ಮಾನವೀಯ ಸಂಬಂಧ ಬೆಸೆಯುವ  ಕವಿತೆಗಳು ಬೇಕು: ರಾಗಂ ಆಶಯ

Date: 07-03-2021

Location: ಹುನಗುಂದ (ಜಿ: ಬಾಗಲಕೋಟ)


ಮಾನವೀಯ ಸಂಬಂಧಗಳನ್ನು ಬೆಸೆಯುವ ಕವಿತೆಗಳು ಬೇಕು. ಅದು ಕವಿ-ಸಾಹಿತಿಗಳ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ ಎಂದು ಸಾಹಿತಿ ರಾಜಶೇಖರ ಮಠಪತಿ ಆಶಿಸಿದರು

ಬಾಗಲಕೋಟೆ ಜಿಲ್ಲೆಯ ಹುನಗುಂದದ ಕರ್ನಾಟಕ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಸಾಹಿತಿ ಸಿದ್ಧಲಿಂಗಪ್ಪ ಬೀಳಗಿ ಅವರ ‘ಹಿಮದಡಿಯ ಮೌನ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಸಂಸ್ಕೃತಿಯನ್ನು ಕಟ್ಟುವ ಸಾಮರ್ಥ್ಯ ಕಾವ್ಯಕ್ಕಿದೆ. ಕಾವ್ಯ ಬರಹವೆಂದರೆ ಧ್ಯಾನಕ್ಕೆ ಸಮಾನ. ತಪಸ್ಸಿನಷ್ಟು ಪರಿಶ್ರಮ ಅಗತ್ಯ. ಮಾನವೀಯ ನೆಲೆಯಲ್ಲಿರದ ಕಾವ್ಯವು ಅಪ್ರಯೋಜಕ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹೇಶ ತಪಶೆಟ್ಟಿ ಮಾತನಾಡಿ, ಕಾಲದೊಂದಿಗೆ ಬರಹ ಮಿಡಿಯಬೇಕು. ಆಗಲೇ, ಸಾಹಿತ್ಯಕ್ಕೆ ಸತ್ವವೂ ಕೂಡಿಕೊಳ್ಳುತ್ತದೆ. ಸತ್ವಯುತವಾದ ಇಂತಹ ಸಾಹಿತ್ಯಕ್ಕೆ ಸಾವಿಲ್ಲ, ಕವಿಗೆ ಈ ಸಮಯ ಪ್ರಜ್ಞೆ ಇರಬೇಕು ಎಂದು ಹೇಳಿದರು.ಎಸ್.ಕೆ. ಹೂಲಗೇರಿ ನಿರೂಪಿಸಿದರು.

ಸಾಹಿತಿ ಮುರ್ತುಜಾ ಬೇಗಂ ಕೊಡಗಲಿ ಅವರು ‘ಹಿಮದಡಿಯ ಕುದಿಮೌನ ಕೃತಿಯನ್ನು ಪರಿಚಯಿಸಿದರು. ಸುಮಂಗಲಾ ಪೂಜಾರಿ ಪ್ರಾರ್ಥಿಸಿದರು. ಲೇಖಕ -ಕವಿ ಸಿದ್ಧಲಿಂಗಪ್ಪ ಬೀಳಗಿ ಸ್ವಾಗತಿಸಿದರು. ಎಸ್ಕೆ ಕೊನೆಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು.

 

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...