ಲೋಕದ ಕ್ರೂರ ವ್ಯಂಗ್ಯ ದಾಖಲಿಸುವ ಕತೆಗಳು

Date: 17-01-2021

Location: ಶಹಾಪುರ


ಶಹಾಪೂರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಸಾಹಿತಿ ಎಸ್. ಎಸ್. ಗುಬ್ಬಿ ಅವರು ಆನಂದ ಎಸ್. ಗೊಬ್ಬಿ ಅವರ ಚೊಚ್ಚಲ ಕತಾ ಸಂಕಲನ ‘ನಿರುದ್ಯೋಗಕ್ಕೆ ಹೆಣವಾದ ಅಪ್ಪ’ ಪುಸ್ತಕ ಬಿಡುಗಡೆಗೊಳಿಸಿದರು.

ಕೃತಿ ಬಿಡುಗಡೆ ನಂತರ ಮಾತನಾಡಿದ ಯುವ ಲೇಖಕ ಸಂಗನಗೌಡ ಹಿರೇಗೌಡ ಅವರು ‘ಇಲ್ಲಿಯ ಬಹುತೇಕ ಕತೆಗಳು ಲೋಕದ ಕ್ರೂರ ವ್ಯಂಗ್ಯಗಳನ್ನು ಎತ್ತಿ ತೋರಿಸುತ್ತವೆ ಮತ್ತು ಹಾಗೆ ತೋರಿಸುವಲ್ಲಿ ಭಾಷೆಯು ಮರು ವಿನ್ಯಾಸ ಪಡಿದುಕೊಳ್ಳುವುದರೊಂದಿಗೆ ಕತೆಗಳಲ್ಲಿ ಸಗರನಾಡಿನ ಉಪ್ಪಿನ ಗುಣವಿದೆ’ ಎಂದರು.

ನಂತರ ಮಾತು ಮುಂದುವರೆಸುತ್ತಾ ‘ಪ್ರತಿ ಕತೆಯೂ ತನ್ನ ನಿಜವಾದ ಅರ್ಥವನ್ನು ಮೊದಲಿನಿಂದ ಕೊನೆಯವರೆಗೂ ಹಿಡಿದಿಟ್ಟುಕೊಂಡು ಕೊನೆಯ ತಿರುವಿನಲ್ಲಿ ಒಮ್ಮೆಲೆ ತೆರೆದುಕೊಳ್ಳುತ್ತದೆ. ಕೃತಿಯಲ್ಲಿ ಬರುವ ಬೈಗುಳ, ನುಡಿಗಟ್ಟುಗಳನ್ನು ಗಮನಿಸಿದರೆ ಕತೆಗಳಲ್ಲಿ ಬರುವ ಪಾತ್ರಗಳ ಸಮುದಾಯವನ್ನು ಗುರುತಿಸಬಹುದು. ಇಂಥ ಸಮುದಾಯಗಳಿಂದ ಈ ರೀತಿಯ ಪದಗಳು ಬರುವುದನ್ನು ಮನಶಾಸ್ತ್ರದ ಆಯಾಮದಲ್ಲಿ ನೋಡಿದಾಗ ಸಮುದಾಯಗಳನ್ನು ಅರ್ವಾಚೀನ ಕಾಲದಿಂದಲೂ ಆಲಕ್ಷ್ಯಕ್ಕೆ ಒಳಪಡಿಸುವುದರ ಕುರಿತು ಆಳವಾದ ತಾತ್ವಿಕ ಸಿಟ್ಟನ್ನು ಕಾಣಬಹುದಾಗಿದೆ’ ಎಂದು ಕೃತಿ ಕುರಿತು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಲೇಖಕರಾದ ಹನುಮೇಗೌಡ ಬಿರನಕಲ್, ಸಿದ್ಧಲಿಂಗಣ್ಣ ಆನೇಗುಂದಿ, ಮೋನಪ್ಪ ಶಿರವಾಳ, ಶರಣಪ್ಪ ವಡ್ಡನಕೇರಿ, ಗಾಳೇಪ್ಪ ಪೂಜಾರಿ, ಮಾಣಿಕರೆಡ್ಡಿ ದರ್ಶನಾಪುರ, ಬಸವರಾಜ ಎಲ್. ಕಲೆಗಾರ ಹಾಗೂ ಶರಣು ಕಲ್ಮನಿ ಮುಂತಾದ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...