ಲಂಡನ್ ಡೈರಿ : ಸೂಕ್ಷ್ಮ ಒಳನೋಟಗಳ ಬರಹ     

Date: 11-08-2019

Location: ಕುಂದಾಪುರ


ಯೋಗೀಂದ್ರ ಮರವಂತೆ ಅವರ ’ಲಂಡನ್ ಡೈರಿ-ಅನಿವಾಸಿಯ ಪುಟಗಳು’ ಪುಸ್ತಕವನ್ನು ಡಾ. ಬಿ. ಜನಾರ್ದನ ಭಟ್ ಶನಿವಾರ ಬಿಡುಗಡೆ ಮಾಡಿದರು.
ಯೋಗೀಂದ್ರ ಮರವಂತೆ ಒಬ್ಬ ಸಂವೇದನಾಶೀಲ ಬರಹಗಾರ. ’ಲಂಡನ್ ಡೈರಿ-ಅನಿವಾಸಿಯ ಪುಟಗಳು’ ಹೆಸರಿನ ಅವರ ಲೇಖನಗಳ ಸಂಗ್ರಹದಲ್ಲಿ ಇಂಗ್ಲಂಡ್‌ನ ಜನರ ಬದುಕು ಮತ್ತು ಸನ್ನಿವೇಶಗಳೆಡೆಗಿನ ಒಳನೋಟಗಳಿಂದ ಕೂಡಿದ ಮನಸ್ಸಿಗೆ ಮುದ ನೀಡುವ ಲಲಿತ ಪ್ರಬಂಭಗಳಿವೆ ಎಂದು ಹಿರಿಯ ಲೇಖಕ ಡಾ. ಬಿ. ಜನಾರ್ದನ ಭಟ್ ಹೇಳಿದರು.
ಕುಂದಾಪುರದ ಹೋಟೆಲ್ ಹರಿಪ್ರಸಾದದಲ್ಲಿಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಹೊಸಪೇಟೆಯ ಯಾಜಿ ಪ್ರಕಾಶನ ಹೊರತಂದಿರುವ ಯೋಗೀಂದ್ರ ಅವರ ಬಿಡಿಲೇಖನಗಳ ಸಂಗ್ರಹ ’ಲಂಡನ್ ಡೈರಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತೀಯ ಬದುಕಿನ ಹಿನ್ನೆಲೆಯಿಂದ ಇಂಗ್ಲಂಡ್ ಜನಜೀವನದೊಂದಿಗೆ ಮುಖಾಮುಖಿ ಆಗುವಾಗ ಹುಟ್ಟುವ ದ್ವಂದ್ವದ ವೇಳೆ ಅವರು ತೀರ ಸೂಕ್ಷ್ಮಗ್ರಾಹಿಗಳಾಗಿ ಅದ್ಭುತ ಚಿತ್ರಗಳನ್ನು ಕಟ್ಟಿಕೊಡುತ್ತಾರೆ. ಅವುಗಳಲ್ಲಿ ವಿಷಯದ ಮೂಲಕ್ಕೆ ಹೋಗುವ ಗುಣ, ಪತ್ರಕರ್ತನ ಶೋಧಕ ದೃಷ್ಟಿ ಇರುತ್ತದೆ. ಇವು ಒಬ್ಬ ಪ್ರಬುದ್ಧ ಬರಹಗಾರನಲ್ಲಿ ಮಾತ್ರಕಾಣಬಹುದಾದ ಕೌಶಲ. ಅವರು ತಮ್ಮ ಬರಹಕ್ಕೆ ತಾವು ಪಳಗಿಸಿಕೊಂಡ ಚೇತೋಹಾರಿಯಾದ ಭಾಷೆಯನ್ನು ಬಳಸುತ್ತಾರೆ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಪುಸ್ತಕ ಪರಿಚಯ ಮಾಡಿದ ನಿಟ್ಟೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಯಶೋಧಾ ಆರ್. ಉಡುಪ ಲಂಡನ್ ಡೈರಿ ಪ್ರವಾಸ ಕಥನ ಅಲ್ಲ. ಇಂಗ್ಲೆಂಡ್ ಜನಜೀವನವನ್ನು ಅಲ್ಲಿನ ದೀರ್ಘಕಾಲದ ನಿವಾಸಿಯೊಬ್ಬ ಅನಿವಾಸಿಯ ಶೋಧಕ ಕಣ್ಣುಗಳಿಂದ ಒಳಹೊಕ್ಕು ನೋಡುವ ಮೂಲಕ ಪಡೆದ ಅನುಭವಗಳನ್ನು ಓದುಗರ ಮುಂದಿರಿಸುವ ಕಥನ ಎಂದು ಹೇಳಿದರು.
ಕೇದಾರ ಮರವಂತೆ ಪ್ರಾರ್ಥನೆ ಹಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಪ್ರದೀಪ ಕೆಂಚನೂರು ಅತಿಥಿಗಳನ್ನು ಪರಿಚಯಿಸಿದರು. ಜತೀಂದ್ರ ಮರವಂತೆ ವಂದಿಸಿದರು. ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕಿಶೋರ್‌ಕುಮಾರ ಶೆಟ್ಟಿ ನಿರೂಪಿಸಿದರು. ಯೋಗೀಂದ್ರ ಮರವಂತೆ ಮತ್ತು ಜನಾರ್ದನ ಮರವಂತೆ ಇದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...