾಂತ ಹುಲಮನಿ ಅವರ ‘ಶಿಕ್ಷಕ-ಅರಿವಿನ ಅಕ್ಷಯಪಾತ್ರೆ’, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ: ಕಾದಂಬರಿ ಕೃತಿಗೆ ಅಮಿತಾ ಭಾಗವತ್ ಅವರ ‘ನೀಲಿನಕ್ಷೆ’, ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿಗೆ ಶ್ವೇತಾ ನರಗುಂದ ‘ಕಥೆ ಆಯಾಮ’, ಪ್ರಕಾಶಕ ಆರ್. ಎನ್. ಹಬ್ಬು ದತ್ತಿ ಪ್ರಶಸ್ತಿ ಚೋದ್ಯ ಕೃತಿಗೆ ಸಂದಿದ್ದು, ಕೃತಿಯ ಪ್ರಕಾಶನ ಸಂಸ್ಥೆಯಾದ ಅಮೂಲ್ಯ ಪುಸ್ತಕ ಪ್ರಕಾಶನವು ಕಥಾ ಸಂಕಲನ ಪ್ರಕಾರದ ಪ್ರಕಾಶನ ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾಗಿದೆ.


ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್. ಬಸವರಾಜು ದತ್ತಿ) : ಉತ್ತಮ ದಲಿತ ಸಾಹಿತ್ಯ ಕೃತಿಗೆ ಗುರುಪ್ರಸಾದ್ ಕಂಟಲಗೆರೆ ಅವರ ‘ಟ್ರಂಕು ತಟ್ಟೆ’, ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ : ಶ್ರೇಷ್ಠ ಕೃತಿಗೆ ಹಾ.ಮ. ನಾಗಾರ್ಜುನ ಅವರ ‘ಅಂತರಂಗ’, ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ : ಕಾದಂಬರಿಗೆ ಸಿ. ಚಂದ್ರಪ್ಪ ಅವರ ‘ಸೂಫಿ ಚರಿತ್ರೆ-ಚಿಂತನೆ’, ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ : ಮಹಿಳೆಯರ ಲೇಖನಗಳಿಗೆ ಚೇತನಾ ಹೆಗಡೆ ಅವರ ‘ಅವಳ ಪಥ’, ಶ್ರೀಮತಿ ಗಂಗಮ್ಮ ಶ್ರೀ ಟಿ. ಶಿವಣ್ಣ ದತ್ತಿಗೆ ಎಂ.ಎಸ್. ಮುತ್ತುರಾಜ್ ‘ಮಂಗಳವಾದ್ಯ’, ಹಾ.ಮಾ. ನಾಯಕ ಸ್ಮಾರಕ ದತ್ತಿ ಪ್ರಶಸ್ತಿಗೆ ರಿಯಾಜ್ ಪಾಷ ‘ನಿಮ್ಮೊಡನಿದ್ದೂ’, ಡಾ. ವೀಣಾ ಶಾಂತೇಶ್ವರ ದತ್ತಿ : ಕಥಾ ಸಂಕಲನಕ್ಕೆ ನೂರ್ ಜಹಾನ್ ಅವರ ‘ಪರಿವರ್ತನೆ’, ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿಗೆ ಸರಸ್ವತಿ ರಾ. ಭೋಸಲೆ ಅವರ ‘ಮೂರನೇ ಕಾಲು’, ಪಳಕಳ ಸೀತಾರಾಮಭಟ್ಟ ದತ್ತಿಗೆ ಸವಿತಾ ರವಿಶಂಕರ ಅವರ ‘ಚಿಲಿಪಿಲಿ ಕನ್ನಡ ಕಲಿ’, ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ : ಸಣ್ಣ ಕಥಾ ಸಂಕಲನಕ್ಕೆ ಶಂಕರ ಸಿಹಿಮೊಗ್ಗೆ ಅವರ ‘ಬೆನ್ನೇರಿದ ಬಯಲು’, ದಿ. ಗೌರಮ್ಮ ಹಾರ್ನೀಹಳ್ಳಿ ಕೆ. ಮಂಜಪ್ಪ ದತ್ತಿ: ಲೇಖಕಿಯರ ಕೃತಿಗೆ ಜಯಶ್ರೀ ಭ. ಭಂಡಾರಿ ಅವರ ‘ಲೋಕಾಮೃತ’, ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ : ಪ್ರಾಚೀನ ಸಂಪಾದಿತ ಕೃತಿಗೆ ತಾ.ನಂ. ಕುಮಾರಸ್ವಾಮಿ ಅವರ ‘ಮೂರು ಮಹಾ ಶಾಸನಗಳು’, ಜಿ.ಆರ್. ರೇವಯ್ಯ ದತ್ತಿ : ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ಅರವಿಂದ ಚೊಕ್ಕಾಡಿ ಅವರ ‘ಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’, ಡಾ|| ಆರ್.ಜೆ. ಗಲಗಲಿ ದತ್ತಿ : ಬೆಳಗಾವಿ ಜಿಲ್ಲೆಯ ಬರಹಗಾರರ ಉತ್ತಮ ಕವನ ಸಂಕಲನಕ್ಕೆ ಮಲ್ಲಿಕಾರ್ಜುನ ಛಬ್ಬಿ ಅವರ ‘ಹೂವು ಉದುರುವ ಸದ್ದು’, ದಿ|| ಕಾಕೋಳು ಸರೋಜಮ್ಮ ದತ್ತಿ : ನಾಟಕ ಪ್ರಕಾರಕ್ಕೆ ಡಿ.ಎಸ್. ಚೌಗಲೆ ಅವರ ‘ಜನಮಿತ್ರ ಅರಸು’, ನಾ.ಕು. ಗಣೇಶ್ ದತ್ತಿ : ಪ್ರಥಮ ಕವನ ಸಂಕಲನಕ್ಕೆ ಎಲ್.