ಮಲೆನಾಡಿನ ಕೆಳ ಸಮುದಾಯದ ಅಂತರಂಗದ ಅಭಿವ್ಯಕ್ತಿತ್ವ "ಲಕ್ಷ್ಮಣ ಕೊಡಸೆ"

Date: 02-02-2023

Location: ಬೆಂಗಳೂರು


17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ನಗರದ ಗೋಪಿ ಶೆಟ್ಟಿ ಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ನಡೆಯುತ್ತಿರುವ ಸಾಹಿತಿ ಲಕ್ಷ್ಮಣ ಕೊಡಸೆ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.

ಸಮ್ಮೇಳನದ ಮೊದಲ ದಿನ, ಸಮ್ಮೇಳನ ಅಧ್ಯಕ್ಷ ಲಕ್ಷ್ಮಣ ಕೊಡಸೆ ಮಾತನಾಡಿ, ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಪೈಕಿ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿ ಕುವಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿಯಲ್ಲಿ ಎಸ್. ಬಂಗಾರಪ್ಪ ಅಧ್ಯಯನ ಪೀಠ, ದಾವಣಗೆರೆ ವಿವಿಯಲ್ಲಿ ಜೆ.ಹೆಚ್.ಪಟೇಲ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಅವರು ಪ್ರತಿಪಾದಿಸಿದ್ದ ಮೌಲ್ಯಗಳ ವಿಷಯದ ಕುರಿತು ಅಧ್ಯಯನ, ಸಂಶೋಧನೆ ನಡೆಯಬೇಕು ಎಂದಿದ್ದಾರೆ.


"ಅಕ್ಷರ ಸಂತ ಕೊಡಸೆ"

70ರ ಲಕ್ಷ್ಮಣ ಕೊಡಸೆ. ಕೆಳ ಸಮುದಾಯದ ಬದುಕಿನ ಅಂತರಂಗವನ್ನು ಅಕ್ಷರಗಳ ಮೂಲಕ ಅಭಿವ್ಯಕ್ತಿಸುತ್ತಿರುವ ಹಿರಿಯ ಲೇಖಕರು. ಮಲೆನಾಡಿನ ದಟ್ಟ ಹಸಿರಿನ ನಡುವೆ ಹುಟ್ಟಿ ಬೆಳೆದ ಲಕ್ಷ್ಮಣರ ಊರು ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಕೊಡಸೆ. ಲಕ್ಷ್ಮಣ ಅವರು ವೃತ್ತಿಗಾಗಿ ರಾಜ್ಯದ ಮೂಲೆ ಮೂಲೆಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಉಪನ್ಯಾಸಕರಾಗುವ ಆಶಯ ಹೊಂದಿದ್ದ ಇವರಿಗೆ ಪತ್ರಿಕಾ ಲೋಕ ಬಿಟ್ಟುಕೊಡಲೇ ಇಲ್ಲ. ʼಪ್ರಜಾವಾಣಿ' ಪತ್ರಿಕೆಯಲ್ಲಿ ಸುಮಾರು 34 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

ಚಾರಿತ್ರಿಕ ಘಟನೆಗಳನ್ನು ಪ್ರತ್ಯಕ್ತವಾಗಿ ಕಂಡು ದಾಖಲಿಸುವ ಅವಕಾಶ ಇವರದ್ದು. ಎಂಜಲು ಪದ್ಧತಿ, ಮಡೆಸ್ನಾನ ಮುಂತಾದವುಗಳನ್ನು ಪತ್ರಿಕೆಯಲ್ಲಿ ಬರೆದು ಸಮಾಜದಲ್ಲಿ ಬದಲಾವಣೆಗೆ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಲೋಕದಲ್ಲೂ ಸಂಚರಿಸಿರುವ ಇವರು, ಐದು ಕಥಾ ಸಂಕಲನ, ಒಂಬತ್ತು ಕಾದಂಬರಿ, ವ್ಯಕ್ತಿ ಚಿತ್ರಗಳು, ಅಂಕಣ ಬರಹಗಳು ಸೇರಿದಂತೆ 51ಕ್ಕೂ ಹೆಚ್ಚು ಕೃತಿಗಳು ಬರೆದಿದ್ದಾರೆ. `ಪ್ರಜಾವಾಣಿ' ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ 'ಹಾಯಿದೋಣಿ' ಮತ್ತು 'ಅಪ್ಪನ ಪರ್ಪಂಚ' ಮಲೆನಾಡಿನ ದಟ್ಟ ಸಂವೇದನೆಗಳನ್ನುಓದುಗರಿಗೆ ತಿಳಿಸಿಕೊಟಿದ್ದಾರೆ. ಅಲ್ಲದೇ, ಲಕ್ಷಣ ಕೊಡಸೆ ಅವರ ಸಾಹಿತ್ಯ ಕುರಿತು ಇಬ್ಬರು ವಿದ್ಯಾರ್ಥಿಗಳು ಪಿಎಚ್‌ಡಿ ಮಾಡಿದ್ದಾರೆ.

ಇವರಿಗೆ ಸಂದೇಶ ಮಾಧ್ಯಮ ಪ್ರಶಸ್ತಿ, ಮಾಧ್ಯಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಿಟ್ಟಪ್ಪಗೌಡ ದತ್ತಿ ಪ್ರಶಸ್ತಿಗಳು ಲಭಿಸಿವೆ.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...