ಕಿತ್ತೂರು ಉತ್ಸವ : ಕವಿಗೋಷ್ಠಿಗೆ ಕವನಗಳ ಆಹ್ವಾನ

Date: 22-09-2022

Location: ಬೈಲಹೊಂಗಲ


ಬೈಲಹೊಂಗಲ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಅಕ್ಟೋಬರ್ ತಿಂಗಳಿನಲ್ಲಿ ಕವಿಗೋಷ್ಠಿ ಏರ್ಪಡಿಸಲು ನಿರ್ಧರಿಸಲಾಗಿದೆ.

ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ವೀರರಾಣಿ ಕಿತ್ತೂರು‌ ಚನ್ನಮ್ಮ, ಸ್ವಾತಂತ್ರ್ಯ ಹೋರಾಟಗಾರರು,  ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ.

ಕವನ 30 ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿಟಿಪಿ ಮಾಡಿಸಿ ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊಂದಿಗೆ ಸೆಪ್ಟೆಂಬರ್ 30 ರ ಒಳಗಾಗಿ ಶ್ರೀಮತಿ ಮಂಜುಳಾ ಶೆಟ್ಟರ್, ಗೌರವ ಕಾರ್ಯದರ್ಶಿಗಳು, ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು, c/o ರಾಜು ಹಕ್ಕಿ, ಮೆಳೆಪ್ಪನವರ ಚಾಳ, ಬೈಲಹೊಂಗಲ- 591102, ಬೆಳಗಾವಿ ಜಿಲ್ಲೆ ಈ ವಿಳಾಸಕ್ಕೆ ಅಂಚೆ ಮೂಲಕ ಕಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9945326808/ 9844491490 ಸಂಪರ್ಕಿಸಬೇಕೆಂದು ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿ: ...

01-10-2022 ಬೆಂಗಳೂರು

ಯುವ ವಾಹಿನಿ ಕೇಂದ್ರ ಸಮಿತಿಯಿಂದ ನೀಡಲಾಗುವ ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಲೇಖಕ, ವಿಮರ್ಶಕ ಡಾ. ಬಿ. ಜನಾ...

ಕನ್ನಡವು ಸಂವಹನಕ್ಕಷ್ಟೇ ಅಲ್ಲ; ಅದಕ...

01-10-2022 ಬೆಂಗಳೂರು

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಪೂರೈಸಲು 5 ಕೋಟಿ ಅನುದಾನ...

ಪುಸ್ತಕಗಳ ರಚನೆಯಲ್ಲಿ ಎಚ್ಚರಿಕೆ ಅವ...

30-09-2022 ಪುತ್ತೂರು.

ಪುಸ್ತಕಗಳು ಓದುಗರ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲೇಖಕರು ಪುಸ್ತಕವನ್ನು ಎಚ್ಚರಿಕೆಯಿಂದ ರಚಿಸಬೇಕಾದ...