ಮಕ್ಕಳಿಗೆ ಮನೋಜ್ಞವಾಗಿ ಕತೆ ಕೇಳಿಸುವ ‘ಕೇಳಿರೊಂದು ಕತೆಯ’


ಒಂದೂರಲ್ಲಿ ಒಬ್ಬ ರಾಜ ಇದ್ದ... ಹೀಗೆ ಕತೆಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ. ಆತುರತೆ, ಒತ್ತಡ ಎಂದು ಓಡುವ ಇಂದಿನ ದಿನಗಳಲ್ಲಿ ಮಕ್ಕಳಿಗೆ ಕತೆ ಹೇಳುವ, ಕತೆ ಕೇಳುವ ಹವ್ಯಾಸವೇ ಇಲ್ಲದಂತಾಗಿದೆ. ಈ ಹವ್ಯಾಸವನ್ನು ಮತ್ತೆ ಎಲ್ಲೆಡೆ ಪಸರಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ‘ಕೇಳಿರೊಂದು ಕತೆಯ’ ವಿಭಿನ್ನ ಪ್ರಯತ್ನದ ಬಗ್ಗೆ ಎಡೆಯೂರು ಪಲ್ಲವಿ ಅವರು ಈ ಬರಹದಲ್ಲಿ ಪರಿಚಯಿಸಿದ್ದಾರೆ. 

ಒಂದೂರಲ್ಲಿ ಒಬ್ಬ ರಾಜ ಇದ್ನಂತೆ………. ಎಂಬೊಂದು ಒಂದು ಅಗೋಚರ ಶುರುವಾಗುತ್ತಿದ್ದವು ನಮ್ಮ ಅಡಗೂಲಜ್ಜ/ಜ್ಜಿಯ ಮಕ್ಕಳ ಕತೆಗಳು. ಹೀಗೆ ಶುರುವಾಗುವ ಕತೆಗಳಿಗೆ ಬಹುಮುಖ್ಯವಾಗಿ ‘ಹೂಂ’ ಗುಟ್ಟಿದರೆ ಮಾತ್ರವೆ ಕತೆಯ ಪಾತ್ರಗಳು ಚಲನೆ ತೆಗೆದುಕೊಳ್ಳುತ್ತಿದ್ದವು. ಅದು ಎರಡೂ ಕಡೆಯ, ಕತೆ ಹೇಳುವ ಮತ್ತು ಕೇಳುವ ಕ್ಷಿತಿಜವಾಗಿದ್ದವು. ಮಕ್ಕಳ ಮನಸ್ಸನ್ನು ಮುದಗೊಳಿಸುವ, ಅರಳಿಸುವ, ಪ್ರಫುಲ್ಲವಾಗಿಸುವ, ಯೋಚನಾಲಹರಿಗೆ ಹಚ್ಚುವ ಕೆಲಸವನ್ನು ನಮ್ಮ ಕತೆಗಳು ಮಾಡುತ್ತಿದ್ದವು. ಆದರೆ ಈ ಓಟದ ಬದುಕಿ, ನ್ಯೂಕ್ಲಿಯಾರ್‌ ಕುಟುಂಬದಲ್ಲಿ ಕತೆ ಹೇಳಲು ಅಪ್ಪ-ಅಮ್ಮನಿಗೆ ಟೈಂ ಇಲ್ಲ. ಅಜ್ಜ-ಅಜ್ಜಿ ಜೊತೆಯಲ್ಲಿಲ್ಲ. ಒಂದು ವೇಳೆ ಇದ್ದರೂ ಈಗ ಕತೆಗಳು ಉಸಿರುಗಟ್ಟಿ ಕಾರ್ಟೂನ್‌ಗಳಲ್ಲಿ, ಪಠ್ಯ ಪುಸ್ತಕದಲ್ಲಿ ಕುಳಿತಿವೆ. ಅವುಗಳನ್ನು ಮಾರ್ಕ್ಸ್‌ಗಾಗಿ ಓದಿದರೆ ಅದರ ಆಶಯ, ನೀತಿಯನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳುವವರು ಯಾರು? ಹೀಗೊಂದು ಆಲೋಚನೆ ಆನಂದ್ ಹೆಮ್ಮಿಗೆ ಹಾಗೂ ಪರಿಮಳ ದೇಶಪಾಂಡೆ ದಂಪತಿಯ ಮನದಲ್ಲಿ ಉದಯಿಸಿದ್ದು, ಅದರ ಪರಿಹಾರಕ್ಕೆ ಎಡತಾಕಿದಾಗ ಹುಟ್ಟಿಕೊಂಡಿದ್ದೆ ‘ಕೇಳಿರೊಂದು ಕತೆಯ’. ಮಕ್ಕಳಿಗಾಗಿ ದೊಡ್ಡವರು, ತಮ್ಮ ವಾರಿಗೆಯವರಿಗಾಗಿ ಮಕ್ಕಳು ಹೀಗೆ ಕತೆ ಹೇಳುವ ಪಕ್ರಿಯೆಯನ್ನು ಎರಡು ಸಂವತ್ಸರಗಳಿಂದ ಮುಂದುವರೆಸಿಕೊಂಡು ಬಂದಿದೆ. 

