ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್

Date: 02-11-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಇಂಗ್ಲೆಂಡ್ ಮೂಲದ ಪೇಂಟಿಂಗ್, ಸ್ಕಲ್ಪ್ಚರ್ ಜೊತೆಗೆ ಬರವಣಿಗೆಯಲ್ಲಿಯೂ ಗುರುತಿಸಿಕೊಂಡಿದ್ದ ಕಲಾವಿದೆ ಲಿಯೊನೊರಾ ಕೇರಿಂಗ್ಟನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಲಿಯೊನೊರಾ ಕೇರಿಂಗ್ಟನ್ (Leonora Carrington)
ಜನನ: 06 ಎಪ್ರಿಲ್, 1917
ನಿಧನ: 25 ಮೇ, 2011
ಶಿಕ್ಷಣ: ಚೆಲ್ಸಿ ಸ್ಕೂಲ್ ಆಫ್ ಆರ್ಟ್, ಲಂಡನ್
ವಾಸ: ಇಂಗ್ಲಂಡ್, ಮೆಕ್ಸಿಕೊ
ಕವಲು: ಸರ್ರಿಯಲಿಸಂ
ವ್ಯವಸಾಯ: ಪೇಂಟಿಂಗ್, ಸ್ಕಲ್ಪ್ಚರ್, ಕತೆ-ಬರಹ

ಲಿಯೊನೊರಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಲಿಯೊನೊರಾ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸರ್ರಿಯಲಿಸಂ ಕಲಾಚಳುವಳಿಯ ಕೊನೆಯ ಕೊಂಡಿಯಾಗಿ, 21ನೇ ಶತಮಾನಕ್ಕೂ ಅದನ್ನು ವಿಸ್ತರಿಸಿದ ಲಿಯೊನೊರಾ ಕೇರಿಂಗ್ಟನ್ ಎರಡನೇ ಮಹಾಯುದ್ಧದ ಬಳಿಕ ಸರ್ರಿಯಲಿಸಂ ಜಾಗತಿಕವಾಗಿ ಹರಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ತನ್ನ ವಿಕ್ಷಿಪ್ತ ಬದುಕು ಮತ್ತು ಕಲೆ - ಬರಹಗಳಿಗಾಗಿ ಹೆಸರಾಗಿದ್ದಾರೆ.

ಬ್ರಿಟನ್ನಿನ ಸಿರಿವಂತ ಟೆಕ್ಸ್‌ಟೈಲ್ ಉದ್ಯಮಿ ಹೆರಾಲ್ಡ್ ಕೇರಿಂಗ್ಟನ್-ಅವರ ಐರಿಷ್ ಪತ್ನಿ ಮೌರಿ ಮೂರ್‌ ಹೆಡ್ ದಂಪತಿಯ ಮಗಳು ಲಿಯೊನೊರಾ ಬೆಳೆದದ್ದು ಲಂಕಾಶೈರ್‌ನಲ್ಲಿರುವ ತಂದೆಯ ಎಸ್ಟೇಟಿನಲ್ಲಿ. ತನ್ನ ಐರಿಷ್ ನ್ಯಾನಿ ತನಗೆ ಹೇಳುತ್ತಿದ್ದ ಸೆಲ್ಟಿಕ್ ಅಜ್ಜಿ ಕತೆಗಳ ಸಿಂಬಲಿಸಂ ಆಕೆಯನ್ನು ತುಂಬಾ ಪ್ರಭಾವಿಸಿತ್ತು. ಬಾಲ್ಯದಲ್ಲಿ ತೀರಾ ಅವಿಧೇಯ, ಬಂಡುಹೂಡುವ ಬಾಲಕಿ ಆಗಿದ್ದ ಲಿಯೊನೊರಾ ಎರಡು ಬಾರಿ ಶಾಲೆಯಿಂದ ಹೊರಹಾಕಿಸಿಕೊಂಡಿದ್ದರು. ಕಡೆಗೆ ತಂದೆ ಆಕೆಯನ್ನು ಇಟಲಿಗೆ ಕಳುಹಿಸಿದಾಗ ಅಲ್ಲಿ ಆಕೆ ಕಂಡ ಬರೊಕ್ ಸಂಸ್ಕೃತಿ ಮತ್ತು ಇಟಲಿಯ ರೆನಿಸಾನ್ಸ್ ಪೇಂಟಿಂಗ್‌ಗಳು ಆಕೆಯಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದವು. ಹಾಗೆ ಚೆಲ್ಸಿ ಸ್ಕೂಲ್ ಆಫ್ ಆರ್ಟ್‌ಗೆ ಸೇರಿಕೊಂಡ ಆಕೆ ಆಗತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಸರ್ರಿಯಲಿಸಂನತ್ತ ಆಕರ್ಷಿತರಾದರು.