ಪಿ. ಕುಮಾರ್ ಅವರ ‘ತೇಲಿ ಬಂದಿದೆ ದೋಣಿ’, ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ : ಕವನ ಸಂಕಲನಕ್ಕೆ ಹೊನ್ನಪ್ಪಯ್ಯ ಗುನಗಾ ಅವರ ‘ಮೌನಧ್ವನಿ’, ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ: ಸಣ್ಣ ಕಥಾ ಸಂಕಲನಕ್ಕೆ ವಿಶ್ವಪ್ರದೀಪ್ ಹಾಗಲವಾಡಿ ಅವರ ‘ಸೇವಂತಿ’, ಮಲ್ಲಿಕಾ ಪ್ರಶಸ್ತಿ ದತ್ತಿ : ಅತ್ಯುತ್ತಮ ಲೇಖಕಿಯರ ಕೃತಿಗೆ ಸೀತಾ ಎಸ್. ನಾರಾಯಣ ಹರಿಹರ ಅವರ ‘ಜ್ಞಾನವಾರಿಧಿ’, ಅಂತರರಾಷ್ಟ್ರೀಯ ಮಹಿಳಾ ವರ್ಷದ ‘ಮಹಿಳಾ ದತ್ತಿ’: ಮಹಿಳೆಯರ ಅತ್ಯುತ್ತಮ ಕೃತಿಗೆ ಲೀಲ ವಾಸುದೇವ್ ಅವರ ‘ಮೊರಸು ಒಕ್ಕಲಿಗರ ಪ್ರದಾನ ಸಂಪ್ರದಾಯಗಳು’, ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ : ಲೇಖಕಿ ಒಬ್ಬರ ಮಹತ್ವದ ಕೃತಿಗೆ ಪುಷ್ಪ ಭಾರತಿ ಆರ್.ಎ ಅವರ ‘ಹುಡುಕಾಟದ ಮಿಡುಕು’, ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ : (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ ವಿನುತ ಹಂಚಿನಮನಿ ಅವರ ‘ನಾತಿಚರಾಮಿ’, ಶ್ರೀಮತಿ ನೀಲಗಂಗಾ ದತ್ತಿ : ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲೀನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ಎಸ್.ಎನ್. ಚಂದ್ರಕಲಾ ಅವರ ‘ಚಿರಂತನ’, ಶ್ರೀಮತಿ ಶಾರದಾ ಆರ್. ರಾವ್ ದತ್ತಿ : ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ಚಾಂದಿನಿ ಖಲೀದ್ ಅವರ ‘ಸೂಜಿಮೊಗದ ಸುಂದರಿ’, ದಿ|| ಎಚ್. ಕರಿಯಣ್ಣ ದತ್ತಿ: ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ ಕು. ಪ್ರಣತಿ ಆರ್. ಗಡಾದ ಅವರ ‘ನಾನು ಮಳೆಯಾದರೆ’, ಡಾ|| ಎಚ್. ನರಸಿಂಹಯ್ಯ ದತ್ತಿಗೆ ಪಂಪಯ್ಯಸ್ವಾಮಿ ಸಾಲಿಮಠ ಅವರ ‘ಮಸ್ಕಿಶ್ರೀ ಭ್ರಮರಾಂಬದೇವಿ ಸಹಿತ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದರ್ಶನ’, ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ : ಅತ್ಯುತ್ತಮ ಚೊಚ್ಚಲ ಪದ್ಯಕೃತಿಗೆ ಚೇತನ್ ಗವಿಗೌಡ ಅವರ ‘ಪೋಸ್ಟ್ ಬಾಕ್ಸ್’, ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿ : ಪದ್ಯಕೃತಿಗೆ ಟಿ.ವಿ. ಸುರೇಶಗುಪ್ತ ಅವರ ‘ಮುಕ್ತಕ ಮಂದಾರ’, ಗದ್ಯಕೃತಿಗೆ ಶಾಂತಿವಾಸು ಅವರ ‘ಬಾಲ್ಯ ಕಾಣಿಸದ ಕನ್ನಡಿ’, ಪಿ. ಶಾಂತಿಲಾಲ್ ದತ್ತಿ : ಜೈನ ಸಾಹಿತ್ಯಕ್ಕೆ ಹೆಚ್.ಡಿ. ಜಯಪದ್ಮಕುಮಾರ್ ಅವರ ‘ಪುಣ್ಯಗಾಥೆ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ : ‘ಜಾನಪದ ಸಾಹಿತ್ಯ ಕೃತಿಗೆ’ ಮುದ್ದು ಮೂಡುಬೆಳ್ಳೆ ಅವರ ‘ತುಳುನಾಡಿನ ಜನಪದ ವಾದ್ಯಗಳು ಮತ್ತು ಪಾರಂಪರಿಕ ವೃತ್ತಿಗಳು’, ಕುಂಬಾಸ ಪ್ರಶಸ್ತಿ ದತ್ತಿ : ಹಾಸ್ಯ ಸಾಹಿತ್ಯ ಕೃತಿಗೆ ಗುಂಡುರಾವ್ ದೇಸಾಯಿ ಅವರ ‘ಪೆಣ್ಣೆತ್ತ ಖುಷಿಗೆ’, ಪ್ರೊ|| ಡಿ.ಸಿ. ಅನಂತಸ್ವಾಮಿ ದತ್ತಿ : ಕವನ ಸಂಕಲನಕ್ಕೆ ಸೌಮ್ಯ ದಯಾನಂದ ಅವರ ‘ಸಂಜೆ ಐದರ ಸಂತೆ’ ಕೃತಿ ಆಯ್ಕೆಯಾಗಿದೆ.