ಮಕ್ಕಳಿಗೆ ಏನೇನಿದೆ ಇಲ್ಲಿ

ಹಲವು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವ ಈ ದಂಪಂತಿ ತಮ್ಮ ಮಕ್ಕಳಿಗೆ (ವಿದೇಶಿ ಭಾರತೀಯ ಮಕ್ಕಳಿಗೆ) ಭಾರತೀಯ ಅಕ್ಷರ, ಸಂಸ್ಕೃತಿ, ಪಂಚತಂತ್ರ ಹಿತೋಪದೇಶಗಳನ್ನು ಇಲ್ಲಿ ಹೆಕ್ಕಿ ನೀಡಿದ್ದಾರೆ. ಮಾತ್ರವಲ್ಲ ಇತರೆ ದೇಶಗಳ  ಆಯ್ದ  ಜಾನಪದ, ಹಾಸ್ಯ ಕತೆಗಳು, ವ್ಯಕ್ತಿ ಪರಿಚಯ ಇತ್ಯಾದಿ ವಿಶೇಷ ಕಾರ್ಯಕ್ರಮಗಳ ಉಚಿತವಾಗಿ ಮಕ್ಕಳಿಗೆ ಫೋನಿನಲ್ಲಿ ಕೇಳಬಹುದಾಗಿದೆ. ಅನೇಕ ನೀತಿ ಕತೆಗಳು, ಜಾನಪದ ಕತೆಗಳು, ಬುದ್ಧ-ರಾಜ್‌ಕುಮಾರ್‌ ಅವರು ವ್ಯಕ್ತಿ ಪರಿಚಯವೂ ಇಲ್ಲಿದೆ. ಹಾಗೇ ಮಕ್ಕಳು ಸಹ ತಮಗೆ ಮೆಚ್ಚುಗೆಯಾದ ನಾಟಕಕ್ಕೆ ತಮ್ಮದೇ ತಂಡ ಕಟ್ಟಿಕೊಂಡು ತಾವೇನು ಕಮ್ಮಿ ಇಲ್ಲ ಎಂದು ಅಭಿನಯಿಸಿ ತಮ್ಮ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ. ನಿಸರ್ಗದ ಸಂಕಟಕ್ಕೆ ಸಂತಾಪ ಪಡುವ, ಸಾಂತ್ವನ ಹೇಳುವ, ಸಮಾಜದ ಆಗುಹೋಗುಗಳಿಗೆ ಸೂಕ್ಷ ಒಳದೃಷ್ಟಿ ನೀಡುವ ಕಥನಗಳು ಇಲ್ಲಿವೆ. ಪರಿಸರ, ಪೌರಾಣಿಕ, ಪುರಾಣ, ಮನೋವಿಕಾಸದ ಅನನ್ಯ ಕತೆಗಳ ಆಗರ ನಿಮಗೆ ಎದುರಾಗುತ್ತದೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಕತೆಗಳು ಓದಿಗೆ ಸೀಮಿತವಾದ್ದುದ್ದಲ್ಲ, ಕತೆಗೆ ಪೂರಕವಾದ ಪರಿಕರಗಳನ್ನು ಬೆರೆಸಿ ಮಕ್ಕಳಿಗೆ ಉಣಬಡಿಸಿದ್ದಾರೆ. ಆನೆ ಬಂದಾಗ ಸೊಂಡಲಿನ ಝೇಂಕಾರ, ಕೋತಿಯ ಗೊರ್‌ ಗೊರ್‌ ಸದ್ದು, ಮುಳುಗುವ ನೀರಿನ ಗುಳಂ ಶಬ್ಧವನ್ನು ಮಕ್ಕಳು ಇಲ್ಲಿ ಆಸ್ವಾದಿಸಬಹುದು. “ಮಕ್ಕಳಿಗೆ ಇದೇ ಕತೆಯನ್ನ ಯುಟ್ಯೂಬ್‌ನಲ್ಲಿ ಹಾಕಬಹುದಿತ್ತಾದರು, ಅಲ್ಲಿ ತುಂಬಾ ಡೈವರ್ಷನ್‌ ಇರುವುದರಿಂದ ಮಕ್ಕಳು ಬಹುಬೇಗ ಬೇರೆಯ ವಿಡಿಯೋಗೆ ಜಂಪ್ ಆಗುವ ಸಾಧ್ಯತೆ ಇರುತ್ತದೆ. ಪೋಷಕರು ಸದಾ ಅವರೇನು ನೋಡುತ್ತಿದ್ದಾರೆ ಎಂದು ಕಾಯಲು ಸಾಧ್ಯವಿಲ್ಲ. ಅದಕ್ಕಾಗಿ ಹೀಗೆ ಪಾಡ್‌ಕಾಸ್ಟ್‌ನಲ್ಲಿ ಮಕ್ಕಳಿಗೆ ಕತೆ ಹೇಳಿ ಅಪ್‌ಲೋಡ್‌ ಮಾಡಿದ್ದು ಯಾವಾಗ ಬೇಕಾದರು ಕೇಳಬಹುದು” ಎನ್ನುತ್ತಾರೆ ಪರಿಮಳ ಪರಿಮಳ ದೇಶಪಾಂಡೆ.