ಬ್ರಿಟಿಷ್ ಅರಿಸ್ಟೊಕ್ರಸಿಯ ಪೂರ್ವನಿರ್ಧರಿತ ದೊಡ್ಡಸ್ಥಿಕೆಗಳಿಂದ ಉಸಿರುಗಟ್ಟಿಹೋದ ಆಕೆ, ಜರ್ಮನ್ ಕಲಾವಿದ ಮ್ಯಾಕ್ಸ್ ಅರ್ನ್ಸ್ಟ್‌ರಲ್ಲಿ ಅನುರಕ್ತರಾದರು. ಅಪ್ಪನ ಇಚ್ಛೆ ಮೀರಿ ಆಗಲೇ ವಿವಾಹಿತ ಮ್ಯಾಕ್ಸ್‌ ಜೊತೆ ಪ್ರಣಯ ನಡೆದಿದ್ದಾಗ, ಅಪ್ಪ ಆತನ ಕಲೆಯಲ್ಲಿ ಅಶ್ಲೀಲತೆ ಇದೆ ಎಂದು ಪೊಲೀಸರಿಗೆ ಹೇಳಿ ಆತನನ್ನು ಬಂಧನಕ್ಕೆ ಒಳಪಡಿಸಿದ್ದೂ ಇದೆ. ಹಾಗೆ, ಇಬ್ಬರೂ ತಮ್ಮ ಕುಟುಂಬಗಳನ್ನು ತ್ಯಜಿಸುತ್ತಾರೆ, ಮ್ಯಾಕ್ಸ್ ಜೊತೆ ಫ್ರಾನ್ಸ್‌ಗೆ ತೆರಳಿದ ಲಿಯೊನೊರಾ ಅಲ್ಲಿ ಗಂಭೀರವಾಗಿ ತನ್ನ ಚಿತ್ರರಚನೆಯಲ್ಲಿ ತೊಡಗಿಕೊಳ್ಳುತ್ತಾರೆ. ದುರದೃಷ್ಟವಶಾತ್ ಎರಡನೇ ಮಹಾಯುದ್ಧ ಆರಂಭಗೊಂಡು, ಫ್ರಾನ್ಸ್ ಜರ್ಮನಿಯ ವಶವಾದಾಗ ನಾಝಿಗಳಿಂದ ಪದೇಪದೇ ಬಂಧಿತರಾಗುತ್ತಿದ್ದ ಮ್ಯಾಕ್ಸ್ ಫ್ರಾನ್ಸ್ ಮತ್ತು ಲಿಯೊನೊರಾರನ್ನು ಏಕಾಏಕಿ ಶಾಶ್ವತವಾಗಿ ತ್ಯಜಿಸಿ ರಾತ್ರೋರಾತ್ರಿ ಅಮೆರಿಕಕ್ಕೆ ತೆರಳುತ್ತಾರೆ.

