ʼಕತ್ಲೂರು ಕಥನʼ ಸಂವಿಧಾನ ರಕ್ಷಣೆಗೆ ಸಹಾಯಕ : ಚಿಂತಕ ಹರ್ಷ ಮಂದರ್

Date: 27-01-2023

Location: ಮಂಗಳೂರು


"ಮಲೆಕುಡಿಯರಿಗೆ ತಮ್ಮ ಪರ ವಾದಗಳ ಅರಿವು ಕಡಿಮೆ ಇರುವುದು ಅವರನ್ನು ಪಟ್ಟಬದ್ದ ಹಿತಾಸಕ್ತಿಗಳ ಗುಂಪಿಗೆ ಸೇರುವಂತೆ ಮಾಡಿದೆ. ನಕ್ಸಲ್‌ ಸೇರಿದಂತೆ ಹಲವು ಸಮಸ್ಯೆಗಳು ಎದುರಾದಾಗ ಬಲಿಯಾದವರು ಮಲೆಕುಡಿಯರು" ಎಂದು ಪತ್ರಕರ್ತ ನವೀನ್ ಸೂರಿಂಜೆ ಅಭಿಪ್ರಾಯಪಟ್ಟರು.

ಮಂಗಳೂರಿನ ಬಿಜೋಡಿಯ ಶಾಂತಿಕಿರಣ ಸಭಾಂಗಣದಲ್ಲಿ ʻಕುತ್ಲೂರು ಕಥನʼ ಕೃತಿಯನ್ನು ದೆಹಲಿಯ ಚಿಂತಕ ಹರ್ಷ ಮಂದರ್‌ ಬಿಡುಗಡೆ ಮಾಡಿದರು.

ಮಲೆಕುಡಿಯರಿಗೆ ತಮ್ಮ ಅಸ್ತಿತ್ವದ ಪರಿಚಯ ಆಗಬೇಕಾಗಿದೆ: ಮಲೆಕುಡಿಯರಿಗೆ ತಮ್ಮ ಪರವಾದ ವಾದಗಳ ಅರಿವು ಕಡಿಮೆ ಇರುವುದು ಅವರನ್ನು ಪಟ್ಟಬದ್ದ ಹಿತಾಸಕ್ತಿಗಳ ಗುಂಪಿಗೆ ಸೇರುವಂತೆ ಮಾಡಿದೆ. ಸಮಾಜ ಪರಿವರ್ತನಾಕಾರರ ಮೇಲೆ ಪ್ರತೀಕಾರ ತೀರಿಸಲು ಪುರೋಹಿತಶಾಹಿ ವರ್ಗವು ಮಲೆಕುಡಿಯ ಸಮುದಾಯವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಮಲೆಕುಡಿಯರಿಗೆ ತಮ್ಮ ಅಸ್ತಿತ್ವದ ಪರಿಚಯ ಆಗಬೇಕಾಗಿರುವ ಅನಿವಾರ್ಯತೆ ಇದೆ. ಮುಸ್ಲಿಮರ ಮೇಲೆ, ದಲಿತರ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ಮಲೆಕುಡಿಯರೂ ಸೇರಿಕೊಂಡಿದ್ದಾರೆ. ಒಂದೊಮ್ಮೆ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಕುತ್ಲೂರು ಪ್ರದೇಶಕ್ಕೆ ಹೋಗಬೇಕಾದರೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕಾದ ಸ್ಥಿತ ಮತ್ತು ಮನೆಯಲ್ಲಿ ಹೆಚ್ಚು ದವಸಧಾನ್ಯಗಳನ್ನು ಇಟ್ಟುಕೊಳ್ಳುವಂತಿರಲಿಲ್ಲ, ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ ಅವರ ಮೇಲೆ ಕೇಸ್ ದಾಖಲಾದರೆ ವಕೀಲರಿಗೂ ನಿಭಾಯಿಸಲು ಕಷ್ಟ ಇತ್ತು ಎಂದು ನವೀನ್ ಸೂರಿಂಜೆ ತಮ್ಮ ಪುಸ್ತಕ ಬಗ್ಗೆ ಮಾತನಾಡಿದರು.

ಸಂವಿಧಾನ ರಕ್ಷಣೆಗೆ ಸಹಾಯಕವಾಗುವ ಕೃತಿ: ಕೃತಿಯನ್ನು ಭಾಷಾ ಸಮಸ್ಯೆ ಕಾರಣದಿಂದಾಗಿ ಓದಲು ಸಾಧ್ಯವಾಗದೆ ಇರುವುದಕ್ಕೆ ಬೇಸರ ಇದೆ. ಆದರೆ ಇದರಲ್ಲಿರುವ ವಿಷಯಗಳನ್ನು ಅರಿತುಕೊಂಡಿದ್ದೇನೆ. ಈ ಕೃತಿ ಸಂವಿಧಾನ ರಕ್ಷಣೆಗೆ ಸಹಾಯಕವಾಗಿದೆ. ಒಂದು ಊರಿನ ನೈಜ ಇತಿಹಾಸ ಈ ಪುಸ್ತಕದಲ್ಲಿ ದಾಖಲಾಗಿದೆ. ಕೃತಿಯಲ್ಲಿರುವ ವಿಠಲ ಮಲೆಕುಡಿಯ, ನವೀನ್ ಸೂರಿಂಜೆ, ದಿನೇಶ್ ಉಳಿಪಾಡಿ, ಮುನೀರ್ ಕಾಟಿಪಳ್ಳ ಇವರೆಲ್ಲ ನಿಜವಾದ ಹೀರೋಗಳು ಎಂದು ಹರ್ಷ ಮಂದರ್ ಅಭಿಪ್ರಾಯ.

ಹಕ್ಕುಗಳ ಹೋರಾಟದ ಕಥನ: ʻಕುತ್ಲೂರು ಕಥನ' ಕೇವಲ ಕುತ್ಲೂರು ಊರಿನ ಕಥನವಲ್ಲ, ಬೇರೆ ಊರುಗಳ ಹಕ್ಕುಗಳ ಹೋರಾಟಕ್ಕೆ ಮತ್ತು ಪುಜಾಸತ್ತಾತ್ಮಕವಾಗಿ ಹೋರಾಡಲು ಬಯಸುವ ಎಲ್ಲರಿಗೂ ಪರಿಹಾರ ಪುಸ್ತಕವಾಗಿದೆ ಎಂದು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಹೇಳಿದರು.

ವೇದಿಕೆಯಲ್ಲಿ ವಿಠಲ ಮಲಕುಡಿಯ ಅವರ ತಾಯಿ ಹೊನ್ನಮ್ಮ, ಮಲೆಕುಡಿಯ ಸಮುದಾಯದ ಮುಖಂಡ ಪೂವಪ್ಪ ಮಲೆಕುಡಿಯ, ಕಾರ್ಮಿಕ ಮುಖಂಡ ವಸಂತ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದ ಫೋಟೋಗಳು...

 

 

 

 

 

 

 

 

 

 

 

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...