ಮಣಿಕಂಠ ಗೊದಮನಿ ಗೆ 'ಡಾ. ಪ್ರಹ್ಲಾದ ಅಗಸನಕಟ್ಟೆ' ವಿದ್ಯಾರ್ಥಿ ಕಥಾ ಬಹುಮಾನ

Date: 08-06-2025

Location: ಬೆಂಗಳೂರು


2025 ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನವು ಮಣಿಕಂಠ ಗೊದಮನಿ ಯವರ 'ನೇಣು' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. 'ಈ ಕಥೆಯು ಸಮಾಜದಾಳದಲ್ಲಿ ಇನ್ನೂ ಲಾವಾರಸದಂತೆ ಕುದಿಯುತ್ತಲೇ ಇರುವ ಜಾತೀಯತೆಯ ಭ್ರಷ್ಟ ವ್ಯವಸ್ಥೆಯು ತೀವ್ರ ಭಾವಪೂರ್ಣ ಕಥನವಾಗಿ ಸಹೃದಯರನ್ನು ಪರಿಣಾಮಕಾರಿಯಾಗಿ ತಟ್ಟುವುದರ ಮೂಲಕ ಯಶಸ್ವಿಯಾಗಿದೆ' ಎಂದು ಸ್ಪರ್ಧೆಯ ತೀರ್ಪುಗಾರರಾದ ಮಹಾಂತಪ್ಪ ನಂದೂರ ಹಾಗೂ ಡಾ. ರಂಗನಾಥ ಕಂಟನಕುಂಟೆ ಅಭಿಪ್ರಾಯಪಟ್ಟಿದ್ದಾರೆ.

ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಶ್ರೀಮತಿ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆವ ಸತತ ಎಂಟನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಜುಲೈ ತಿಂಗಳಲ್ಲಿ ನೆರವೇರಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಥೆಗಾರನ ಪರಿಚಯ:

ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ-೨೦೨೫ ಪಡೆದ ಮಣಿಕಂಠ ಗೊದಮನಿ ಪ್ರಸ್ತುತ ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ೨೦೨೧ ರಲ್ಲಿ ಹೊರಬಂದ ಇವರ 'ಉರಿದೊಡಲ ಬೇಗೆ' ಕವನ ಸಂಕಲನಕ್ಕೆ ವಿದ್ಯಾಸಾಗರ ಬಾಲ ಪುರಸ್ಕಾರ ದೊರೆತಿದೆ. ಸುರಗಿ ಪ್ರತಿಷ್ಠಾನ ಕವನ ಸ್ಪರ್ಧೆಯಲ್ಲೂ ಬಹುಮಾನಿತರಾಗಿದ್ದಾರೆ.

MORE NEWS

ಎಸ್. ಜಿತೇಂದ್ರ ಕುಮಾರ್ ಗೆ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ

24-06-2025 ಬೆಂಗಳೂರು

ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಕೆ.ಜೆ. ಪಾರ್ಶ್ವನಾಥ್ ತಮ್ಮ ತಂದೆತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಕಂಬತ್ತಳ...

ಸಂಸ್ಕೃತಿ ಸಂವರ್ಧನೆಯಲ್ಲಿ ಹಂಸಜ್ಯೋತಿ ಪಾತ್ರ ಹಿರಿದು; ಶ್ರೀನಿವಾಸ ಜಿ ಕಪ್ಪಣ್ಣ

23-06-2025 ಬೆಂಗಳೂರು

ಬೆಂಗಳೂರು: ಹಂಸ ಜ್ಯೋತಿ ಟ್ರಸ್ಟ್ ಆಯೋಜನೆಯಲ್ಲಿ ಹಂಸ ಜ್ಯೋತಿಯ ಸುವರ್ಣ ಸಂಭ್ರಮಾಚರಣೆ ; ಹಂಸ ಸಾಂಸ್ಕೃತಿಕ ಸಂಭ್ರಮ ಅಂತರ...

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಪುನರಾಯ್ಕೆ

23-06-2025 ಬೆಂಗಳೂರು

ಬೆಂಗಳೂರು: ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್...