‘ಸಿಸ’ ಸಂಗಮೇಶ ದತ್ತಿ : ಮಕ್ಕಳ ಸಾಹಿತ್ಯ ಕೃತಿಗೆ ಪಿ.ಆರ್. ನಾಯ್ಕ ಅವರ ‘ಪಾಟಿ ಚೀಲ’, ಶ್ರೀಮತಿ ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ: ರಾಯಚೂರು ಜಿಲ್ಲೆಯ ಬರಹಗಾರರ ಉತ್ತಮ ಸಾಹಿತ್ಯ ಕೃತಿಗೆ ಶಿವಶಂಕರ ಕಡದಿನ್ನಿ ಅವರ ‘ಒಡಲು ಉರಿದಾಗ’, ಶ್ರೀ ಕೆ. ವಾಸುದೇವಾಚಾರ್ ದತ್ತಿ : ಸಣ್ಣಕಥಾ ಸಂಕಲನ ಕೃತಿಗೆ ಮಹೇಶ್ ಭಾರದ್ವಾಜ್ ಹಂದ್ರಾಳು ಅವರ ‘ಕೋಮಲಮ್ಮನ ಕಠೋರ ಕಾಳಜಿ ಮತ್ತು ಇತರ ಕಥೆಗಳು’, ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ : ಹರಿದಾಸ ಸಾಹಿತ್ಯ ಕುರಿತ ಕೃತಿಗೆ ಶೋಭಾ ರಾಜೇಂದ್ರ ಕಲ್ಕೂರ್ ಅವರ ‘ಭಕ್ತಿ ಪುಷ್ಪಮಾಲಿಕಾ’, ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರ ಅತ್ಯುತ್ತಮ ಮಕ್ಕಳ ಪುಸ್ತಕ ಕೃತಿಗೆ ಸುಲೋಚನಾ ಪಿ.ಕೆ ಅವರ ‘ಸತ್ಯದರ್ಶನ’, ಡಾ. ಜಿ. ಚಂದ್ರಮೌಳೇಶ್ವರ ದತ್ತಿ : 2023ರಲ್ಲಿ ಪ್ರಕಟವಾದ ಶ್ರೇಷ್ಠ ಕಾವ್ಯ ಪ್ರಕಾರ ಕೃತಿಗೆ ಸುಮಿತ್ ಮೇತ್ರಿ ಅವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’, ಶ್ರೀಮತಿ ಬೋರಮ್ಮ ಗೋವಿಂದಪ್ಪ ದತ್ತಿ : 2023 ಶ್ರೇಷ್ಠ ಸಣ್ಣ ಕಥಾ ಸಂಕಲನ ಪ್ರಕಾರದ ಕೃತಿಗೆ ಗೋವಿಂದರಾಜು ಎಂ. ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’, ಡಾ. ರಮಾನಂದ ಬನಾರಿ ಮತ್ತು ಶ್ರೀಮತಿ ಶಾಂತಕುಮಾರಿ ದತ್ತಿ : 2023ರಲ್ಲಿ ಪ್ರಕಟವಾದ ಕಾಸರಗೋಡು ಜಿಲ್ಲೆಗೆ ಕನ್ನಡ ಭಾಷೆಯ ಕಾವ್ಯ, ಕಥೆ, ಪ್ರಬಂಧ ಸಂಕಲನಕ್ಕೆ ಅಕ್ಷತಾರಾವ್ ಪೆರ್ಲ ಅವರ ‘ಅವಲಕ್ಕಿ - ಪವಲಕ್ಕಿ’, ಡಾ. ಹೆಚ್.ಎಸ್. ಮದನಕೇಸರಿ ಮತ್ತು ಶ್ರೀಮತಿ ಎಂ.ಪಿ. ಗುಣಮಾಲ ದತ್ತಿ : 2023ರಲ್ಲಿ ಪ್ರಕಟವಾದ ಜೈನಧರ್ಮದ ಲೇಖಕರು ಬರೆದ ಸೃಜನಾತ್ಮಕ ಕೃತಿಗಳ ಪ್ರಕಾರವಾದ ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ ಮತ್ತು ಜನಪದಕ್ಕೆ ವೀಣಾ ಇಂದ್ರಕುಮಾರ್ ಅವರ ‘ಸಾಗರದಿಂದ ಸಾಗರದಾಚೆಗೆ’ ಕೃತಿ ಆಯ್ಕೆಯಾಗಿದೆ ಎಂದು ಪ್ರಕಟಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ಅವರು ತಿಳಿಸಿದ್ದಾರೆ.

