ಖ್ಯಾತ ಚುಟುಕು ಕವಿ ‘ವಿಡಂಬಾರಿ’ ನಿಧನ

Date: 14-02-2020

Location: ಕಾರವಾರ


ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಡಂಬಾರಿ(84) ಶುಕ್ರವಾರ ರಾತ್ರಿ ಕಡತೋಕೆಯಲ್ಲಿ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.

‘ವಿಡಂಬಾರಿ’ ಕಾವ್ಯನಾಮದಿಂದ ಬರೆಯವ ವಿಷ್ಣು ಗ. ಭಂಡಾರಿ ಜನಿಸಿದ್ದು 1935 ಫೆಬ್ರುವರಿ 29 ರಂದು. ‘ವಿಶಾಲ ಕರ್ನಾಟಕ’ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು (ಅಂಚೆ ನೌಕರರಾಗಿದ್ದ ವಿಷ್ಣು ಅವರ ಹೆಸರಿನಲ್ಲಿಯೇ ಪ್ರಕಟವಾದರೆ ಅನವಶ್ಯಕ ತೊಂದರೆ ಎಂಬ ಕಾರಣದಿಂದ ಸಂಪಾದಕರೇ ನಾಮಧೇಯ ಬದಲಿಸಿದ್ದರು). ಮುಂದೆ ಅದುವೆ ಕಾವ್ಯನಾಮ ಆಯಿತು. ‘ವಿಡಂಬಾರಿ’ ಅವರ ಬದುಕಿಗೆ ಪಕ್ವತೆ ಬಂದದ್ದು ಭಟ್ಕಳದ ಶಿರಾಲಿಯಲ್ಲಿ. ನಿವೃತ್ತಿ ಆಗುವವರೆಗೂ ಶಿರಾಲಿಯಲ್ಲಿಯೇ ಇದ್ದರು. ಅವರ ಬದುಕಿಗೆ ಹೊಸ ಚಾಲನೆ ನೀಡಿದ್ದು ಶಿರಸಿಯ ‘ಚಿಂತನ’ ಕನ್ನಡ ಪುಸ್ತಕ ಮಳಿಗೆ. 

ನಿವೃತ್ತಿಯ ನಂತರ ಜಲ್ಲಿ ಕ್ರಶ್ಶರಿನಲ್ಲಿ ಜೀವ ತೇಯುತ್ತಿದ್ದ ‘ವಿಡಂಬಾರಿ’ ಅವರು ಪುಸ್ತಕದಂಗಡಿಯ ಮ್ಯಾನೇಜರ ಆಗಿ ನೇಮಕಗೊಂಡರು. ಸ್ವಂತ ಮನೆ ಇಲ್ಲದ ಅವರು ಶಿರಸಿಗೆ ಸ್ಥಳಾಂತರವಾದರು. ಅಂದಿನಿಂದ ಪುಸ್ತಕಗಳೇ ಅವರ ದಿನಚರಿ. ವಿಡಂಬಾರಿ ಅವರು ಈವರೆಗೆ 4 ಕವನ ಸಂಕಲನ ಪ್ರಕಟಿಸಿದ್ದಾರೆ. ‘ಒಗ್ಗರಣೆ’  (1981), ‘ಕವಳ’ (1986) ‘ಕುದಿ ಬಿಂದು’ (2004) ‘ವಿಡಂಬಾರಿ ಕಂಡಿದ್ದು’ (2010) ಚುಟುಕು ಸಂಕಲನ. ‘ಅಂಚೆ ಪೇದೆಯ ಆತ್ಮ ಕಥನ’ ಅವರ ಆತ್ಮಕಥನ… ಹೀಗೆ 7 ಪುಸ್ತಕ ಪ್ರಕಟವಾಗಿವೆ. ಇತ್ತೀಚೆಗೆ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಮಗಳ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮರಣಾನಂತರ ಅವರ ಕುಟುಂಬದವರು ಕಾರವಾರ ಮೆಡಿಕಲ್ ಕಾಲೇಜಿಗೆ ‘ವಿಡಂಬಾರಿ’ ಅವರ ದೇಹದಾನ ಮಾಡುತ್ತಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. 

MORE NEWS

ಬುಕ್ ಬ್ರಹ್ಮದಿಂದ ವಿವಿಧ ಸ್ಪರ್ಧೆಗ...

03-08-2020 ಬೆಂಗಳೂರು

ಕನ್ನಡ ಸಾರಸ್ವತ ಲೋಕದ ಸಾಹಿತ್ಯ ದಾಖಲೀಕರಣ ಹಾಗೂ ಸುದ್ದಿಯ ತಾಣ ಬುಕ್‌ ಬ್ರಹ್ಮ ವೆಬ್‌ಸೈಟ್‌&nbs...

ಬುಕ್ ಬ್ರಹ್ಮ ಆಯೋಜಿಸಿದ್ದ ‘ಜನ ಮೆಚ...

30-07-2020 ಬುಕ್ ಬ್ರಹ್ಮ

ಬುಕ್ ಬ್ರಹ್ಮವು ನವಕರ್ನಾಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಜನ ಮೆಚ್ಚಿದ ಕವಿತೆ’ ಸ್ಪರ್ಧೆಯ ಫಲಿ...

ಬುಕ್ ಬ್ರಹ್ಮ ಆಯೋಜಿಸಿದ್ದ ‘ಜನ ಮೆಚ...

30-07-2020 ಬುಕ್ ಬ್ರಹ್ಮ

ಬುಕ್ ಬ್ರಹ್ಮವು ಅಂಕಿತ ಪುಸ್ತಕ ಸಹಯೋಗದಲ್ಲಿ ಆಯೋಜಿಸಿದ್ದ ‘ಜನ ಮೆಚ್ಚಿದ ಕತಾ’ ಸ್ಪರ್ಧೆಯ ಫಲಿತಾಂಶ ...

Comments

Magazine
With us

Top News
Exclusive
Top Events