ಮಹಾನಗರಕ್ಕೊಂದು ದೃಶ್ಯಭಾಷೆ ಕಟ್ಟಿಕೊಟ್ಟ ಜಿತೀಶ್ ಕಲ್ಲಟ್

Date: 21-12-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಭಾರತ ಮೂಲದ ಪೇಂಟಿಂಗ್, ಸ್ಕಲ್ಪ್ಚರ್, ಇನ್ಸ್ಟಾಲೇಷನ್, ಹಾಗೂ ವೀಡಿಯೊ ಆರ್ಟ್ ಕಲಾವಿದ ಜಿತೀಶ್ ಕಲ್ಲಟ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಜಿತೀಶ್ ಕಲ್ಲಟ್ (Jitish Kallat)
ಜನನ: 14 ಜುಲೈ, 1974
ಶಿಕ್ಷಣ: ಜೆ.ಜೆ.ಸ್ಕೂಲ್ ಆಫ್ ಆರ್ಟ್, ಮುಂಬಯಿ
ವಾಸ: ಮುಂಬಯಿ, ಭಾರತ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಪೇಂಟಿಂಗ್, ಸ್ಕಲ್ಪ್ಚರ್, ಇನ್ಸ್ಟಾಲೇಷನ್, ವೀಡಿಯೊ ಆರ್ಟ್

ಜಿತೀಶ್ ಕಲ್ಲಟ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಜಿತೀಶ್ ಕಲ್ಲಟ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಮುಂಬಯಿಯ ಪ್ರತಿಷ್ಠಿತ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ “ಮಾನ್ಸೂನ್ ಶೋ” ಎಂಬ ಗುಂಪು ಪ್ರದರ್ಶನವೊಂದರಲ್ಲಿ (1996) ದೊಡ್ಡ ಗಾತ್ರದ ಒಂದು ಪೇಂಟಿಂಗ್ ಇತ್ತು. ಬಾಯಲ್ಲಿ ವಾಚನ್ನು ಕಚ್ಚಿಕೊಂಡಿರುವ ಹುಡುಗನ ಚಿತ್ರ ಅದು. ಆ ಚಿತ್ರ ಕಂಡು ಕುತೂಹಲದಿಂದ, ಅದನ್ನು ರಚಿಸಿದ 21ವರ್ಷ ಪ್ರಾಯದ ಹುಡುಗನನ್ನು ಅದೇ ಕಟ್ಟಡದಲ್ಲಿದ್ದ ಇನ್ನೊಂದು ಪ್ರತಿಷ್ಠಿತ ಗ್ಯಾಲರಿ ಕೆಮೋಲ್ಡ್‌ನ ಶಿರೀನ್ ಗಾಂಧಿ ಮಾತನಾಡಿಸಿದರು ಮತ್ತು ಆ ಹುಡುಗನಿಗೆ ಕೆಮೋಲ್ಡ್ ಗ್ಯಾಲರಿಯಲ್ಲಿ ಪ್ರದರ್ಶನಾವಕಾಶ ಮಾಡಿಕೊಟ್ಟರು. ಅಲ್ಲಿನ ಮೊದಲ ಪ್ರದರ್ಶನ PTO ಬಹಳ ಯಶಸ್ವಿಯಾಯಿತು. ಹೀಗೆ, ಭಾರತದ ಪ್ರಮುಖ ಸಮಕಾಲೀನ ಕಲಾವಿದರೊಬ್ಬರು ಸರಿಯಾದ ಕೈಗಳಿಗೆ ಸರಿಯಾದ ಸಮಯದಲ್ಲಿ ದೊರೆತರು.