 

MORE NEWS

ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ ಎಂ.ಆರ್. ದತ್ತಾತ್ರಿಯವರ 'ಸರ್ಪಭ್ರಮೆ' ಭಾಜನ

16-03-2025 ಬೆಂಗಳೂರು

ಧಾರವಾಡ: ಸಾಹಿತ್ಯ ಗಂಗಾ ಧಾರವಾಡದ ವತಿಯಿಂದ ಕೊಡಮಾಡುವ 2024ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಪ್ರಕಟವಾ...

ಕನ್ನಡ-ತುಳು ವಿದ್ವಾಂಸ ವಾಮನ ನಂದಾವರ ಇನ್ನಿಲ್ಲ

15-03-2025 ಬೆಂಗಳೂರು

ಮಂಗಳೂರು: ಕನ್ನಡ-ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಾಮನ ನಂದಾವರ (82) ಶನಿವಾರ ನಿಧ...

Panchakshari Hiremath; ಬಹು ಭಾಷಾ ಪಂಡಿತ, ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ವಿಧಿವಶ

15-03-2025 ಬೆಂಗಳೂರು

ಧಾರವಾಡ: ಬಹು ಭಾಷಾ ಪಂಡಿತರು, ಹಿರಿಯ ಸಾಹಿತಿಗಳು, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪಂಚಾಕ್ಷ...