ಲಹರಿ ಪತ್ರಿಕೆಯ ಯುಗಾದಿ ವಿಶೇಷ ಸಂಚಿಕೆಗೆ ಕಥೆಗಳ ಆಹ್ವಾನ

Date: 13-01-2022

Location: ಚೆನ್ನೈ


ಚೆನ್ನೈನ ಕನ್ನಡ ಬಳಗ ಪ್ರಕಾಶನದಲ್ಲಿ ಪ್ರಕಟಗೊಳ್ಳುತ್ತಿರುವ ಲಹರಿ ಪತ್ರಿಕೆ ಯುಗಾದಿ ವಿಶೇಷ ಸಂಚಿಕೆ ಹೊರತರುತ್ತಿದ್ದು, ಈ ಹಿನ್ನೆಲೆಯಲ್ಲಿ ಲಹರಿ ಕಥೆ ಸ್ಪರ್ಧೆ ಯನ್ನು ಆಯೋಜಿಸಿದೆ. ದೇಶ-ವಿದೇಶದ ಯಾವುದೇ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕಥಾ ವಿಭಾಗದಲ್ಲಿ ಪ್ರಥಮ/ದ್ವಿತೀಯ/ತೃತೀಯ ಬಹುಮಾನಗಳಿದ್ದು ಅನುಕ್ರಮವಾಗಿ 5000/3000/2000 ರೂಪಾಯಿ ಬಹುಮಾನ ನಿಗದಿಪಡಿಸಲಾಗಿದೆ. ಇದರೊಂದಿಗೆ ತಲಾ 500 ರೂ.ಗಳ ಐದು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ಬಹುಮಾನಕ್ಕೆ ಆಯ್ಕೆಯಾಗದ, ಪ್ರಕಟಣೆಗೆ ಯೋಗ್ಯವೆನಿಸಿದ ಬರಹಗಳನ್ನು ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ಲಹರಿ ಪತ್ರಿಕೆಯ ಸಂಪಾದಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯಮಗಳು: ಕಥೆ ಸ್ವಂತದ್ದಾಗಿರಬೇಕು. ಬೇರೆಲ್ಲೂ ಪ್ರಕಟಗೊಂಡಿರಬಾರದು. ಕಥೆ ನುಡಿ ಬರವಣಿಗೆಯಲ್ಲಿ ಟೈಪ್ ಮಾಡಿದ ನಾಲ್ಕರಿಂದ ಐದು ಎ4 ಸೈಜ್ ಪೇಜನ್ನು ಮೀರಬಾರದು.

ತಮ್ಮ ಬರಹಗಳನ್ನು ಫೋಟೋ, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಫೆಬ್ರವರಿ 5, 2022ಕ್ಕೆ ಮುನ್ನ ತಲುಪುವಂತೆ ಕಳುಹಿಸಬೇಕು.

  • ಸಂಪಾದಕರು, ಲಹರಿ, ಕನ್ನಡ ಬಳಗ ಸೋಷಿಯೋಕಲ್ಬರಲ್ ಅಸೋಸಿಯೇಷನ್, Clo ಜಯಂತಿ ಪ್ರಿಂಟರ್ ನಂ. 5, ಗೋವಿಂದರಾಜನ್ ರಸ್ತೆ, ಪುಲಿಯೂರುಪುರಂ, ಕೋಡಂಬಾಕಮ್, ಚೆನ್ನೈ-600 024 ಇಲ್ಲಿಗೆ ಕಳುಹಿಸಬೇಕು.

  • ಅಥವಾ laharibalaga@gmail.com ಇಲ್ಲಿಗೆ ಸಾಫ್ಟ್‌ಕಾಪಿಯ ವರ್ಡ್ ಮತ್ತು ಪಿಡಿಎಫ್ ಕಾಪಿಯನ್ನು ಈಮೇಲ್ ಮಾಡಬಹುದು.

  • ಹೆಚ್ಚಿನ ಮಾಹಿತಿಗೆ 9962035934/9449821225


MORE NEWS

ಹೊಸ ಸೃಷ್ಠಿಗೆ ಕಾರಣವಾಗುವ ಬರವಣಿಗೆ...

18-01-2022 ಬೆಂಗಳೂರು

ಹೊಸ ಸೃಷ್ಠಿಗೆ ಕಾರಣವಾಗುವಂತಹ ಬರವಣಿಗೆಗಳು ಸಮಾಜವನ್ನು ಮುನ್ನಡೆಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡ...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ...

18-01-2022 ಬೆಂಗಳೂರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮ ಕಂಬಾರ ಅವರು ಜನವರಿ 18 ಮಂಗಳವಾರದಂದು ಹೃದಯ ಸಂಬಂಧ...

ಗಿರೀಶ್ ಕಾಸರವಳ್ಳಿ ಅವರಿಗೆ 'ವಿಶ್ವ...

17-01-2022 ಬೆಂಗಳೂರು

ಕನ್ನಡ, ನಾಡು-ನುಡಿ, ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿರುವ ಕಲಾವಿದರಿಗೆ, ಉಡುಪಿ ವಿಶ್ವನಾಥ ಶೆಣಿೈ ಹಾಗೂ ಪ್ರಭಾವತಿ ವಿ...