ಎಂ. ಗೋವಿಂದರಾಜು ಅವರ ‘ಸ್ವರ್ಗದ ಹೂಗಳು’ ಕತೆಗೆ ಮೊದಲ ಬಹುಮಾನ

Date: 26-02-2021

Location: ಬೆಂಗಳೂರು


ತುಮಕೂರಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಿ. ಮೀನಾಕುಮಾರಿ ಬಸವಲಿಂಗಪ್ಪ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯ ಮಟ್ಟದ ಕತಾ ಸ್ಪರ್ಧೆಯಲ್ಲಿ ಯುವಕತೆಗಾರ ಎಂ. ಗೋವಿಂದರಾಜು ಅವರ ‘ಸ್ವರ್ಗದ ಹೂಗಳು’ ಕತೆಗೆ ಮೊದಲ ಬಹುಮಾನ ಸಂದಿದೆ. ಬಹುಮಾನವು 3 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಎನ್. ಎನ್. ಮಾರುತಿ ಅವರ ‘ನೀರಿನ ಟ್ಯಾಂಕಿಯ ಮೂಕ ಹೆಣ್ಣು’ ಕತೆಗೆ ದ್ವಿತೀಯ (2 ಸಾವಿರ ರೂ) ಹಾಗೂ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ‘ಜಾಲಾರಿಗಂಧ’ ಕತೆಗೆ ತೃತೀಯ (1 ಸಾವಿರ ರೂ) ಬಹುಮಾನ ಸಂದಿದೆ.

ಹಾಗೆಯೇ, ಡಿ. ಚಂದ್ರಶೇಖರ್‌, ಎನ್. ಧೀರೇಂದ್ರ ಅವರ ಕತೆಗಳು ಸಮಾಧಾನಕರ ಬಹುಮಾನ ಸಂದಿದೆ. ಸ್ಪರ್ಧೆಯ ತೀರ್ಪುಗಾರರಾಗಿ ಡಾ. ನಟರಾಜ್ ಕಲ್ಕೆರೆ ಹಾಗೂ ಎಲ್. ಸುನಂದಮ್ಮ ಭಾಗವಹಿಸಿದ್ದರು. ಮಾರ್ಚ್ ಮೊದಲ ವಾರದಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...