ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ- 2025’ ಅರ್ಜಿ ಆಹ್ವಾನ

Date: 01-08-2024

Location: ಬೆಂಗಳೂರು


ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ- 2025’ ಪ್ರಶಸ್ತಿಗಾಗಿ ಭಾರತೀಯ 24 ಭಾಷೆಗಳಲ್ಲಿ ಅಂಗೀಕರಿಸಿರುವಂತಹ ಆಸಕ್ತ ಪ್ರಕಾಶಕರು ಹಾಗೂ ಯುವ ಸಾಹಿತಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯುವ ಪುರಸ್ಕಾರ ಪ್ರಶಸ್ತಿಯು 50 ಸಾವಿರ ರೂ. ನಗದನ್ನು ಒಳಗೊಂಡಿದೆ.

ನಿಯಮಗಳು: 2025ರ ಜನವರಿ 1ಕ್ಕೆ 35 ವರ್ಷ ವಯಸ್ಸು ಮೀರದ ಪ್ರಕಾಶಕರು ಹಾಗೂ ಸಾಹಿತಿಗಳು ತಮ್ಮ ಜನ್ಮ ದೃಢೀಕರಣವನ್ನು ಕಳುಹಿಸಬೇಕು. ಪತ್ರದ ಜೊತೆಗೆ ಪುಸ್ತಕಗಳನ್ನು ಆಗಸ್ಟ್ 31, 2024 ರೊಳಗೆ ಸಲ್ಲಿಸಬೇಕು. ಜನ್ಮ ದೃಢೀಕರಣ ಪತ್ರವಿಲ್ಲದ ಪುಸ್ತಕಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಕಾಡೆಮಿ ತಿಳಿಸಿದೆ.

ಅರ್ಜಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ಅಕಾಡೆಮಿ ವೆಬ್‌ಸೈಟ್ www.sahitya.akademi.gov.in ಸಂಪರ್ಕಿಸುವಂತೆ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...