ಶತಕದತ್ತ ಹೆಜ್ಜೆ 

ಈ ಕತೆ ಹೇಳುವ ‘ಕೇಳಿರೊಂದು ಕತೆಯ’ 2018ರಲ್ಲಿ ಪಾಡ್‌ಕಾಸ್ಟ್‌ ಮೂಲಕ ಮಕ್ಕಳಿಗಾಗಿ ಕತೆ ಹೇಳುವ ಪರಿಕರ ಪ್ರಾರಂಭವಾಯಿತು. ಶುರುವಿನಲ್ಲಿ ಆನಂದ್ ಹೆಮ್ಮಿಗೆ ಹಾಗೂ ಪರಿಮಳ ದೇಶಪಾಂಡೆ ಕತೆಗಳನ್ನು ಆಯ್ಕೆ ಮಾಡಿ ತಮಗೆ ಗೊತ್ತಿರುವ ಫ್ರೆಂಡ್ಸ್‌ ಮೂಲಕ ಓದಿಸಿ ಹಾಕುತ್ತಿದ್ದರು. ನಂತರ ಇದಕ್ಕೆ ದನಿಯಾಗಿ ನಿಂತವರು ಅಪರ್ಣ ನರೇಂದ್ರ, ಅಶ್ವಿನಿ ಕಾರ್ತಿಕ್ ಹಾಗೂ ನಳಿನಿ ನಾಗೇಂದ್ರ. ಈಗ ಮಕ್ಕಳು ಹಾಗೂ ದೊಡ್ಡವರು ಕತೆ ಹೇಳಿರುವ ಸಂಖ್ಯೆ 97 ಆಗಿದ್ದು ಶತಕದತ್ತ ಸಾಗಿದೆ. ಮಕ್ಕಳ ಸೊಗಸಾದ ಕತೆಗಳನ್ನು ಕೇಳಲು ಮತ್ತು ಮಕ್ಕಳಗೆ ಕೇಳಿಸಲು ಇಲ್ಲಿ ಕ್ಲಿಕ್ ಮಾಡಿ 

ಇನಿ ದನಿ ಎಂಬ ಹೊಸ ಸರಣಿಯನ್ನು ಆರಂಭಿಸಿದ್ದು ವಿವಿಧೆಡೆಯಿಂದ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಸೇರಿ ನಾಟಕ ಮಾಡಿದ್ದಾರೆ. ಇದರಲ್ಲಿ ಮನೊರಂಜನೆ, ಹಾಸ್ಯ ಮತ್ತು ನೀತಿಯನ್ನು ಮುದ್ದಾಗಿ ಯಾವ ದೊಡ್ಡವರಿಗೂ ಕಡಿಮೆ ಇಲ್ಲದೆ ಪ್ರಸ್ತುತ ಪಡಿಸಿದ್ದಾರೆ ಪುಟಾಣಿಗಳು. ಹಾಡು, ಕವಿತೆಗಳನ್ನು ಗಾಯನ ಮಾಡಿರುವುದನ್ನು ನೀವು ಇಲ್ಲಿ ಕಾಣಬಹುದು.

 

 

 

 

 

 

 

 

 

 

ಕತೆ ಹೇಳುವ ಸ್ಪರ್ಧೆ

ಮಕ್ಕಳು ಕೇಳಿದ್ದನ್ನು ತಮಗೆ ಅರ್ಥವಾದ ರೀತಿಯಲ್ಲಿ ನಿರೂಪಿಸುವ ವಿನೂತನ ಪ್ರಯತ್ನಕ್ಕೆ ಇಂಬು ನೀಡುವ ಸಲುವಾಗಿ ಸ್ವತಃ ಈ ದಂಪತಿಗಳೇ ಒಂದು ಕತಾ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಅದರ ವಿವರಗಳು ಇಂತಿದ್ದು ನೀವೂ ಭಾಗವಹಿಸಬಹುದು. 

ಕೇಳಿರೊಂದು ಕತೆಯ ಫೇಸ್‌ಬುಕ್‌ ಪೇಜ್‌: ಕೇಳಿರೊಂದು ಕತೆಯ

MORE FEATURES

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...

ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ: ಡಿ.ಜಿ. ಮಲ್ಲಿಕಾರ್ಜುನ

17-04-2024 ಬೆಂಗಳೂರು

“ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ. ಸೃಜನಶೀಲ ಮನಸ್ಥಿತಿ, ಕಲಾವಿದನೊಬ್ಬನ ಕಣೋಟ ಇದ್ದರಷ್ಟೇ ಉತ್ತಮ ಛಾಯಾಚಿತ್ರಗ...