ಕಸಾಪದಿಂದ ಪುಸ್ತಕಗಳ ವಿಲೇವಾರಿ

Date: 12-10-2021

Location: ಬೆಂಗಳೂರು


ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ತನ್ನ ದಾಸ್ತಾನಿನಲ್ಲಿ ಇರುವ ಕೆಲವು ಪುಸ್ತಕಗಳ ವಿಲೇವಾರಿಗೆ ತೀರ್ಮಾನಿಸಿದೆ. ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಗ್ರಂಥಾಲಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕನ್ನಡ ಸಂಘಟನೆಗಳು ಪುಸ್ತಕಗಳನ್ನು ಪಡೆಯಬಹುದಾಗಿದೆ. ತಜ್ಞರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಲೇವಾರಿಗೆ ಲಭ್ಯವಿರುವ ಪುಸ್ತಕಗಳ ಪಟ್ಟಿಯನ್ನು ಪರಿಷತ್ತಿನ ವೆಬ್‌ಸೈಟ್ www. kasapa.inನಲ್ಲಿ ಪ್ರಕಟಿಸಲಾಗಿದೆ.

ಆಸಕ್ತರು ತಮಗೆ ಬೇಕಾದ ಪುಸ್ತಕಗಳ ಪಟ್ಟಿಯನ್ನು ಇ-ಮೇಲ್ ವಿಳಾಸ kannadaparishattu@gmail.com ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಕಳುಹಿಸಬೇಕು. ಆಯ್ಕೆ ಮಾಡಿದ ಪುಸ್ತಕಗಳನ್ನು ತಮ್ಮ ಖರ್ಚಿನಲ್ಲಿಯೇ ತೆಗೆದುಕೊಂಡು ಹೋಗಬೇಕು ಎಂದು ಪರಿಷತ್ತಿನ ಆಡಳಿತಾಧಿಕಾರಿ ಎಸ್. ರಂಗಪ್ಪ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

MORE NEWS

ಬರಹದ ಭಾವವು ಮನುಷ್ಯ ಪ್ರೀತಿ ಹೆಚ್ಚ...

16-10-2021 ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪ, ಕೊಪ್ಪಳ

ಬರಹದ ಯಾವುದೇ ಭಾವವು ಮನುಷ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುವಂತಿರಬೇಕು ಎಂದು ಲೇಖಕಿ ಡಾ. ಹೇಢಮಾ ಪಟ್ಟಣಶೆಟ್ಟಿ ಅವರು ಬರ...

ವಿಚಾರವಾದಿ, ಲೇಖಕ ಜಿ.ಕೆ. ಗೋವಿಂದರ...

15-10-2021 ಬೆಂಗಳೂರು

ಪ್ರಗತಿಪರ ವಿಚಾರಗಳೊಂದಿಗೆ ಖ್ಯಾತರಾಗಿದ್ದ ಹಾಗೂ ತಮ್ಮ ಕಂಚಿನ ಕಂಠದಿಂದ ಸೈದ್ಧಾಂತಿಕತೆಯನ್ನುಪ್ರಬಲವಾಗಿ ಪ್ರತಿಪಾದಿಸುತ್...

ಡಾ. ಸಿದ್ದಣ್ಣ ಉತ್ನಾಳ ಪ್ರಶಸ್ತಿಗೆ...

15-10-2021 ವಿಜಯಪುರ

ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ಸಾಹಿತ್ಯಾಸಕ್ತರನ್ನು ಕ್ರಿಯಾಶೀಲರನ್ನಾಗಿಸುತ್ತಲೇ ಇರುವ ವಿಜಯಪುರದ ಕರ್ನಾಟಕ...