ಮುಂಬಯಿ ಮಹಾನಗರಿಯ ಪರಿಸರವನ್ನೇ ತನ್ನ ದೃಶ್ಯಭಾಷೆಯ ಧ್ವನಿಯಾಗಿ ದುಡಿಸಿಕೊಳ್ಳುತ್ತಿರುವ ಜಿತೀಶ್ ಕಲ್ಲಟ್ ಇಂದು ಭಾರತದ ಸಮಕಾಲೀನ ಕಲಾ ಜಗತ್ತಿನಲ್ಲಿ ಚಾಲ್ತಿ ಇರುವ ಮಹತ್ವದ ಕಲಾವಿದರಲ್ಲಿ ಒಬ್ಬರು. ಕೊಳಕಾದ, ಸುಕ್ಕುಗಟ್ಟಿದ, ಸವೆದು ಜೋಡಿಸಿ ಹೊಲಿದ ಕೌದಿಯಂತಿರುವ ನಗರ ಭಾರತ ಮತ್ತದರ ಜಾಗತೀಕರಣದ ಬಯಕೆಗಳ ನಡುವಿನ ನಡುವೆ ಇರುವ ಎಲ್ಲ ಸಂಕಟಗಳು, ನಿರೀಕ್ಷೆಗಳು, ನೋವುಗಳು, ಆಕಾಂಕ್ಷೆಗಳು ಹಾಗೂ ಆ ಬದುಕಿನ ಪರಿಪಾಟಲುಗಳೆಲ್ಲ ಜಿತೀಶ್ ಅವರ ಕಲಾಕೃತಿಗಳಲ್ಲಿ ಮೈದಾಳುತ್ತವೆ. “The city street is my university. One finds all the themes of life and art – pain, happiness, anger, violence and compassion – played out here in full volume. Scale is merely one of the many tools one can deploy in the creation of meaning, and decisions such as big, small, lifesize, etc., are as much acts of meaning creation as they may be retinal or aesthetic considerations.” (ದಿ ಏಶ್ಯನ್ ಆರ್ಟ್ ನ್ಯೂಸ್ ಪೇಪರ್‌ಗೆ 2010ರ ಫೆಬ್ರವರಿಯಲ್ಲಿ ನೀಡಿದ ಸಂದರ್ಶನದಲ್ಲಿ) ಎಂದವರು ತಾನು ನಗರವನ್ನು ಕಾಣುವ ಬಗೆಯನ್ನು ವಿವರಿಸುತ್ತಾರೆ.

1996ರಲ್ಲಿ ಮುಂಬಯಿಯ ಜೆ.ಜೆ ಸ್ಕೂಲ್ ಆಫ್ ಆರ್ಟ್‌ನಿದ್ದು ಪೇಂಟಿಂಗಿನಲ್ಲಿ ಪದವಿ ಪಡೆದಿರುವ ಜಿತೀಶ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಅವರೇನೂ ಕಲಾ ವಾತಾವರಣದಲ್ಲೇ ಬೆಳೆದವರಲ್ಲ. ಆದರೆ, ಕಲಾ ಶಿಕ್ಷಣದ ಬಳಿಕ ತನ್ನದೇ ಆದ ಕಲಾಭಾಷೆಯನ್ನು ರೂಢಿಸಿಕೊಂಡವರು. ಜಿತೀಶ್ ಅವರಂತೆ ನಗರ ಭಾರತವನ್ನು ತೆರೆದು ತೋರಿಸಿದ ಸಮಕಾಲೀನ ಭಾರತೀಯ ಕಲಾವಿದರು ಇನ್ನೊಬ್ಬರಿಲ್ಲ ಎಂದು ಕಲಾವಿಮರ್ಶಕ ಪೀಟರ್ ನ್ಯಾಗಿ ಹೇಳಿದಿದೆ. ನಗರಗಳ ಕೊಳೆಯುವಿಕೆ, ಶಿಥಿಲಗೊಳ್ಳುವಿಕೆಗಳ ನಡುವೆ ಇಲ್ಲಿರಬಹುದಾದ ಬದುಕಿನ ಆತ್ಮವನ್ನು ಅರಸುವ ಜಿತೀಶ್ ತನ್ನ ಈ ಹುಡುಕಾಟವನ್ನು ವಿವರಿಸಲು ಬಳಸುವ ವಸ್ತು-ತಂತ್ರಗಳೆರಡೂ ಅವರ ಮೂಲ ಆಶಯಗಳಿಗೆ ಪೂರಕವಾಗಿ ವರ್ತಿಸುತ್ತವೆ.

ತೀರಾ ಖಾಸಗಿಯಾದ, ವೈಯಕ್ತಿಕ ಅನುಭವಗಳಿಂದ ಹೊರಡುವ ಈ ಕಲಾಕೃತಿಗಳು ಆ ಖಾಸಗಿತನವನ್ನೇ ವಿಸ್ತರಿಸಿಕೊಳ್ಳುತ್ತಾ ಜಾಗತಿಕವಾದ ಸತ್ಯಗಳನ್ನು ಶೋಧಿಸಲು ಹೊರಡುತ್ತವೆ. 2017ರಲ್ಲಿ ದಿಲ್ಲಿಯ NGMAಯಲ್ಲಿ ಪ್ರದರ್ಶಿತಗೊಂಡ ಅವರ Epilogue ಇನ್ಸ್ಟಾಲೇಷನ್ನಿನಲ್ಲಿ ಅವರು 22,500ರೊಟ್ಟಿಗಳನ್ನು ಪ್ರತಿಯೊಂದನ್ನೂ ಚಂದ್ರನಾ ಕೃತಿಯಲ್ಲಿ ಜೋಡಿಸಿ, ಅದರ 753 ಚಿತ್ರಗಳ ಜಿಡುಕಿನ ಚಕ್ರವ್ಯೂಹದ ಮಾದರಿಯಲ್ಲಿ ಪ್ರಸ್ತುತ ಪಡಿಸುತ್ತಾರೆ. ಇವು ಅವರ ತಂದೆ ಅವರ ಜೀವಿತ ಕಾಲದಲ್ಲಿ ಕಂಡ ಚಂದ್ರನ ಬಿಂಬಗಳು ಎನ್ನುವ ಅವರು ಈ ವೈಯಕ್ತಿಕ ಅನುಭವದ ಮೂಲಕವೇ ವಿಸ್ತಾರವಾದ ಜಾಗತಿಕ ಸತ್ಯದ ಹೊಳಹುಗಳನ್ನು ಮೂಡಿಸುತ್ತಾರೆ.

ದೊಡ್ಡ ಗಾತ್ರದ ಪೇಂಟಿಂಗ್‌ಗಳು, ಶಿಲ್ಪಗಳು, ಫೊಟೋಗ್ರಫಿ, ವೀಡಿಯೊ ಆರ್ಟ್ ವಿಧಾನಗಳಲ್ಲಿ ತಮ್ಮ ಕಲಾಕೃತಿಗಳನ್ನು ರಚಿಸುವ ಜಿತೀಶ್, ತನ್ನ Public Notice ಸರಣಿಯಲ್ಲಿ ಅಕ್ಷರಗಳು ಹೇಗೆ ತಮ್ಮ ಧ್ವನಿ ಕಳೆದುಕೊಂಡವು ಎಂಬುದನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಗೋಧ್ರಾ ದುರಂತದ ಬಳಿಕ (2003) ನೆಹರೂ ಅವರ ಟ್ರಿಸ್ಟ್ ವಿದ್ ಡೆಸ್ಟಿನಿ ಭಾಷಣವನ್ನು ಆಧರಿಸಿ ಈ ಸರಣಿಯ ಮೊದಲ ಇನ್ಸ್ಟಾಲೇಷನ್ ಬಂತು. ಆ ಬಳಿಕ ಗಾಂಧೀಜಿ ಅವರ ಭಾಷಣವನ್ನು ಬಳಸಿ (2007) ಹಾಗೂ ವಿವೇಕಾನಂದರ ಚಿಕಾಗೊ ಧರ್ಮಸಂಸತ್ತಿನ ಭಾಷಣ ಮತ್ತು 2001ರ ಅಮೆರಿಕದ ಭಯೋತ್ಪಾದಕ ದಾಳಿಗಳನ್ನು ಎದುರು ಬದುರಾಗಿಸಿಕೊಂಡು ಅದೇ ಸರಣಿಯಲ್ಲಿ ಇನ್ನೆರಡು ಕಲಾಕೃತಿಗಳನ್ನು ಅವರು ರಚಿಸಿದ್ದರು. ಆರಂಭದ ದಿನಗಳಲ್ಲಿ ತಮ್ಮ ವ್ಯಕ್ತಿಕೇಂದ್ರಿತ ಕಲಾಕೃತಿಗಳಿಂದ ಪರಿಚಿತರಾಗಿದ್ದ ಅವರು ಈಗ ಕ್ರಮೇಣ ಅಲ್ಲಿಂದ ಹೊರಬಂದು, ಸಮಷ್ಟಿ ಕೇಂದ್ರಿತ ಕಲಾಕೃತಿಗಳತ್ತ ಮುಖ ಮಾಡಿದ್ದಾರೆ.

ಜಗತ್ತಿನಾದ್ಯಂತ ಹಲವು ಪ್ರಮುಖ ಕಲಾಪ್ರದರ್ಶನಗಳಲ್ಲಿ ಪಾಲ್ಗೊಂಡಿರುವ ಅವರ ಕಲಾಕೃತಿಗಳು ಜಗತ್ತಿನ ಹಲವು ಪ್ರಮುಖ ಸಂಗ್ರಾಹಕರ ಬಳಿ ಇವೆ. ಬ್ರಿಟಿಷ್ ಕಲಾ ಸಂಗ್ರಾಹಕ ಫ್ರಾಂಕ್ ಕೊಹೆನ್ ಅವರು ಜಿತೀಶ್‌ರ Collindonthus ಕಲಾಕೃತಿಯನ್ನು 73ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. 2014ರ ಕೊಚ್ಚಿ ದ್ವಿವಾರ್ಷಿಕ ಕಲಾಪ್ರದರ್ಶನಕ್ಕೆ (ಕೊಚ್ಚಿ ಬಯೆನಾಲ್) ಅವರು ಕಲಾ ನಿರ್ದೇಶಕರಾಗಿದ್ದರು.

ನ್ಯೂಸ್ ಎಕ್ಸ್ ಚಾನೆಲ್‌ನಲ್ಲಿ ಜಿತೀಶ್ ಕಲ್ಲಟ್ ಅವರ ಬಗ್ಗೆ ಆರ್ಟ್ ಟಾಕ್:

ಚಿತ್ರ ಶೀರ್ಷಿಕೆಗಳು:
ಜಿತೀಶ್ ಕಲ್ಲಟ್ ಅವರ 22,000 sunsets (2001)

ಜಿತೀಶ್ ಕಲ್ಲಟ್ ಅವರ Annexation (2009)

ಜಿತೀಶ್ ಕಲ್ಲಟ್ ಅವರ Aquasaurus (2008)

ಜಿತೀಶ್ ಕಲ್ಲಟ್ ಅವರ Autosaurus Tripous, (2007)

ಜಿತೀಶ್ ಕಲ್ಲಟ್ ಅವರ Cry of the gland (2009)

ಜಿತೀಶ್ ಕಲ್ಲಟ್ ಅವರ Eclipse, (2007)

ಜಿತೀಶ್ ಕಲ್ಲಟ್ ಅವರ Epilogue (2010-11)

ಜಿತೀಶ್ ಕಲ್ಲಟ್ ಅವರ Public Notice (Nehru Speech), (2003)

ಜಿತೀಶ್ ಕಲ್ಲಟ್ ಅವರ Sweatopia (The Cry Of The Gland) 6 , (2010)

ಜಿತೀಶ್ ಕಲ್ಲಟ್ ಅವರ Synergy (2014)

ಜಿತೀಶ್ ಕಲ್ಲಟ್ ಅವರ Wind Study (Chloroglobin), (2018)

ಈ ಅಂಕಣದ ಹಿಂದಿನ ಬರೆಹಗಳು:
ಸಾಂಸ್ಕೃತಿಕ ವೈರುಧ್ಯದ ಪದರುಗಳ ಅಭಿವ್ಯಕ್ತಿ: ಶೀಲಾಗೌಡ
ಅಕ್ಷರಗಳನ್ನು ಅಮೂರ್ತಗೊಳಿಸುವ ಗ್ಲೆನ್ ಲೈಗನ್
ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...