ಮ್ಯಾಕ್ಸ್ ತನ್ನ ಬದುಕಿನಿಂದ ಏಕಾಏಕಿ ದೂರಾದದ್ದು ಲಿಯೊನೊರಾ ಮೇಲೆ ತೀವ್ರ ಮಾನಸಿಕ ಆಘಾತ ಉಂಟು ಮಾಡುತ್ತದೆ. ಆಕೆಯೂ ತನ್ನ ಬಂಧನವನ್ನು ತಪ್ಪಿಸಿಕೊಳ್ಳಲು ಸ್ಪೇನಿಗೆ ಪಲಾಯನ ಮಾಡಬೇಕಾಗುತ್ತದೆ, ಅಲ್ಲಿ ಆಕೆಗೆ ಆತಂಕ-ಭ್ರಮೆ ಇತ್ಯಾದಿ ಕಾಡತೊಡಗಿ, ಮಾನಸಿಕ ಆಸ್ಪತ್ರೆಯಲ್ಲಿ ಸುದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ. ತನ್ನ ಈ ಅನುಭವವನ್ನು ಆಕೆ ತನ್ನ ಮೊದಲ ಕಾದಂಬರಿ Down Below (1945) ಮತ್ತು ಅದೇ ಹೆಸರಿನ ಕಲಾಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಅವಧಿಯ ಅನುಭವಗಳೇ ತನ್ನ ಕಲಾ ಬದುಕಿಗೆ ಪ್ರೇರಣೆ ಎಂದು ಆಕೆ ಹೇಳಿಕೊಂಡದ್ದಿದೆ. ಮಧ್ಯೆ ಮೆಕ್ಸಿಕನ್ ಕವಿ ಮತ್ತು ಪಿಕಾಸೊ ಗೆಳೆಯ ರೆನಾಟೊ ಲೆಡುಕ್ ಅವರನ್ನು ಮದುವೆ ಆಗಿ ಸಣ್ಣ ಅವಧಿಯಲ್ಲೇ ತ್ಯಜಿಸಿದ ಲಿಯೊನೊರಾ ಮುಂದೆ ಹಂಗರಿಯ ಫೊಟೊಗ್ರಾಫರ್ ಎಮೆರಿಕ್ ವೈಸ್ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ತನ್ನದೇ ಬದುಕಿನ ಸರ್ರಿಯಲ್ ಅನುಭವಗಳನ್ನು ಬಿಂಬಿಸತೊಡಗಿದ ಆಕೆ ಕಲಾಕೃತಿಗಳ ಜೊತೆಗೆ ಹಲವಾರು ಕತೆ-ಕಾದಂಬರಿಗಳನ್ನೂ ರಚಿಸುತ್ತಾರೆ. The Hearing Trumpet (1976) ಆ ಸಂದರ್ಭದಲ್ಲಿ ರಚಿತವಾದ ಕಾದಂಬರಿ. ಬರಹಗಾರ ಆಕ್ಟೇವಿಯೊ ಪಾಜ್, ಫಿಲ್ಮ್ ಮೇಕರ್ ಲುಯಿಸ್ ಬ್ರುನೆಲ್ ಮೊದಲಾದವರೊಂದಿಗೆ ಸಂಬಂಧ ಹೊಂದಿದ್ದ ಲಿಯೊನೊರಾ ಕಲಾವಿದೆಯಾಗಿಯೂ ಆಗ ಸಾಕಷ್ಟು ಪ್ರಸಿದ್ಧಿ ಗಳಿಸಿದ್ದರು.

90ರ ಬಳಿಕ, ಮೆಕ್ಸಿಕೊ-ನ್ಯೂಯಾರ್ಕ್-ಚಿಕಾಗೊಗಳಲ್ಲಿ ನೆಲೆಸಿದ್ದ ಲಿಯೊನೊರಾ ತನ್ನ ಬದುಕಿನ ಕೊನೆಯ ದಿನಗಳಲ್ಲಿ ಕಂಚಿನ ಶಿಲ್ಪಗಳನ್ನೂ ರಚಿಸಿದರು. ಸಾವು ಆಕೆಯನ್ನು ಗಾಢವಾಗಿ ಕಾಡುತ್ತಿತ್ತು. ಆಕೆ ಕೊನೆಗೂ ಹಂದಿಜ್ವರದ ಕಾರಣಕ್ಕೆ ನ್ಯುಮೋನಿಯಾ ಆಗಿ, ಅದರ ಸಂಕೀರ್ಣ ತೊಂದರೆಗಳಿಂದ ತನ್ನ 94ನೇ ವಯಸ್ಸಿನಲ್ಲಿ ಮೃತಪಟ್ಟರು. ಆಕೆ ತೀರಿಕೊಂಡ ಬಳಿಕ, ಆಕೆಯ ಕಲಾಕೃತಿಗಳ ಕುರಿತು ಕಲಾ ಜಗತ್ತಿನಲ್ಲಿ ಆಸಕ್ತಿ ಹೆಚ್ಚಾಗಿದೆ. ಆಕೆ ಜೀವಂತ ಇದ್ದಾಗ ಮ್ಯಾಕ್ಸ್ ಕಲಾಕೃತಿಗಳು ಹೆಚ್ಚು ಪ್ರಚಾರ ಪಡೆದದ್ದರಿಂದ ಆಕೆಯ ಕೃತಿಗಳು ಹೆಚ್ಚು ಪ್ರಚಾರದಲ್ಲಿರಲಿಲ್ಲ.

