ಖಗೋಳಶಾಸ್ತ್ರದ ‘ಗಣಿತಗನ್ನಡಿ’ ಸಂಶೋಧನೆ ಅಗತ್ಯ: ವಿಚಾರಗೋಷ್ಠಿ ಸ್ಪಂದನೆ

Date: 24-10-2021

Location: ಮೀಟ್.ಗೂಗಲ್


ಖಗೋಳಶಾಸ್ತ್ರ ಕುರಿತು ಅತ್ಯಂತ ಖಚಿತವಾದ, ನಿಖರವಾದ ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡ ಹಾಗೂ ತಾಳೆಗರಿಯಲ್ಲಿ ದಾಖಲಾಗಿರುವ ‘ಗಣಿತಗನ್ನಡಿ’ ಕುರಿತಂತೆ ಸಂಶೋಧನೆ ಅಗತ್ಯವಿದೆ ಎಂದು ವಿಜ್ಞಾನ -ಸಾಹಿತ್ಯಾಸಕ್ತರು ಒಮ್ಮತದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.

`ಗಣಿತಗನ್ನಡಿ' ಎಂಬ ಕನ್ನಡದ ಖಗೋಳ ಶಾಖೆಯ ಮಹತ್ವದ ಗ್ರಂಥವನ್ನು (1604) ಕುರಿತು ಬಿಎಂಶ್ರೀ ಪ್ರತಿಷ್ಠಾನವು ಭಾನುವಾರ ಬೆಳಿಗ್ಗೆ ಅಂತರ್ಜಾಲದಲ್ಲಿ (ಮೀಟ್ ಗೂಗಲ್) ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ವಿದ್ವಾಂಸರು ಈ ರೀತಿಯ ವಿಚಾರಗಳನ್ನು ಆಗ್ರಹಿಸಿ, ಖಗೋಳಶಾಸ್ತ್ರ ಸಂಶೋಧನಾ ವಲಯದ ಗಮನ ಸೆಳೆದರು.

ಜ್ಯೋತಿಷ್ಯವು ಸುಳ್ಳು ಎಂದು ಹೇಳಲಾಗುತ್ತದೆ. ಆದರೆ, ಖಗೋಳದ ಸಿದ್ಧಾಂತಗಳೊಂದಿಗೆ ಜ್ಯೋತಿಷ್ಯ ಶಾಸ್ತ್ವನ್ನು ಬಲಪಡಿಸಬಹುದು ಎಂಬುದಕ್ಕೆ ಗಣಿತಗನ್ನಡಿಯಲ್ಲಿ ಸಾಕ್ಷ್ಯಾಧಾರಗಳಿವೆ. ತಾಳೆಗರಿಯಲ್ಲಿರುವ ಗಣಿತಗನ್ನಡಿಯ ಕ್ಲಿಷ್ಟವಾದ ವಿಷಯಗಳನ್ನು ಸರಳೀಕರಿಸಲು ಸಾಧ್ಯವಾದರೆ, ಖಗೋಳಶಾಸ್ತ್ರದಲ್ಲಿ ರಹಸ್ಯವಾಗಿರುವ ಎಷ್ಟೋ ಸಂಗತಿಗಳು ಬೆಳಕು ಕಾಣಬಹುದು. ಆದ್ದರಿಂದ, ಖಗೋಳ ವಿಜ್ಞಾನಿಗಳು ಇತ್ತ ಗಮನ ಹರಿಸಬೇಕು ಎಂದು ಆಶಿಸಿದರು.

ಶ್ರೀ ಬೇಟೆರಾಯ ದೀಕ್ಷಿತ್, ಪ್ರೊ. ಬಿ. ರಾಮಸ್ವಾಮಿ, ಎಸ್, ಶ್ರೀಕಂಠಯ್ಯ ಹಾಗೂ ಶ್ರೀಮತಿ ಎಚ್.ವಿ. ಸಾವಿತ್ರಮ್ಮ ರಾಮಸ್ವಾಮಿ ದತ್ತಿ ವಿಜ್ಞಾನ ಗೋಷ್ಠಿ ಅಂಗವಾಗಿ ಜರುಗಿದ ಈ ಗೋಷ್ಠಿಯಲ್ಲಿ “ಆಂಗ್ಲ ಭಾಷಾನುವಾದ ಮತ್ತು ಗಣಿತದ ವಿಶ್ಲೇಷಣೆಯೊಡನೆ” ಕೃತಿಯ ಕರ್ತೃ ಜಾವಗಲ್ ಸೀತಾರಾಮ, ಡಾ.ಬಿ.ಎಸ್.ಶೈಲಜಾ ಹಾಗೂ ಖ್ಯಾತ ವಿಜ್ಞಾನ ಬರಹಗಾರ ಪ್ರೊ.ಬಾಲಚಂದ್ರ ರಾವ್ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿ, 16ನೇ ಶತಮಾನದಲ್ಲಿ ರಚಿತವಾದ ಗಣಿತಗನ್ನಡಿ ಕೃತಿಯ ಕುರಿತು ಸಂಶೋಧನೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಡಾ.ಆರ್.ಲಕ್ಷ್ಮೀನಾರಾಯಣ ಸೇರಿದಂತೆ ವಿದ್ವಾಂಸರು ಹಾಗೂ ವಿಜ್ಞಾನ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ ಬೈರಮಂಗಲ ರಾಮೇಗೌಡರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಬಿ.ಸಿ.ರಾಜಕುಮಾರ್ ಅವರು ಕಾರ್ಯಕ್ರಮ ಸಂಯೋಜನೆಯೊಂದಿಗೆ ನಿರೂಪಿಸಿದರು.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...

ಜೋಗಿ ಅವರ 'ಭಗ್ನಪ್ರೇಮಿಯ ಅಪೂರ್ಣ ಡೈರಿ' ಕೃತಿ ಬಿಡುಗಡೆ ಸಮಾರಂಭ

22-04-2024 ಬೆಂಗಳೂರು

ಬೆಂಗಳೂರು: ಸಾವಣ್ಣ ಪ್ರಕಾಶನದ 200ನೇ ಕೃತಿ, ಲೇಖಕ ಜೋಗಿ ಅವರ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಬಿಡುಗಡೆ ಕಾ...