ಮಹಿಳಾ ಸಾಹಿತ್ಯದಲ್ಲಿ ‘ಒಂಟಿತನ’ ಮೀರುವ ಆಶಯ:ಎಲ್.ಜಿ. ಮೀರಾ

Date: 18-04-2021

Location: ಬೆಂಗಳೂರು


ಮಹಿಳೆಯು ಮೇಲ್ನೋಟಕ್ಕೆ ಸುಖಿಯಾಗಿ ಕಂಡರೂ ಅವಳು ‘ಒಂಟಿತನ’ ಭಾವದಿಂದ ದೂರವಾಗಿಲ್ಲ. ಇದು ಮಹಿಳೆಯರ ಸಾಮಾಜಿಕ ಚರಿತ್ರೆಯೂ ಆಗಿದೆ. ಆದ್ದರಿಂದ, ಅವಳು ವ್ಯಕ್ತಿಗತ ಮಾತ್ರವಲ್ಲ ಸಾಹಿತ್ಯಕವಾಗಿಯೂ ಈ ಒಂಟಿತನವನ್ನು ಮೀರಬೇಕು ಎಂದು ಖ್ಯಾತ ವಿಮರ್ಶಕಿ ಡಾ. ಎಲ್.ಜಿ. ಮೀರಾ ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ್ ಪರಿಷನ್ಮಂದಿರದಲ್ಲಿ ಮಹಿಳೆ ಸಾಹಿತ್ಯ ಸಂಪುಟಗಳ ಕುರಿತು ನಡೆಯುತ್ತಿರುವ ವಿಚಾರ ಸಂಕಿರಣದ ಎರಡನೇ ದಿನವಾದ ಭಾನುವಾರ ಬೆಳಗ್ಗೆ ನಡೆದ ಗೋಷ್ಠಿ-3 ರಲ್ಲಿ ವಿಮರ್ಶೆ ಸಂಪುಟ ಕುರಿತು ಅವರು ಮಾತನಾಡಿದರು.

ಅಧ್ಯಾತ್ಮಕವಾಗಿ ದೈವತ್ವಕ್ಕೇರಿಸುವ ಈ ವ್ಯವಸ್ಥೆಯು ಮಹಿಳೆಯರನ್ನು ಸಾಮಾಜಿಕವಾಗಿ ತುಚ್ಛೀಕರಿಸಿದೆ. ಈ ಮನೋವೃತ್ತಿ ಇಂದಿಗೂ ಮುಂದುವರಿದಿದೆ. ಆ ಕಾರಣವೇ, ಅವಳ ಸಾಹಿತ್ಯದಲ್ಲಿ ಒಂಟಿತನ ಇಣುಕುತ್ತಿದೆ. ಅದು ಅವಳ ಸಾಮಾಜಿಕ ಸ್ಥಾನಮಾನಗಳ ಬಿಂಬವೂ ಆಗಿದೆ. ಈ ಒಂಟಿತನವನ್ನು ಮೀರುವ ಹಾಗೂ ಪರಂಪರೆಯನ್ನು ಪ್ರಶ್ನಿಸುವ ಮನೋಭಾವವು ಮಹಿಳೆಯರ ಸಾಹಿತ್ಯದಲ್ಲಿ ಕಾಣುತ್ತಿದ್ದೇವೆ. ಇದು ಆಗಲೇಬೇಕಾದ ಬೆಳವಣೀಗೆ ಎಂದು ಆಶಿಸಿದರು.

ವಿಮರ್ಶೆ ಬರಹಗಳ ವೈವಿಧ್ಯತೆ : ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯಕ್ಕೆ ಸಂಬಂಧಿಸಿ ಒಟ್ಟು 8 ಸಂಪುಟಗಳನ್ನು ಪ್ರಕಟಿಸಿದೆ. ಆ ಪೈಕಿ ವಿಮರ್ಶೆ ಸಂಪುಟದಲ್ಲಿ 24 ವಿಮರ್ಶೆ ಬರಹಗಳಿವೆ. ಪ್ರತಿಯೊಂದು ತನ್ನ ವಿಭಾಗಗಳಿಂದ ವೈಶಿಷ್ಟ್ಯ ಎನಿಸಿವೆ. ಆದರೆ, ಅವಳನ್ನು ಮತ್ತು ಅವಳ ಸಾಹಿತ್ಯದ ವಿಮರ್ಶೆ ಕುರಿತಂತೆ ಈವರೆಗೂ ವಿಮರ್ಶಾ ಕ್ಷೇತ್ರ ಮುಕ್ತವಾಗಿ ನೋಡಿಲ್ಲ. ಆದ್ದರಿಂದ, ಅವಳು ಮೇಲ್ನೋಟಕ್ಕೆ ಸುಖಿ ಎಂದು ಕಂಡು ಬಂದರೂ ಆಂತರಿಕವಾಗಿ ಹಾಗೂ ಸಾಹಿತ್ಯಕ್ಕೆ ಸಂಬಂದಿಸಿದಂತೆ ಅವಳ ಒಂಟಿತನ ದೂರವಾಗಿಲ್ಲ. ಇಂತಹ ಭಾವನಾತ್ಮಕ ಸಂಗತಿಗಳ ವಿಮರ್ಶೆ ಆಗಿಲ್ಲ ಎಂದು ಗಮನ ಸೆಳೆದರು.

ಮಹಿಳೆಯರ ಬಗ್ಗೆ ಮಹಿಳೆಯ ವಿಮರ್ಶೆ, ಮಹಿಳೆಯು ಮಹಿಳೆಯರ ಕೃತಿಗಳ ವಿಮರ್ಶೆ, ಮಹಿಳೆಯರ ದೃಷ್ಟಿಯಲ್ಲಿ ಒಟ್ಟು ಸಾಹಿತ್ಯ ಲೋಕ, ವರ್ಣನಾತ್ಮಕ-ಪರಿಚಯಾತ್ಮಕ ಬರಹಗಳ ವಿಮರ್ಶೆ, ತತ್ವಪದಕಾರರ ವಲಯದಲ್ಲಿ ಸ್ತ್ರೀಯ ಕಡೆಗಣನೆ ಕುರಿತು ಇಲ್ಲದ ವಿಮರ್ಶೆ, ಶಾಸ್ತ್ರದೆಡೆಗಿನ ನೋಟ ಹೀಗೆ ಇಲ್ಲಿಯ ವಿಮರ್ಶಾತ್ಮಕ ಬರಹಗಳು ವೈವಿಧ್ಯಮಯವಾಗಿ ವಿಶೇಷ ಎನ್ನಿಸಿವೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮ ಸಂಯೋಜಕಿ ಸವಿತಾ ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಪದ್ಮರಾಜ ದಂಡಾವತಿ ಸ್ವಾಗತಿಸಿದರು. ಸಿ.ಆರ್. ಕುಸುಮ ನಿರೂಪಿಸಿದರು.

MORE NEWS

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

16-04-2024 ಬೆಂಗಳೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...

'ಮಕ್ಕಳ ಕತೆಗಳ ಅನನ್ಯ ಪ್ರೀತಿ ರಾಮೇಂದ್ರ ಕುಮಾರ' ಕುರಿತು ವಿಚಾರಣ ಸಂಕಿರಣ 

15-04-2024 ಬೆಂಗಳೂರು

ಬೆಂಗಳೂರು: ಜೀವನಾನುಭವವನ್ನು ವಿಸ್ತರಿಸುವ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಕೆಲಸವನ್ನು ಹಿಂದೆ‌ ಅಜ್ಜಿ...