ತನ್ನ ಕಲಾಕೃತಿಗಳಲ್ಲಿ ಫ್ಯಾಂಟಸಿಗೆ ಹೆಚ್ಚು ಒತ್ತು ಕೊಟ್ಟ ಲಿಯೊನೊರಾ ತೀರಾ ವೈಯಕ್ತಿಕವೆನ್ನಿಸುವ ಸಿಂಬಲಿಸಂನೊಂದಿಗೆ ಕಲಾಕೃತಿಗಳನ್ನು ರಚಿಸುತ್ತಾರೆ, ಅವನ್ನು ವಿವರಿಸುವ ಗೊಡವೆಗೂ ಹೋಗುವುದಿಲ್ಲ. ಸಾಮಾನ್ಯವಾಗಿ ರೂಪಾಂತರ, ಮ್ಯಾಜಿಕಲ್ ಚಿತ್ರಣಗಳ ಜೊತೆಗೆ ಆಕೆಯ ವಿಮ್ಸಿಕಲ್ ವ್ಯಕ್ತಿತ್ವ (ಚಂಚಲ) ಚಿತ್ರಗಳಲ್ಲಿ ಬಿಂಬಿತವಾಗುತ್ತದೆ. ಅರ್ಧ ಮನುಷ್ಯ ಅರ್ಧ ಪ್ರಾಣಿ ರೂಪದ ದೇಹಗಳು ವಿಫುಲವಾಗಿರುವ ಈ ಕಲಾಕೃತಿಗಲಲ್ಲಿ ಕೆಲವು ಭಯಾನಕವಾಗಿದ್ದರೆ ಇನ್ನು ಕೆಲವು ತಮಾಷೆಯವಾಗಿರುವುದೂ ಇದೆ. ಸರ್ರಿಯಲಿಸಂ ಸಾಮಾನ್ಯವಾಗಿ ಹೆಣ್ಣು ಭೋಗವಸ್ತು ಎಂದೇ ಚಿತ್ರಿಸುವುದರಿಂದ ದೂರ ಸರಿದು, ತನ್ನದೇ ದೃಷ್ಟಿಕೋನದಿಂದ ತನ್ನ ಬದುಕು-ಗೆಳೆತನಗಳ ಆಧಾರದಲ್ಲಿ ಅವರು ಹೆಣ್ಣನ್ನು ಚಿತ್ರೀಕರಿಸುತ್ತಾರೆ. ಆಕೆ ತನ್ನ ವಿಕ್ಷಿಪ್ತತೆಯ ಬಗ್ಗೆ ಸಂದರ್ಶನವೊಂದರಲ್ಲಿ “I am as mysterious to myself as I am mysterious to others” ಎಂದು ಹೇಳಿಕೊಂಡದ್ದಿದೆ.

ಲಿಯೊನೊರಾ ಅವರ ಒಂದು ಸಂದರ್ಶನ:

ಲಿಯೊನೊರಾ ಅವರ ಒಂದು ಪುಟ್ಟ ಸಂದರ್ಶನ:

ಲಿಯೊನೊರಾ ಅವರ ಪರಿಚಯ:

ಚಿತ್ರ ಶೀರ್ಷಿಕೆಗಳು:
ಲಿಯೊನೊರಾ ಅವರ Adieu Ammenotep (1960)

ಲಿಯೊನೊರಾ ಅವರ Ikon (1988)

ಲಿಯೊನೊರಾ ಅವರ Labyrinth (1991)

ಲಿಯೊನೊರಾ ಅವರ Les distractions de Dagobert (1945)

ಲಿಯೊನೊರಾ ಅವರ Operation Wednesday (1944)

ಲಿಯೊನೊರಾ ಅವರ Peacocks of Chen (1971)

ಲಿಯೊನೊರಾ ಅವರ Portrait of Max Ernst (1939)

ಲಿಯೊನೊರಾ ಅವರ Samahin Skin (1975)

ಲಿಯೊನೊರಾ ಅವರ Self Portrait (1937-38)

ಲಿಯೊನೊರಾ ಅವರ Temple of the word (1954)

ಲಿಯೊನೊರಾ ಅವರ The Giantess, (1947)

ಈ ಅಂಕಣದ ಹಿಂದಿನ ಬರೆಹಗಳು:
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...