ಮನಸ್ಸನ್ನು ಎಚ್ಚರಿಸುವ ಕವಿತೆಗಳು ರಚಿಸಿ: ಡಾ. ಡ್ಯಾನಿಯಲ್ ಸಲಹೆ

Date: 22-01-2021

Location: ಬೆಂಗಳೂರು


ಮನಸ್ಸನ್ನು ಎಚ್ಚರಿಸುವ ಕವಿತೆಗಳು ರಚನೆಯಾಗಬೇಕು ಎಂದು ಬೆಂಗಳೂರಿನ ಸಂತ ಜೊಸೇಫರ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಡ್ಯಾನಿಯಲ್ ಫರ್ನಾಂಡಿಸ್ ಬರಹಗಾರರಿಗೆ ಸಲಹೆ ನೀಡಿದರು.

ಕಾಲೇಜಿನ ವಿದ್ಯಾರ್ಥಿಗಳ ಕನ್ನಡ ಸಂಘ ಏರ್ಪಡಿಸಿದ್ದ "ಜೀವನ ಪ್ರೀತಿಗೆ ಗಜಲ್ ಉಪನ್ಯಾಸ ಮಾಲಿಕೆ ಮತ್ತು ಗಿರಿರಾಜನ ಪದ್ಯಗಳು" ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲಿ ಮನಸ್ಸು ಇದ್ದೇ ಇರುತ್ತದೆ. ವಿಶೇಷವಾಗಿ ಯುವ ಮನಸ್ಸುಗಳನ್ನು ದೇಶಾಭೀಮಾನದತ್ತ ತುಡಿಯುವ ಕವಿತೆಗಳು ರಚನೆಯಾಗಬೇಕು. ಯುವಕರು ಎಚ್ಚರಗೊಂಡರೆ ದೇಶದ ಭವಿಷ್ಯವೂ ಉಜ್ವಲವಾಗಿರುತ್ತದೆ ಎಂದರು.

ಕನಕಗಿರಿಯ ಗಜಲ್ ಕವಿ ಅಲ್ಲಾಗಿರಿರಾಜ್ ‘ಗಜಲ್ಗಳ ಕುರಿತು ಉಪನ್ಯಾಸ ನೀಡಿ, ಗಜಲ್ ಕಾವ್ಯವು ಮನುಷ್ಯ ಪ್ರೀತಿ ಮತ್ತು ಬದುಕು ಕುರಿತು ಜನಸಾಮಾನ್ಯರ ಹಾಗೂ ನೊಂದವರ ಎದೆಯ ಹಾಡಾಗಿ ಜನಪ್ರಿಯವಾಗಲು ಕಾರಣವಾಯಿತು ಹೀಗೆ ಕಾವ್ಯವು ಓದುಗರನ್ನು ಸೃಷ್ಟಿಸಬೇಕೇ ಹೊರತು ಭಾವೈಕ್ಯತೆಗೆ ಭಂಗ ತರಬಾರದು ಎಂದರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗ ಮುಖ್ಯಸ್ಥ ಡಾ.ಟಿ.ಹೆಚ್.ಲವಕುಮಾರ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದು ಗಜಲ್ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಡಾ.ಟಿ. ಹನುಮಂತರಾಯ ಅವರು ‘ಗಿರಿರಾಜನ ಪದ್ಯಗಳು’ ಪುಸ್ತಕವನ್ನು ಪರಿಚಯಿಸಿದರು.

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...