’ಲಂಕೇಶ್ ಮೋಹಕ ರೂಪಕಗಳ ನಡುವೆ’ ಪುಸ್ತಕ ಬಿಡುಗಡೆ

Date: 18-08-2019

Location: ಬೆಂಗಳೂರು


ಪಲ್ಲವ ಪ್ರಕಾಶನ ಮತ್ತು ಕನ್ನಡ ಜನಶಕ್ತಿ ಕೇಂದ್ರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶೂದ್ರ ಶ್ರೀನಿವಾಸ ಅವರ ’ಲಂಕೇಶ್: ಮೋಹಕ ರೂಪಕಗಳ ನಡುವೆ’ ಪುಸ್ತಕವು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕವಿ ಸಿದ್ದಲಿಂಗಯ್ಯ ‘ಜನಸಾಮಾನ್ಯರ ಆಡುಭಾಷೆಯನ್ನೇ ಬರವಣಿಗೆಗೆ ಅಸ್ತ್ರವನ್ನಾಗಿಸಿ ಕನ್ನಡ ಭಾಷೆಯನ್ನು ಮಡಿವಂತಿಕೆಯಿಂದ ಹೊರತಂದ ಕೀರ್ತಿ ಲಂಕೇಶ್‌ ಅವರಿಗೆ ಸಲ್ಲುತ್ತದೆ. ಯುವ ಸಾಹಿತಿಗಳು ಲಂಕೇಶ್‌ ಅವರಲ್ಲಿನ ಉತ್ತಮ ಅಂಶಗಳ ಜೊತೆಗೆ ಧೂಮಪಾನ, ಮದ್ಯಪಾನಗಳನ್ನು ಅನುಕರಣೆ ಮಾಡಲು ಪ್ರಯತ್ನಿಸಿ ದುಸ್ಥಿತಿಗೆ ತಲುಪಿದ್ದಾರೆ. ಸ್ವಯಂಪ್ರೇರಿತರಾಗಿ ಸಾಹಿತ್ಯ ರಚನೆ ಮಾಡಬೇಕು’ ಎಂದು ಅವರು ತಿಳಿಸಿದರು.

ಪುಸ್ತಕ ಬಿಡುಗಡೆ ಮಾಡಿದ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ’ಸರ್ಕಾರವನ್ನು ಪತ್ರಿಕೆಯೊಂದು ಉಳಿಸಬಹುದು ಹಾಗೂ ಅಳಿಸಬಹುದು ಎಂಬುದನ್ನು ಲಂಕೇಶ್‌ ತಮ್ಮ ಪತ್ರಿಕೆಯ ಮೂಲಕ ನಿರೂಪಿಸಿದರು’ ಎಂದರು.

ಕಾರ್ಯಕ್ರಮದಲ್ಲಿ ಲೇಖಕ ಶೂದ್ರ ಶ್ರೀನಿವಾಸ್, ಪಲ್ಲವ ವೆಂಕಟೇಶ್, ಸಿರಾಜ್ ಅಹಮದ್, ವಡ್ಡಗೆರೆ ಚಿನ್ನಸ್ವಾಮಿ ಮತ್ತಿತರು ಉಪಸ್ಥಿತರಿದ್ದರು.

MORE NEWS

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...

ಜೋಗಿ ಅವರ 'ಭಗ್ನಪ್ರೇಮಿಯ ಅಪೂರ್ಣ ಡೈರಿ' ಕೃತಿ ಬಿಡುಗಡೆ ಸಮಾರಂಭ

22-04-2024 ಬೆಂಗಳೂರು

ಬೆಂಗಳೂರು: ಸಾವಣ್ಣ ಪ್ರಕಾಶನದ 200ನೇ ಕೃತಿ, ಲೇಖಕ ಜೋಗಿ ಅವರ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಬಿಡುಗಡೆ ಕಾ...

ನಟ ಎಂ. ಎಸ್‌. ಉಮೇಶ್‌ ಅವರಿಗೆ ಡಾ. ರಾಜಕುಮಾರ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ

21-04-2024 ಬೆಂಗಳೂರು

ಬೆಂಗಳೂರು: ನನ್ನ ಕಲಾರಂಗದ ಬೆಳವಣಿಗೆಗೆ ಇದೇ ವೇದಿಕೆ ಕಾರಣ. ಈ ವೇದಿಕೆ ನನ್ನನ್ನ ಸಾಕಿದೆ, ಬೆಳೆಸಿದೆ, ನನಗೆ ತಿಳುವಳಿಕೆ...